ಚಳ್ಳಕೆರೆ ನ್ಯೂಸ್ :
ಶ್ರೀ ರಾಮನವಮಿ ಪ್ರಯುಕ್ತ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ಶ್ರೀ ರಾಮನ ಭಕ್ತಾದಿಗಳು ಭಕ್ತರಿಗಾಗಿ ಪಾನಕ, ಕೋಸಂಬರಿ ವಿತರಣೆ ಮಾಡಿದರು.
ನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಆಯೋಜಿಸಿದ್ದ ಶ್ರೀ ರಾಮನವಮಿ ಪ್ರಯುಕ್ತ ಕಳೆದ ನಾಲ್ಕು ವರ್ಷಗಳಿಂದ ಶ್ರೀ ರಾಮನ ಭಕ್ತಾದಿಗಳು ನಗರದಲ್ಲಿ ಶ್ರೀ ರಾಮನವಮಿ ದಿನದಂದು ನೂರಾರು ಭಕ್ತಾದಿಗಳಿಗೆ ಪಾನಕ, ಕೋಸಂಬರಿ ವಿತರಿಸುವ ಮೂಲಕ ರಾಮನ ಕೃಪೆಗೆ ಪಾತ್ರರಾಗುತ್ತಾರೆ.
ಅದರಂತೆ ಶ್ರೀರಾಮನ ಭಕ್ತರಾದ ಮಧುಮತಿ ಮಾಧ್ಯಮದೊಟ್ಟಿಗೆ ಮಾತನಾಡಿದ ಅವರು, ಶ್ರೀರಾಮನ ಭಕ್ತಿಯ ಸಮರ್ಪಣೆಗಾಗಿ ಪ್ರತಿಯೊಬ್ಬ ಹಿಂದೂ ತಮ್ಮ ಭಕ್ತಿಯನ್ನು ಆ ಶ್ರೀರಾಮನ ಕೃಪೆಗೆ ಅರ್ಪಿಸಬೇಕು ಎಂದು ಹೇಳಿದ್ದಾರೆ.
ಅದರಂತೆ ಭಜರಂಗದಳದ ನಗರ ಘಟಕ ಅಧ್ಯಕ್ಷ ಯತೀಶದ ಮಾತನಾಡಿದರು.
ಇದೇ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ತಾಲೂಕು ಅಧ್ಯಕ್ಷ ಡಾ.ಮಂಜುನಾಥ್,
ಲಕ್ಷ್ಮಿ ಶ್ರೀವತ್ಸ, ಬಾಲಕೃಷ್ಣ, ರಮೇಶ್, ಭರತ್, ಉಮೇಶ್, ಸಿದ್ದೇಶ್, ಇತರರು ಪಾಲ್ಗೊಂಡಿದ್ದರು.