ಚಳ್ಳಕೆರೆ : ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೆವೆ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಎನ್ ಡಿ ಎ ಬಿಜೆಪಿ ಅಭ್ಯರ್ಥಿ ಗೋಂವಿಂದ ಎಂ ಕಾರಜೋಳ ಇವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮತ್ತೆ
ಮೋದಿಯನ್ನುಪ್ರಧಾನ ಮಂತ್ರಿ ಮಾಡಲಾಗುವುದು ಎಂದು ಜೆಡಿಎಸ್
ಮುಖಂಡ ಎಂ.ರವೀಶ್ ಹೇಳಿದರು.
ಅವರು ನಗರದ ಚೆನ್ನಂಗಿ ವೃತ್ತದ ಖಾಸಗಿ ಕಚೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಆಯೋಜಿಸಿದ್ದ
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಚಳ್ಳಕೆರೆಯಲ್ಲಿ ಸುಮಾರು ಒಂದು ಲಕ್ಣದ ಇಪ್ಪತ್ತುಸಾವಿರ ಮತಗಳು ಬಿಜೆಪಿ ಅಭ್ಯರ್ಥಿ ಗೆ ನಿಗಧಿಯಾಗಿವೆ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಿಂತು
ಪರಾಜಿತ ಮೂರು ಅಭ್ಯರ್ಥಿಗಳು ಒಂದಾಗಿದ್ದೆವೆ,
ಯಾವುದೇ
ಬಿನ್ನಾಭಿಪ್ರಾಯಗಳಿಲ್ಲದೆ ವರಿಷ್ಠರ ಆದೇಶದಂತೆ ಬಿಜೆಪಿ, ಜೆಡಿಎಸ್
ಹೊಂದಾಣಿಕೆ ಮಾಡಿಕೊಂಡಿದ್ದು ಈಗಾಗಲೇ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಮತಯಾಚನೆ ಮಾಡಿದ್ದು, ಅಭ್ಯರ್ಥಿ
ಪರ ಮತಯಾಚನೆ ಮಾಡಲು ಮೂರು ಜಿಪಂ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಳಲಾಗಿದೆ.
ಇದೇ ಸೋಮವಾರ ಚಳ್ಳಕೆರೆ ನಗರದಲ್ಲಿ ಬೃಹತ್ ರೋಡ್ ಶೋ ಮಾಡಲಾಗುತ್ತದೆ, ಈ ರೋಡ್ ಶೋಗೆ ಚಿತ್ರನಟಿ ರಾಗಿಣಿ ಆಗಮಿಸಲಿದ್ದಾರೆ ಎಂದಿದ್ದಾರೆ.
ಈಗಾಗಲೆ ಯುವಕರು
ಹಾಗೂ ಕಾರ್ಯಕರ್ತರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ ರಾಜ್ಯದಲ್ಲಿ
28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ನಿಶ್ಚಿತ ಎಂದು ತಿಳಿಸಿದರು
ಬಿಜೆಪಿ ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಸಚಿವರು, ಶಾಸಕರು ಮಾಡಿದ ಕಾರ್ಯಗಳನ್ನು ಹಾಗೂ ಅವರು ಭೂಮಿ ಪೂಜೆ ಮಾಡಿದ ಕಾಮಗಾರಿ ಮುಂದುವರೆದ ಭಾಗ ಮಾಡಿದ್ದಾರೆ ವಿನಃ ಇವರೆ ಮಾಡಿಲ್ಲ. ಇನ್ನೂ
ಕ್ಷೇತ್ರದ ಶಾಸಕ
ಟಿ.ರಘುಮೂರ್ತಿಯವರು ಗೆದ್ದು 11 ವರ್ಷಗಳು ಕಳೆದರೂ ಬಡವರಿಗೆ
ನಿವೇಶನ ಹಾಗೂ ಭೂಮಿ ಸಾಗುವಳಿಗೆ ಪತ್ರ ನೀಡಿಲ್ಲ ಬಿಜೆಪಿ ಶಾಸಕ
ಬಸವರಾಜ್ ಮಂಡಿಮ ಅವಧಿಯಲ್ಲಿ ಬಡವರಿಗೆ ಬಗರ್ ಹುಕುಂ
ಸಾಗುವಳಿ ಪತ್ರ ನೀಡಿದರೆ ,ನನ್ನ ತಂದೆ ತಿಪ್ಪೇಸ್ವಾಮಿ ಯೂ ಬಿಜೆಪಿ ಶಾಸರ
ಅವಧಿಯಲ್ಲಿ ವಾಣಿವಿಲಾಸ ಸಾಗರದಿಂದ ನಗರಕ್ಕೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು.
ಸಣ್ಣನಿರಾವತಿ ಸಚಿವ ಹಾಗೂ ಶಾಸಕರ ಅವಧಿಯಲ್ಲಿ ವೇದಾವತಿ ನದಿಗೆ
ಎರಡು ಬ್ಯಾರೇಜ್ ಗಳನ್ನು ಅಂರ್ಜಲ ರಕ್ಷಣೆಗೆ ನಿರ್ಮಿಸಿದ್ದರು
ಪರಶುರಾಂಪುರ ಸೇರಿದಂತೆ ವಿವಿಧ ಕಡೆ ಬ್ಯಾರೇಜು ನಿರ್ಮಿಸಲು
ಮಂಜುರಾತಿ ಮಾಡಿಸಿದಾಗ ಆಂಧ್ರದವರು ನ್ಯಾಯಾಲದಲ್ಲಿ ಕಾಮಗಾರಿಗೆ
ತಡೆಯಾಜ್ಞೆ ತಂದಾಗು ವಿಳಂಭವಾಗಿದೆ ಮತ್ತೆ ಶಾಸಕ ಟಿ.ರಘುಮೂರ್ತಿ
ಗೆದ್ದನಂತರ ಅವುಗಳನ್ನು ಮುಂದುವರೆಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಬಿಜೆಪಿ ಸರಕಾರ ನಗರೋತ್ಥನ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡಿತ್ತು
ಆದರೆ ಶಾಸಕರು ನಾನೇ ಮಾಡಿದ್ದೇನೆ ಎಂದು ಬೀಗುವುದು ಸರಿಯಲ್ಲ
ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ ದೇಶದ ಜನರೂ
ಸಹ ಮೋದಿಯನ್ನು ದೇಶದ ರಕ್ಷಣೆಗಾಗಿ ಮತ್ತೊಮ್ಮೆ ಆಯ್ಕೆ ಮಾಡುವುದು
ಖಚಿತ ಎಂದರು.
ಬಿಜೆಪಿ ಮುಖಂಡ ಅನಿಲ್ ಕುಮಾರ್ ಮಾತನಾಡಿ, ನಗರದಲ್ಲಿ ಕಟ್ಟಡಗಳಿಗೆ ತುರ್ತಾಗಿ ಕಾಮಗಾರಿ ಮಾಡಿಸಿ ಕಮಿಷನ್ ಪಡೆದು, ಮುಂದುವರೆದ ಭಾಗಕ್ಕೆ ಅನುದಾನ ಇಲ್ಲದೆ ಸೊರಗುತ್ತಿವೆ,
ಚಳ್ಳಕೆರೆ ನಗರದಲ್ಲಿ ಎಲ್ಲಾ ಸಮುದಾಯದ ಭವನಗಳು ಹಾಗೂ ಕಟ್ಟಡಗಳು ನೋಡಿದರೆ ಮುದುಕಿಗೆ ಸೀರಿ ಉಡಿಸಿದಂತೆ ಇವೆ,
ಮುಂದೆ ನೋಡಿದರೆ ಸುಂದರವಾದ ಕಟ್ಟಡಗಳು ಒಳ ಹೋಗಿ ನಡೆದರೆ
ಹಳೆಯ ಕಟ್ಟಡಗಳು ಸಮುದಾಯ ಭವ ನಗಳ ಕಟ್ಟಡಗಳಿಗೆ
ಅನುದಾನ ವಿಲ್ಲದೆ ಅರೆ ಬರೆಯಾಗಿವೆ ಇದು ಸಾರ್ವಜನಿಕ ತೆರಿಗೆ ಹಣ
ಫೋಲಾಗುತ್ತಿದೆ ಮುಖ್ಯ ರಸ್ತೆಗಳು ಸುಂದರವಾಗಿದ್ದರೆ ಸಾಲದು ನಗರದ
ಒಳಗೆ ಸರಿಯಾದ ರಸ್ತೆ, ಚರಂಡಿಗಳಿಲ್ಲದೆ ಗೊಬ್ಬು ನಾರುತ್ತಿವೆ ಇದೇನಾ
ಶಾಸಕರ ಅಭಿವೃದ್ಧಿ ಎಂದು ಪ್ರಶ್ನಿಸಿದ್ದಾರೆ.
ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಸುಮಾರು 25 ಸಾವಿರ ಕೋಟಿ ರೂ.ಗಳನ್ನು ಬಿಟ್ಟಿ ಗ್ಯಾರೆಂಟಿಗಳಿಗೆ ನೀಡುತ್ತಿದ್ದಾರೆ. ಕೆಲವು ಇಲಾಖೆಯ
ಸಿಬ್ಬಂದಿಗಳ ವೇತನ ಬಿಡುಗಡೆಗೆ ಅನುದಾನದ ಕೊರತೆಯಿಂದ
ವಿಳಂಭವಾಗುತ್ತಿದೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದೆ ಬಿಟ್ಟಿ
ಭಾಗ್ಯಗಳಿಗೆ ಅನುದಾನ ಸಂಗ್ರಹಿಸಲು ಹರಸಹಾಸ ಪಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು
ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ . ಸೋಮಶೇಖರ್ ಮಂಡಿಮಠ್, ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಮಾತನಾಡಿದರು.
ಈ ಸಂದರ್ಭದಲ್ಲಿ ಜಯಪಾಲಯಪ್ಪ ಆನಂದಪ್ಪ ಜಯರಾಂ,
ಸಿ.ಎಸ್.ಪ್ರಸಾದ್, ಶಿವಪುತ್ರಪ್ಪ ಶ್ರೀನಿವಾಸ್, ಜಯಣ್ಣ
ಪ್ರಮೋದ್,ಪಾಲಮ್ಮ ಮಂಜುನಾಥ್,ಇತರರಿದ್ದರು.