ಚಳ್ಳಕೆರೆ ನ್ಯೂಸ್ :
ವಚನ ಸಂವಿಧಾನದ ಗ್ರಂಥ ಇವತ್ತಿನ ರಾಜಕಾರಣಿಗಳು
ಪ್ರತಿಯೊಬ್ಬರೂ ಓದಬೇಕು
ಭಾರತ ಸಂವಿಧಾನದ ಆಶಯಗಳ ವಚನ ಸಾಹಿತ್ಯದಲ್ಲಿದೆ
ಬಸವಣ್ಣನವರದ್ದು ಪ್ರಭುತ್ವದ ಕಾಲ.
ಆ ಕಾಲದಲ್ಲಿ ಪ್ರಜಾಪ್ರಭುತ್ವದ
ಮೌಲ್ಯಗಳನ್ನು ಎತ್ತಿ ಹಿಡಿಯುವುದು ತುಂಬಾ ಕಷ್ಟವಾಗಿತ್ತು
ಎಂದು ಜಗದ್ಗುರು ತೋಂಟದಾರ್ಯ ಸಿದ್ದರಾಮಯ್ಯ ಸ್ವಾಮೀಜಿ
ಹೇಳಿದರು.
ಸಾಣೇಹಳ್ಳಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಅವರು ಮಾತನಾಡಿ,
ಪ್ರಜಾಪ್ರಭುತ್ವದ ಜೊತೆಗೆ ಹೊಂದಿಕೊಂಡು
ಧೀಮಂತಿಕೆ ವಿನಯವಂತಿಕೆಯಿಂದ ಪ್ರಜಾಪ್ರಭುತ್ವವನ್ನು
ಬಸವಣ್ಣನವರು ಜಾರಿಗೆ ತಂದರು ಎಂದರು.