ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಗಿಡಮರ ಬೆಳೆಸುವುದು ಒಂದು ಸವಾಲೆ ಸರಿ.
ಇಂತಹ ಅತೀ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ, ಇಂತಹ ಸಂದರ್ಭಗಳಲ್ಲಿ ಗಿಡ ಮರಗಳನ್ನು ರಕ್ಷಿಸುವ ಕಾರ್ಯ ನಿಜಕ್ಕೂ ಶಾಘ್ಲನೀಯ
ಇಂತಹದೊಂದು ಕಾರ್ಯ ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಸರಿಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಬಯಲು ಸೀಮೆಯ ಜ್ಞಾನ ದೇಗುಲ ಎನ್ನಲಾದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಇಲ್ಲಿನ ಪ್ರಾಂಶುಪಾಲರ ಇತಾಸಕ್ತಿಯಿಂದ ಒಣಗುವ ಸ್ಥಿತಿಯಲ್ಲಿದ್ದ ಗಿಡ ಮರಗಳಿಗೆ ಕೊಂಚ ನೀರುಣಿಸುವ ಮೂಲಕ ಚೇತರಿಕೆ ನೀಡಿದ್ದಾರೆ.
ಕಳೆದ ತಿಂಗಳಷ್ಠೆ ಪ್ರಾಂಶುಪಾಲರಾಗಿ ಅಧಿಕಾರಿ ಸ್ವೀಕರಿಸಿದ ಮಂಜುನಾಥ್ ರವರು ಕಾಲೇಜ್ ಆವರಣದಲ್ಲಿ ಸಾವಿರಾರು ಗಿಡಗಳು ನೀರಿಲ್ಲದೆ ಒಣಗುವ ಸ್ಥಿತಿಯನ್ನು ಕಂಡ ಅವರು ಖಾಸಗಿ ಟ್ಯಾಂಕರ್ ಮೂಲಕ ಪ್ರತಿಯೊಂದು ಗಿಡಕ್ಕೆ ನೀರುಣಿಸುವ ಕಾರ್ಯಮಾಡಿದ್ದಾರೆ.
ಕಾಲೇಜಿನ
ಆವರಣದಲ್ಲಿ ಇರುವ 2900 ನಾನಾ ಜಾತಿಯ ಗಿಡಗಳಿಗೆ ಟ್ಯಾಂಕರ್
ಮೂಲಕ ನೀರು ಹಾಕಿಸಲಾಗಿತ್ತದೆ.
ಇನ್ನೂ ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.