ಚಳ್ಳಕೆರೆ : ಬಯಲು ಸೀಮೆಯಲ್ಲಿ ಶಿಕ್ಷಣದ ಕ್ರಾಂತಿ ನಡೆಸಲು ನಿರಂತರವಾಗಿ ಶಿಕ್ಷಣಕ್ಕೆ ಹೆಚ್ಚು ಪ್ರಾಧನ್ಯತೆ ನೀಡುವ ಸ್ಥಳೀಯ ಕ್ಷೇತ್ರದ ಶಾಸಕರು ಇಂದು ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎನ್ನುವುದಕ್ಕೆ ಅವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡಗಳ ಕಾಮಗಾರಿಗೆಳೆ ಸಾಕ್ಷಿಯಾಗಿವೆ.
ಹೌದು ಕ್ಷೇತ್ರ ಪ್ರಗತಿ ಕಾಣಲು ಅದು ವಿದ್ಯಾವಂತರಿಂದ ಮಾತ್ರ ಎನ್ನುವುದು ಅಕ್ಷರ ಸಹ ಸತ್ಯ, ಇದನ್ನು ಮನಗಂಡ ಶಾಸಕ ಟಿ.ರಘುಮೂರ್ತಿ ಶಿಕ್ಷಣಕ್ಕೆ ಮಹತ್ವ ನೀಡಿ ಇಂದು ಕ್ಷೇತ್ರದ ತುಂಬೆಲ್ಲಾ ಶಿಕ್ಷಣಕ್ಕೆ ಕೊಡುಗೆ ನೀಡಿದ್ದಾರೆ
ಅದರಂತೆ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಬೋಧನ ಕೊಠಡಿಗಳು, ಹೆಗ್ಗೆರಿ ತಾಯಮ್ಮ ಶಾಲಾ ಕಟ್ಟಡ, ಬಿಎಂ.ಜಿಹೆಚ್.ಎಸ್‌ಶಾಲಾ ಕಟ್ಟಡ ಈಗೇ ಕ್ಷೇತ್ರದ ತುಂಬೆಲ್ಲಾ ಶಾಲಾ ಕಾಲೇಜುಗಳಿಗೆ ಮಹತ್ವ ನೀಡಿದ್ದಾರೆ.
ಅದರಂತೆ ಇಂದು ನಗರದ ಹೃದಯ ಭಾಗದಲ್ಲಿರುವ ಬಿಸಿನೀರು ಮುದ್ದಪ್ಪ ಪ್ರೌಢಶಾಲೆಯ ನೂತನ ಕೊಠಡಿಗಳ ಕಾಮಗಾರಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮಕ್ಕಳ ವ್ಯಾಸಂಗಕ್ಕೆ ಹೆಚ್ಚು ಹೊತ್ತು ನೀಡಿದ್ದರೆ ಮುಂದಿನ ಯುವ ಪೀಳಿಗೆ ಅಭಿವೃದ್ದಿ ಹೊಂದುತ್ತದೆ ಆದ್ದರಿಂದ ಬೆಳೆಯುವ ಕುಡಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಶಿಕ್ಷಣಕ್ಕೆ ಮಹತ್ವ ನೀಡಿದೆ ಎಂದಿದ್ದಾರೆ.