ಸ್ಕೂಟಿಯಲ್ಲಿ ಇಟ್ಟಿದ್ದ ಒಂದು ಲಕ್ಷ ಹಣ ಕಳ್ಳರು ದೋಚಿರುವ ಘಟನೆ ಚಳ್ಳಕೆರೆ ನಗರದಲ್ಲಿ ನಡೆದ ಘಟನೆ

ಚಳ್ಳಕೆರೆ
ಬೈಕ್ ಡಿಕ್ಕಿಯಲ್ಲಿಟ್ಟಿದ್ದ ೧ ಲಕ್ಷ ಹಣವನ್ನು ದೋಚಿರುವ ಘಟನೆ ನಗರದ ನಗರಸಭೆ ಮುಂಭಾಗದಲ್ಲಿ ಸೋಮವಾರ ನಡೆದಿದೆ.

ನಗರದ ನಗರದ ಲಕ್ಷ್ಮಿ ನರ್ಸಿಂಗ್ ಹೋಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ ಹಣ ಕಳೆದುಕೊಂಡ ನತದೃಷ್ಠ,

ನಗರದ ಕೆನರಾ ಬ್ಯಾಂಕ್ ಇಂದ ೧ ಲಕ್ಷ ಹಣವನ್ನು ಬಿಡಿಸಿಕೊಂಡು ತನ್ನ ಬೈಕ್ ನ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದಾನೆ,

ಕೆಲಸದ ನಿಮಿತ್ತ ನಗರ ಸಭೆಗೆ ತೆರಳಿದ್ದಾನೆ. ನಂತರ ನಗರಸಭೆ ಮುಂಭಾಗ ಬೈಕ್ ನಿಲುಗಡೆ ಮಾಡಿದ್ದಾನೆ ಓಳಗಡೆ ಹೋಗಿ ಬರುವಷ್ಠರಲ್ಲಿ ಬೈಕ್ ನಲ್ಲಿದ್ದ ಹಣವನ್ನು ದೋಚಿರುವುದು ಬೆಳಕಿಗೆ ಬಂದಿದೆ.

ಬೈಕ್ ನಲ್ಲಿದ್ದ 1 ಲಕ್ಷ ಹಣ ಹಣವನ್ನು ದೋಚಿರುವ ಬಗ್ಗೆ ನಗರಸಭೆಯಲ್ಲಿರುವ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಕಳ್ಳತನ ದೃಶ್ಯಗಳು ಸೆರೆಯಾಗದಿರುವುದರಿಂದ ಹಣದ ಮಾಲೀಕ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

About The Author

Namma Challakere Local News
error: Content is protected !!