ಚಳ್ಳಕೆರೆ ನ್ಯೂಸ್ :

ಚಳ್ಳಕೆರೆ ತಾಲ್ಲೂಕಿನ ಸಿಐಟಿಯು ನ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಮೇ 1ರಂದು ಎಪಿಎಂಸಿ ಯಾರ್ಡ್ ಬಳಿರುವ ಲೋಡಿಂಗ್ ಮತ್ತು ಆನ್ ಲೋಡಿಂಗ್ ಹಮಾಲರ ಕಚೇರಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರು ಸೇರಿ “ಮೇ 1 “ದಿನಾಚರಣೆಯ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು.

ಕಾರ್ಯಕ್ರಮದ ಧ್ವಜಾರೋಹಣ ಟಿ. ನಿಂಗಣ್ಣ ನವರು ಮಾಡಿದರು.

ಸಭೆಯಲ್ಲಿ :ಟಿ ತಿಪ್ಪೇಸ್ವಾಮಿ ರವರು ಉದ್ಘಾಟನೆಯಲ್ಲಿ ಮಾತನಾಡುತ್ತ ಭಾರತದಲ್ಲಿ ಮೊದಲ “ಮೇ1 ” ದಿನ ಆಚರಿಸಿದ್ದು 1923ರಲ್ಲಿ ಕಾರ್ಮಿಕ ಮುಖಂಡ ಸಿಂಗಾರುವೇಲು ಚಟ್ಟಿಯಾರ್ ನೇತೃತ್ವದಲ್ಲಿ ಮದ್ರಾಸಿನ ಕಡಲ ತೀರದಲ್ಲಿ ನಡೆಯಿತು.

ಮೇ 1ಇಡೀ ಜಗತ್ತಿನದ್ಯಂತ ಆಚರಿಸಲ್ಪಡುವ ಕಾರ್ಮಿಕರ ದಿನಾಚರಣೆ ಅದೊಂದು ಅಂತರ್ ರಾಷ್ಟ್ರೀಯ ಮಹಾತ್ವದ ದಿನ ಮಾತ್ರವಲ್ಲ ಚರಿತ್ರಿಕವಾಗಿ ಒಂದು ದೀರ್ಘ ಚರಿತ್ರೆಯನ್ನೇ ತನ್ನೊಡಲನಲ್ಲಿ ಇಟ್ಟು ಕೊಂಡಿರುವ ದಿನ.

ಅದು 1886ರ ಮೇ 4 ಮಂಗಳವಾರ ಸುಮಾರು ರಾತ್ರಿ ಎಂತೋವರೇ ಗಂಟೆ ಆಮೇರಿಕದ ಚಿಕಗೋ ನಗರದ ಹೇ ಮಾರ್ಕೆಟ್ ಚೌಕದ ಬಳಿ ಸುಮಾರು 2500 ಜನರು ನಾರೆದಿದ್ದ ಒಂದು ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಕಾರ್ಮಿಕ ಕಾರ್ಮಿಕ ಪತ್ರಿಕೆಯೊಂದರ ಸಂಪಾದಕ ಆಗಸ್ಟ್ ಸ್ಟೈಸ್ ಆಗಷ್ಟೇ ಎಂದರು.

ಈ ಸಭೆಯ ಹಿಂದಿನ ದಿನದಷ್ಟೇ, ಮ್ಯಾಕ್ ಕಾರ್ಮಿಕ ರಿಪೇರ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ನಿರತರ ಮುಷ್ಕರ ನಡೆವಾಗ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದರು.

ಅದನ್ನು ಖಂಡಿಸಿ ಚಿಕಗೋ ದ ಈ ಹೇ ಮಾರ್ಕೆಟ್ ಚೌಕದಲ್ಲಿ ಸಭೆಯಲ್ಲಿ ನಡೆದ ಗಟನೆಯಲ್ಲಿ ಸಾವಿರಾರು ಕಾರ್ಮಿಕರು ಪ್ರಣಾತ್ಯಾಗ ಮದ್ದಿದ್ದರು ಇದರ ಚರಿತ್ರೆಯ ಹೇಳುತ್ತಾ ಹೋದರೆ ಸಾಕಷ್ಟು ಇದೆ.

ಮುಂದುವರಿದು ಮಾತನಾಡುತ್ತ ನಮ್ಮ ದೇಶದ ಸಂವಿಧಾನ ರಚಿಸುವಾಗ ಡಾ :ಬಿ. ಆರ್. ಅಂಬೇಡ್ಕರ್ ರವರು ಕಾರ್ಮಿಕರ ಪರವಾದ ಸುಮಾರು 43 ಕಾರ್ಮಿಕರ ಕಾನೂನುಗಳನ್ನು ಮಾಡಿದ್ದರು.

ಈಗ ಕೇಂದ ಸರಕಾರ 43ಕಾನೂನುಗಳ ಬದಲಾಗಿ ಕೇವಲ 4ಸಂಹಿತೆಗಳನ್ನಾಗಿ ಮಾಡಿ ಇದರ ಪರಿಣಾಮವಾಗಿ ಕಾರ್ಮಿಕರು 8ಗಂಟೆ ಕೆಲಸದ ಬದಲು 12ಗಂಟೆ ಕೆಲಸ ಮಾಡಬೇಕಾಗಿದೆ ಆದ್ದರಿಂದ ನಾವು ಹೇಳುವುದೇನೆಂದರೆ ಕಾಮುವಾದ ಹಾಗೂ ಕರ್ಪೂರೇಟರ್ ಪರವಾಗಿರುವಂತ ಸಖ್ಯಾತೆಯನ್ನು ಕಿತ್ತೆಸಿಯಬೇಕಾಗಿದೆ ಎಂದು ಸಭೆಯಲ್ಲಿ ಅಗ್ರಹಿಸಿದರು.

ಈ ಸಭೆಯಲ್ಲಿ ದುರ್ಗಾವರ ಬೋರಯ್ಯ, ಈ ನಾಗರಾಜ್, H. O. ನಾಗರಾಜ್, ಪಿ. ಸತೀಶ್, ಕೆ. ನಾಗರಾಜ್, ಕೆ. ಬಿ. ಜಯಣ್ಣ ಕೆ. ಪ್ರಭು ಇನ್ನೂ ಅನೇಕ ಮುಖಂಡರು ಭಾಗವಹಿಸಿ ಮಾತನಾಡಿದರು.

Namma Challakere Local News
error: Content is protected !!