ಚಳ್ಳಕೆರೆ :
ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ಕಳಸಾರೋಹಣ ಮತ್ತು ರಥೋತ್ಸವ ಅದ್ದೂರಿಯಾಗಿ ಜರುಗಿತು .
ಶ್ರೀ ಆಂಜನೇಯ ಸ್ವಾಮಿ ಕೃಪೆಯಿಂದ ಇಂದು ಭಕ್ತಿಯ ಪರಾಕಾಷ್ಠೆ ಮನಮನಗಳಲ್ಲಿ ಮತ್ತು ಮನೆಮನೆಗಳಲ್ಲಿ ತುಂಬಿಕೊಂಡಿದ್ದು
ಈ ಕಾರಣದಿಂದಾಗಿ ನಮ್ಮ ಓಬಯ್ಯನಹಟ್ಟಿ ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಬೇರೂರಿದೆ ಎಂದು ತಿಮ್ಮಪ್ಪನಯ್ಯಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಓ ಓಬಣ್ಣ ಹೇಳಿದರು.
ನಂತರ ಮಾತನಾಡಿದ ಅವರು
ಕಳೆದ ಎರಡು ದಿನಗಳಿಂದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆ ಕಳಸ ಸ್ಥಾಪನೆ ರಥೋತ್ಸವ ಸೇರಿದಂತೆ ಗ್ರಾಮದಲ್ಲಿ ಶಾಂತಿ ಹಬ್ಬದ ವಾತಾವರಣ ತರಳು ತೋರಣಗಳಿಂದ ಸಿಂಗರಿಸಿದ ಇಡೀ ಗ್ರಾಮದಲ್ಲಿ ಭಕ್ತಿಯ ಭಾವವೇ ತುಂಬಿದಂತಾಗಿದೆ
ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಕಾರ್ಯಕ್ರಮಕ್ಕೆ ಪಾಲ್ಗೊಂಡು ಶ್ರೀ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ರಥೋತ್ಸವ ಸಂಭ್ರಮದಿಂದ ಆಚರಿಸಲಾಯಿತು .
ಇನ್ನೂ ಜಾತ್ರೆಗೆ ಬಂದಂತಹ ಸುಮಾರು ಮೂರರಿಂದ ನಾಲ್ಕು ಸಾವಿರ ಭಕ್ತಾದಿಗಳಿಗೆ ಅನ್ನದಾಸೋಹ ನಡೆಸುವುದರ ಮೂಲಕ ನಮ್ಮ ಗ್ರಾಮಕ್ಕೆ ಭಕ್ತಿ ಪೂರ್ವಕವಾಗಿ ನಮನ ಸಲ್ಲಿಸಲಾಯಿತು
ನಮ್ಮಲ್ಲಿ ದೇವಸ್ಥಾನಗಳು ನೆಲಸಿರುವುದರಿಂದ ಭಯ ಭಕ್ತಿ ಮತ್ತು ಶ್ರದ್ದೆ ಮನೆ ಮಾಡಿದ್ದೂ ಇವುಗಳು ಮನ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ ನಮ್ಮಲ್ಲಿರುವಂತಹ ನಕಾರಾತ್ಮಕವಾದ ಆಲೋಚನೆಗಳನ್ನು ಕೈಬಿಟ್ಟು ಸಕಾರಾತ್ಮಕವಾಗಿ ನಮ್ಮಗಳ ಚಿಂತನೆಗಳು ಮತ್ತು ದೃಷ್ಟಿಕೋನಗಳು ಇದ್ದಲ್ಲಿ ನಮ್ಮ ಬದುಕಿನಲ್ಲಿ ಯಶಸ್ಸುಗಳಿಸಲು ಯುವ ಸಹಕಾರಿಯಾಗುತ್ತದೆ ಓಬಯ್ಯನಹಟ್ಟಿ ಗ್ರಾಮಸ್ಥರು ಈ ಒಂದು ಸತ್ಕಾರ್ಯದಲ್ಲಿ ತೊಡಗಿರುವುದು ಇಡೀ ಗ್ರಾಮದ ಜನತೆಗೆ ಒಂದು ದೈವಿಕ ಶಕ್ತಿ ನೀಡಿದಂತಾಗಿದೆ ಸತ್ಕಾರ್ಯದ ಮುಖಾಂತರ ಸಮಸ್ತ ಓಬಯ್ಯನಹಟ್ಟಿ ಗ್ರಾಮದಲ್ಲಿ ಈ ವರ್ಷ ಮಳೆ ಬೆಳೆ ಮತ್ತು ಎಲ್ಲರ ಆರೋಗ್ಯ ವೃದ್ಧಿಸಲಿ ಶಾಂತಿ ಮತ್ತು ನೆಮ್ಮದಿಯು ಎಲ್ಲರಲ್ಲಿ ಮನೆ ಮಾಡಲಿ ಎಂದು ಶುಭ ಕೋರಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಾಲಮ್ಮ ಜಿ ಬೋರಯ್ಯ ,ಮತ್ತು ಸದಸ್ಯರಾದ ಸೋಮಣ್ಣ, ಕೆ ಎಸ್ ಮಂಜಣ್ಣ ಗಜ್ಜುಗಾನಹಳ್ಳಿ, ಬಸಕ್ಕ ತಿಪ್ಪೇಸ್ವಾಮಿ ,ಗೀತಮ್ಮ ಸಿ ಕುಮಾರ್, ಗ್ರಾಮಸ್ಥರಾದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪರಮೇಶ್, ಕರಡಿ ಚಿನ್ನ ಮಲ್ಲಯ್ಯ, ಗೊಂಚಿಗರ್ ಸಣ್ಣ ಬೋರಯ್ಯ, ದಳವಾಯಿ ,ಮಾದೇವಪ್ಪ, ಕಾಕ ಸುರಯ್ಯ, ಪ್ರೊಫೆಸರ್ ಡಾ ಗಿರೀಶ್, ಎಲ್ ಅಮರೇಶ್, ಯುವ ಮುಖಂಡ ಅನಿಲ್ ಕುಮಾರ್ ಗಜ್ಜುಗಾನಹಳ್ಳಿ, ಗುಡ್ಡದ ಮಲ್ಲಯ್ಯ ಮಂಜು ಜೆಸಿಬಿ ಸೇರಿದಂತೆ ಸಮಸ್ತ ಓಬಯ್ಯನಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು