ಚಳ್ಳಕೆರೆ ನ್ಯೂಸ್ : ಸೆಕ್ಟೆರ್ ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಮತಗಟ್ಟೆಗಳ ಸಿಬ್ಬಂದಿಯೊಂದಿಗೆ ಮಾಹಿತಿಒಡೆಯಬೇಕು, ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು
ಸಹಾಯಕ ಚುನಾವಣಾಧಿಕಾರಿ ಬಿ.ಆನಂದ್ ಹೇಳಿದರು.
ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಎಲ್ ಓ ಗಳಿಗೆ ಆಯೋಜಿಸಿದ್ದ ಎಲೆಕ್ಟ್ ವೆರಿಫಿಕೇಷನ್ ಮ್ಯಾಪ್ ಇನ್ನಿತರೆ ಮಾಹಿತಿ ನಿಮ್ಮಲ್ಲಿ ಇರಬೇಕು,
ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು
ಚಲಾವಣೆಯಾಗುವಂತೆ ಹೆಚ್ಚು ಕಾಳಜಿವಹಿಸಬೇಕು.
ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇದೇ
ಏ.26 ರಂದು ಲೋಕಸಭಾ ಚುನಾವಣೆ ಮತದಾನ
ನಡೆಯಲಿದ್ದು ಪ್ರತಿಯೊಬ್ಬರು ಚುನಾವಣೆ ಕರ್ತವ್ಯ ದಲ್ಲಿ ಲೋಪ ಎಸಗದಂತೆ, ಕಾಲ ಕಾಲಕ್ಕೆ ಬರುವ ಮಾಹಿತಿ ಅಧಾರಿಸಿ ಮಾಹಿತಿಯನ್ನು ನಿಮ್ಮ ಮೇಲಿನ ಹಂತದ ಅಧಿಕಾರಿಗಳಿಗೆ ರವಾನಿಸಬೇಕು ಎಂದರು.
ಇನ್ನೂ ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಬಂದರೆ ಕೂಡಲೇ ಮಾಹಿತಿ ತಿಳಿಸಬೇಕು, ಮತದಾನ ದಿನದಂದು ಪ್ರತಿ ಕ್ಷಣದ ಮತದಾನದ ಅಂಕಿ ಅಂಶ ನೀಡುವಾಗ ಗೊಂದಲ ಮಾಡಿಕೊಳ್ಳದೆ ಸರಿಯಾದ ರೀತಿಯಲ್ಲಿ ಮಾಹಿತಿ ತಿಳಿಸಬೇಕು, ಇನ್ನೂ ವಿವಿಪ್ಯಾಡ್ ಇವಿಎಂ ಮಷಿನರಿಗಳ ನಿರ್ವಾಹಣೆ ಜವಾಬ್ದಾರಿ ಕೂಡ ಅಷ್ಟೇ ಮುಖ್ಯ ವಾಗುತ್ತದೆ ಎಂದರು
ಇದೇ ಸಂಧರ್ಭದಲ್ಲಿ ಎಲ್ಲಾ ಹಂತದ ತಾಲೂಕು ಮಟ್ಟದ ಅಧಿಕಾರಿಗಳು ಸೆಕ್ಟರ್ ಅಧಿಕಾರಿಗಳು, ಶ್ರೀಧರ್ , ಚುನಾವಣೆ ಶಾಖೆಯ ಅಧಿಕಾರಿಗಳು
ಉಪಸ್ಥಿತರಿದ್ದರು.