ಚಳ್ಳಕೆರೆ ನ್ಯೂಸ್ :
ಬೆಳವಿಮೆ ಪಾವತಿಸುವಂತೆ
ರೈತ ಸಂಘದ ಒತ್ತಾಯ
ಚಳ್ಳಕೆರೆ: ತಾಲೂಕಿನಲ್ಲಿ ಮಳೆ ಬಾರದೆ
ನಾಶವಾಗಿರುವುದರಿಂದ ರೈತರು ಕಟ್ಟಿರುವ ಬೆಳವಿಮೆಯನ್ನು
ಎಲ್ಲಾ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿ ಅಖಂಡ
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಕಚೇರಿ ಮುಂದೆ
ಪ್ರತಿಭಟನೆ ನಡೆಸಿತು.
ತಾಲೂಕಿನ ಕೆಲ ರೈತರಿಗೆ ಈಗಾಗಲೇ ಬೆಳೆ ವಿಮೆ ಹಣ
ಖಾತೆಗಳಿಗೆ ಜಮೆಯಾಗಿದೆ ಆದರೆ ಬಹಳಷ್ಟು ರೈತರಿಗೆ ಇದರ
ಪ್ರಯೋಜನ ಸಿಕ್ಕಿಲ್ಲ ಆದಷ್ಟು ಬೇಗ ಮುಂಗಾರು
ಪ್ರಾರಂಭವಾಗುವ ಮುನ್ನ ರೈತರ ಖಾತೆಗಳಿಗೆ ಬೆಳೆವಿಮೆ ಮೊತ್ತ
ಪಾವತಿಸಬೇಕು ಅಲ್ಲದೆ ರೈತರ ಖಾತೆಗಳಿಗೆ ಬಂದಿರುವ
ಬೆಳವಿಮೆಯನ್ನು ಬ್ಯಾಂಕ್ ಸಿಬ್ಬಂದಿ ಸಾಲಗಳಿಗೆ ಜಮೇ
ಮಾಡಿಕೊಳ್ಳುತ್ತಿರುವುದು ಸರಿಯಲ್ಲ ರೈತರು ಈಗಾಗಲೇ
ಸಂಕಷ್ಟದಲ್ಲಿ ಇರುವುದರಿಂದ ಇಂತಹ ಅವಘಡಗಳನ್ನು ರೈತ
ಸಂಘಟನೆ ಸಹಿಸುವುದಿಲ್ಲ.
ಕೂಡಲೇ ತಾಲೂಕಿನ
ದಂಡಾಧಿಕಾರಿಗಳು ರೈತರ ಹಾಗೂ ಬ್ಯಾಂಕ್ ಅಧಿಕಾರಿಗಳ ಸಭೆ
ನಡೆಸಿ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳದಂತೆ
ಸೂಚಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಸಿದ್ದೇಶ್ವರನ
ದುರ್ಗದ ಗ್ರಾಮ ಪಂಚಾಯಿತಿಯಲ್ಲಿ ಆಗಿರುವ ವಿಮಾ
ಹಣದ ವ್ಯತ್ಯಾಸವನ್ನು ಸರಿಪಡಿಸಲು ಅಧಿಕಾರಿಗಳು
ಗಮನಹರಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ
ಪ್ರಕಾಶ್ ಖಾದರ್ ಭಾಷಾ, ನವೀನ್ ಗೌಡ, ಶಾಂತಣ್ಣ ,ರಾಜಣ್ಣ,
ಹನುಮಂತರಾಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.