ಚಳ್ಳಕೆರೆ ನ್ಯೂಸ್ :
ಸರಕಾರ ನೀಡುವ ಬೆಳೆಪರಿಹಾರ ಅವೈಜ್ಞಾನಿಕವಾಗಿದೆ ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ ಇದನ್ನು ಖಂಡಿಸಿ ಮೇ.3 ರಂದು ಅಖಂಡ ಕರ್ನಾಟಕ ರಾಜ್ಯ ರೈತಸಂಘದಿಂದ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪ್ರಕಾಶ್ ಹೇಳಿದ್ದಾರೆ.
ನಮ್ಮಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು ಸರಕಾರ ಬೆಳೆಪರಿಹಾರದಲ್ಲಿ ರೈತರಿಗೆ ಮೋಸಮಾಡುತ್ತಿದೆ.
ಆನೆಗೆ ಅರಕಾಸಿನ ಮಜ್ಜಿಗೆ ನೀಡುವಂತೆ ಎಕರೆಗೆ ಕೇವಲ ಎರಡುವರೆ ಸಾವಿರ ನಿಗಧಿ ಮಾಡಿರುವುದು ಅವೈಜ್ಞಾನಿಕ ಎಂದು ಕಿಡಿಕಾರಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಎರಡು ಗ್ರಾಮ ಪಂಚಾಯತಿ ರೈತರಿಗೆ ಬೆಳೆವಿಮೆ ಬಾರದೆ ಇರುವುದು ಖಂಡನೀಯ, ನೀರುಣಿಸಿದ ಶೇಂಗಾ ಹೊಲದಲ್ಲಿ ಬೆಳೆ ಪರೀಕ್ಷೆ ಮಾಡಿದ ಅಧಿಕಾರಿಗಳ ನಡೆ ಸರಿಯಲ್ಲ. ಇದರಿಂದ ನೂರಾರು ರೈತರಿಗೆ ಬೆಳೆವಿಮೆ ಸಿಗದೆ ಕಂಗಾಲಗಿದ್ದಾರೆ.
ಇನ್ನೂ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರ್ ರವರು ಮಧ್ಯಸ್ಥಿಕೆ ವಹಸಿ ನೊಂದ ರೈತರಿಗೆ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.