ಚಳ್ಳಕೆರೆ ನ್ಯೂಸ್ :

ಚಳ್ಳಕೆರೆ ಸ್ವೀಪ್ ಸಮಿತಿ ಹಾಗೂ ನಗರಸಭೆ ವತಿಯಿಂದ ಮತದಾನ ಜಾಗೃತಿಗಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥ ಮಾಡುವ ಮ‌ೂಲಕ ಜಾಗೃತಿ ಮೂಡಿಸಿದರು.

ಇನ್ನೂ ಈ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ ರವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ನಿಮಗೆ ಕೊಟ್ಟ ಹಕ್ಕು ಅಂತಹ ಹಕ್ಕು ಚಲಾಯಿಸಲು ಪ್ರತಿಯೊಬ್ಬರೂ ಸಹ ಉತ್ಸಹಕರಾಗಬೇಕು ಈದೆ ತಿಂಗಳ 26 ರಂದು ನಡೆಯುವ 2024 ರ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನ ಮಾಡಬೇಕು, ಈ ಮತದಾನದಿಂದ ಯಾರೂ ಕೂಡ ವಂಚಿತರಾಗದೆ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡಬೇಕು ಎಂದರು.

ಇನ್ನೂ ನಗರಸಭೆ ಆರೋಗ್ಯ ಅಧಿಕಾರಿ ಸುನಿಲ್ ಕುಮಾರ್ ಮಾತನಾಡಿ, ಮತದಾನ ಎಂಬುದು ನಿಮ್ಮ ಹಕ್ಕು ಇದರಿಂದ ಯಾರೂ ಕೂಡ ಹಿಂದೆ ಸರಿಯಬಾರದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳು ತಮ್ಮ ಆಯ್ಕೆಗೆ ಇಷ್ಟವಿಲ್ಲದೆ ಇದ್ದರೆ ಕೊನೆಯ ಆಯ್ಕೆ ನೋಟ ಬಟನ್ ಒತ್ತುವ ಮ‌ೂಲಕ ನಿಮ್ಮ ಆಯ್ಕೆ ಮಾಡಬಹುದು, ಆದ್ದರಿಂದ ಎಲ್ಲಾರೂ ಕೂಡ ಮತಗಟ್ಟೆ ಕೇಂದ್ರಗಳಿಗೆ ಬಂದು ಮತ ಚಲಾಯಿಸಬೇಕು ಎಂದರು.

ಈದೇ ಸಂಧರ್ಭದಲ್ಲಿ ಆರೋಗ್ಯ ನೀರೀಕ್ಷಕ ಗಣೇಶ್,
ನಗರಸಭೆ ತಿಪ್ಪೇಸ್ವಾಮಿ, ಮಂಜುನಾಥ್, ಮೈತ್ರಿ ದ್ಯಾಮಯ್ಯ, ಪೌರಕಾರ್ಯಿಕರು, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!