ಚಳ್ಳಕೆರೆ ನ್ಯೂಸ್ :
ಅದ್ದೂರಿಯಾಗಿ ಜರುಗಿದ ಮಾರಮ್ಮ ಸಿಡಿ ಉತ್ಸವ
ತಾಲೂಕಿನ ಉರ್ಥಾಳ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆ
ಹಿನ್ನೆಲೆಯಲ್ಲಿ ಮಾರಮ್ಮ ಸಿಡಿ ಉತ್ಸವ ಕಾರ್ಯಕ್ರಮ
ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಸುಮಾರು ಮೂರು
ದಿನಗಳಿಂದ ನಡೆದ ಈ ಜಾತ್ರೆಗೆ ಇಂದು ತೆರೆ ಬಿದ್ದಿದ್ದು. ಜಾತ್ರೆಯಲ್ಲಿ
ರಥೋತ್ಸವ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಸೇರಿದಂತೆ ವಿವಿಧ
ಧಾರ್ಮಿಕ ಕಾರ್ಯ ನಡೆದವು.
ಜಾತ್ರೆಯ ಕೊನೆಯ ದಿನ ಮಾರಮ್ಮ
ಸಿಡಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ
ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ
ಭಾಗಿಯಾದರು