ಚಳ್ಳಕೆರೆ : ಧಾರ್ಮಿಕ ಪರಂಪರೆಯ ಭವ್ಯ ರಾಷ್ಟ್ರವಾದ ಭಾರತದಲ್ಲಿ ಇಂದು ಭಕ್ತಿಯ ಪರಾಕಾಷ್ಠೆ ಮನಮನಗಳಲ್ಲಿ ಮತ್ತು ಮನೆಮನೆಗಳಲ್ಲಿ ತುಂಬಿಕೊಂಡಿದ್ದು ಈ ಕಾರಣದಿಂದಾಗಿ ನಮ್ಮ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಬೇರೂರಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಅವರು ತಾಲೂಕಿನ ಟಿ.ಎನ್.ಕೋಟೆಯ ಓಬಳಾಪುರದಲ್ಲಿ ಆಂಧ್ರಪ್ರದೇಶದದಿಂದ ಓಬಳಾಪುರಕ್ಕೆ ಆಗಮಿಸಿದ ಶ್ರೀಕ್ಷೇತ್ರ ಶ್ರೀಶೈಲ ಬ್ರಹ್ಮರಂಬಾ ಮಲ್ಲಿಕಾರ್ಜುನ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಂಡು ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ರಥಕ್ಕೆ ಜೆಸಿಪಿ ಮುಖಾಂತರ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿ ಮಾತನಾಡಿದರು,

ನಮ್ಮಲ್ಲಿ ದೇವಸ್ಥಾನಗಳು ನೆಲಸಿರುವುದರಿಂದ ಭಯಭಕ್ತಿ ಮತ್ತು ಶ್ರದ್ದೆಮನೆ ಮಾಡಿದ್ದೂ ಇವುಗಳು ಮನ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ ನಮ್ಮಲ್ಲಿರುವಂತಹ ನಕಾರಾತ್ಮಕವಾದ ಆಲೋಚನೆಗಳನ್ನು ಕೈಬಿಟ್ಟು ಸಕಾರಾತ್ಮಕವಾಗಿ ನಮ್ಮಗಳ ಚಿಂತನೆಗಳು ಮತ್ತು ದೃಷ್ಟಿಕೋನಗಳು ಇದ್ದಲ್ಲಿ ನಮ್ಮ ಬದುಕಿನಲ್ಲಿ ಯಶಸ್ಸುಗಳಿಸಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!