ಅಂಚೆ ಅಂಚೆ ಮತದಾನ ಸೇವಾಕೇಂದ್ರ : ಮತ ಚಲಾಯಿಸಲು ಏ.23 ಕಡೆಯ ದಿನ ಸೇವಾಕೇಂದ್ರ : ಮತ ಚಲಾಯಿಸಲು ಏ.23 ಕಡೆಯ ದಿನ

ಚಿತ್ರದುರ್ಗ ಏ.22: ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆ ಕಾರ್ಯದಲ್ಲಿ ನಿರತವಾಗಿರುವ ನೌಕರರಿಗೆ, ಮತಚಲಾಯಿಸಲು ಅನುಕೂಲವಾಗುವಂತೆ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತದಾನ ಸೇವಾಕೇಂದ್ರ ತರೆದು ಏಪ್ರಿಲ್ 22 ರವರೆಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದುವರೆಗೂ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತ ಚಲಾಯಿಸಲು ಸಾಧ್ಯವಾಗದಿರುವ ನೌಕರರು ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಮತದಾನ ಸೇವಾ ಕೇಂದ್ರದಲ್ಲಿ ಏಪ್ರಿಲ್ 23 ರಂದು ಮತ ಚಲಾಯಿಸಲು ಕಡೆಯ ಅವಕಾಶ ನೀಡಲಾಗಿದೆ. ನೌಕರರು ಇದರ ಸದುಪಯೋಗ ಪಡೆದುಕೊಂಡು ಮತಚಲಾಯಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

=========== 

About The Author

Namma Challakere Local News
error: Content is protected !!