ಅಗ್ನಿ ಅವಘಡ
ಚಳ್ಳಕೆರೆ: ತಾಲೂಕಿನ ಸೂಜಿ ಮಲ್ಲೇಶ್ವರ ನಗರದಲ್ಲಿ ಖಾಸಗಿ ಖಾಲಿ ಜಾಗ ಒಂದರಲ್ಲಿ ವೆಸ್ಟ್ ಕೇಬಲ್ ವೈರ್ ಗೆ
ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕೆಲಕಾಲ ಆತಂಕ ಮನೆ ಮಾಡಿತ್ತು.
ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ತಕ್ಷಣ ಫೋನ್ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿಅಗ್ನಿಶಾಮಕ ಠಾಣೆಯ ಅಧಿಕಾರಿ ನಿಜಗುಣ , ಸಿಬ್ಬಂದಿಗಳಾದ ವಾಹಿದ್ ನಾಗರಾಜ್ , ಜಬಿವುಲ್ಲಾ , ಚೇತನ್ ಅರವಿಂದ್ ಬೆಂಕಿ ನಂದಿಸಿದರು.