“
ಚಳ್ಳಕೆರೆ ನ್ಯೂಸ್ :
ಶ್ರೀ ರಾಮನ ಆದರ್ಶ ಗುಣಗಳು ಸರ್ವಕಾಲಕ್ಕೂ ಪ್ರಸ್ತುತ” -ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ನಗರದ ಶ್ರೀ ಶಾರದಾಶ್ರಮದಲ್ಲಿ ಶ್ರೀ ರಾಮನವಮಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ “ಭಕ್ತವತ್ಸಲ-ಮುಕ್ತಿದಾಯಕ-ಶ್ರೀ ರಾಮ” ಎಂಬ ವಿಷಯದ ಕುರಿತು ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿಶೇಷ ಪ್ರವಚನ ನೀಡಿದರು.
ಸೀತೆಯ ಭಕ್ತಿಯಿಂದ ಶ್ರೀ ರಾಮನು ಅವತರಿಸಿ ಬಂದನು, ಭಕ್ತನ ಹೃದಯವೇ ಶ್ರೀ ರಾಮಚಂದ್ರನ ವಾಸಸ್ಥಾನವಾಗಿತ್ತು. ಬೇಡಿದ ಭಕ್ತರಿಗೆ ಮುಕ್ತಿಯನ್ನು ದಯಪಾಲಿಸುವವನು ಶತ್ರೂಗಳಿಗೂ ಮಿತ್ರನಾಗಿದ್ದನು.
ಶ್ರೀ ರಾಮನ ಹಲವಾರು ಆದರ್ಶ ಗುಣಗಳು ಸರ್ವಕಾಲಕ್ಕೂ ಪ್ರಸ್ತುತ ವಾಗಿದ್ದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.
ಈ ಪ್ರವಚನ ಕಾರ್ಯಕ್ರಮದ ಮೊದಲು “ಬ್ರಹ್ಮ ಚೈತನ್ಯ ಭಕ್ತ ಮಂಡಳಿ”ಯಿಂದ” ಶ್ರೀ ರಾಮನ ಕುರಿತಾದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಈ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಆಶ್ರಮದ ಭಕ್ತರಾದ ಸುಮ ಪ್ರಕಾಶ್, ಮಾಣೆಕ್ಯಮ್ಮ, ಅಂಬುಜಮ್ಮ, ಗೀತಾ ವೆಂಕಟೇಶ್, ಗಂಗಾಂಬಿಕಾ ರವಿ, ವಸಂತಮ್ಮ, ಗೀತಾ ನಾಗರಾಜ್, ಯಶೋಧಾ ಪ್ರಕಾಶ್, ವನಜಾಕ್ಷಮ್ಮ, ರತ್ನಮ್ಮ, ಕೃಷ್ಣಮೂರ್ತಿ, ಸುಮನಮ್ಮ,ಗಂಗಮ್ಮ,ನಾಗರತ್ನ, ಯತೀಶ್ ಎಂ. ಸಿದ್ದಾಪುರ, ಸಂತೋಷ್,ಭೂಮಿಕ,ಹಿತಾಶ್ರೀ, ಹಾಗೂ ಬ್ರಹ್ಮ ಚೈತನ್ಯ ಮಂದಿರ ಮತ್ತು ಶ್ರೀ ಶಾರದಾಶ್ರಮದ ಭಕ್ತರು ಪಾಲ್ಗೊಂಡಿದ್ದರು.