ಮಳೆ ಬೆಳಗಾಗಿ ಚಳ್ಳಕೆರಮ್ಮ ಹಾಗೂ ಉಡಿಸಲಮ್ಮ ದೇವರ ಮೆರವಣಿಗೆ ,

ಚಳ್ಳಕೆರೆ
9ನೇ ವಾರ್ಡಿನ ಎಲ್ಲ ಸಮುದಾಯ ಹಾಗೂ ವಿಶ್ವಕರ್ಮ ಸಮುದಾಯದಿಂದ ದೇವತಾ ಮೆರವಣಿಗೆಯ ಕಾರ್ಯವನ್ನು ನೆರವೇರಿಸಲಾಯಿತು ಎಂದು 9ನೇ ವಾರ್ಡಿನ ಮೆಂಬರ ವಿ ವೈ ಪ್ರಮೋದ್ ಹೇಳಿದರು

ಇವರು ನಗರದ ಶಾಂತಿನಗರದಲ್ಲಿ ಬರುವ ಗಣಪತಿ ದೇವಸ್ಥಾನದಲ್ಲಿ ಚಳ್ಳಕೆರಮ್ಮ ಹಾಗೂ ಕೂಡಸಲಮ್ಮ ದೇವತೆಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಇವರು

ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿ ಹಬ್ಬದ ಹೊಸ ಸಂವತ್ಸರ ಆರಂಭದಲ್ಲಿ ದೇವತೆಯ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ನಮ್ಮ ಶಾಂತಿನಗರದಲ್ಲಿ ಕಳೆದ ಒಂದು ವರ್ಷದ ಹಿಂದೆ ಯುವಕ ಯುವತಿಯರು ಸರಣಿ ಸಾವಿನಿಂದ ಬೇಸತ್ತು ದೇವತಾ ಮೊರೆ ಹೋಗಿದ್ದಾರೆ ಈ ಹಿನ್ನಲೆಯಲ್ಲಿ ಚಳ್ಳಕೆರೆಮ್ಮ ಹಾಗೂ ಉಡಸಲಮ್ಮ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು ,

ಅಲ್ಲದೆ ನಾಡಿನಲ್ಲಿ ಮಳೆ ಬೆಳೆ ಇಲ್ಲದೆ ಜನಸಾಮಾನ್ಯರು ತತ್ತರಿಸಿ ಹೋದ ಹಿನ್ನೆಲೆಯಲ್ಲಿ ಈ ದೇವತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದು ಅಲ್ಲದೆ ಶಾಂತಿನಗರದ ಎಲ್ಲ ಸಮುದಾಯದವರು ತನು ಮನ ಧನ ಸಹಾಯದಿಂದ ಮಂಗಳವಾರ ಸಂಜೆಯಿಂದ ವೀರಭದ್ರ ದೇವಸ್ಥಾನದಿಂದ ಗುಡಿಸಲಮ್ಮ ದೇವಸ್ಥಾನಕ್ಕೆ ಬಂದು ಹೂವಿನ ಅಲಂಕಾರ ತಮಟೆ ವಾದ್ಯದೊಂದಿಗೆ ಶಾಂತಿನಗರದ ಸುತ್ತಲೂ ದೇವತೆಯ ವಿಗ್ರಹವನ್ನು ಪ್ರದರ್ಶಿಸಲಾಯಿತು ಇದು ಅಲ್ಲದೆ ರಾತ್ರಿ ಸಾವಿರಾರು ಭಕ್ತ ಸಮ್ಮುಖದಲ್ಲಿ ಪೂಜೆ ನೆರವೇರಿಸಿ ಅನ್ನ ಸಂತರ್ಪಣೆ ಮಾಡಲಾಗಿತ್ತು ಎಂದು ತಿಳಿಸಿದರು

ಇನ್ನು ಈ ಮೆರವಣಿಗೆ ಸಂದರ್ಭದಲ್ಲಿ ವಿಶ್ವಕರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು ,

ಇನ್ನು ಈ ವೇಳೆ ಆರ್ ಪ್ರಸನ್ನ ಕುಮಾರ್ CE ಪ್ರಸನ್ನ ಆಚಾರ್, ಶೈಲೇಂದ್ರ ಚಾರ್, ರಾಜೇಶ್, ಯುವಕ ಸಂಘದ ಅಧ್ಯಕ್ಷ ವೆಂಕಟೇಶ ಆಚಾರ್, ರಮೇಶ್ ನಾಯಕ್ ,ಮಹಿಳೆಯರಾದ ರಾಜಕ್ಕ ಸುಜಾತ ಸುಮ್ಮಕ್ಕ ಭಾರತಿ ಸೇರಿದಂತೆ ಅನೇಕ ಮಹಿಳೆಯರು ಭಾಗಿಯಾಗಿದ್ದರು,

About The Author

Namma Challakere Local News
error: Content is protected !!