ಚಳ್ಳಕೆರೆ ನ್ಯೂಸ್ :

ಸುಮಾರು ದಶಕಗಳ ಕಾಲ ಮಾದಿಗರ ಹೋರಾಟ ಒಳ ಮೀಸಲಾತಿಗಾಗಿ ಆದರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದನ್ನು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾದಿಗ
ದಂಡೋರ ಸಂಸ್ಥಾಪಕ ಅಧ್ಯಕ್ಷ ಮಂದಕೃಷ್ಣ ಮಾದಿಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಗೋವಿಂದಕಾರಜೋಳ ಪರ ಮಾದಿಗ ಸಮುದಾಯದ ಮುಖಂಡರು
ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಪಕ್ಷ ಒಳ ಮೀಸಲಾತಿ ಕಲ್ಪಿಸುವ ಮೂಲಕ ಅಭಿವೃದ್ಧಿಯಿಂದ ವಂಚಿತ ಸಮಾಜದ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆದಿದೆ.

ಮಾದಿಗರನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿದ್ದ
ಕಾಂಗ್ರೆಸ್ ಪಕ್ಷವನ್ನು ಈ ಬಾರಿ ತಿರಸ್ಕರಿಸಬೇಕು.

ಕೇಂದ್ರ ಸಚಿವ ಸಂಪುಟದಲ್ಲೂ
ದಲಿತರಿಗೆ ಸೂಕ್ತ ಸ್ಥಾನ ಬಿಜೆಪಿ ಹೊದಗಿಸಿದೆ ಚಿತ್ರದುರ್ಗ ಲೋಕಸಭಾ
ಕ್ಷೇತ್ರದಿಂದ ಗೆಲ್ಲಿಸಿದರೆ ಗೋವಿಂದ ಕಾರಜೋಳ ಕೇಂದ್ರ
ಸಚಿವರಾಗುವುದು ಗ್ಯಾರೆಂಟಿ ಈಗಾಗಲೆ ಜಿಪಿಪಿ ನಾಯಕರು ಘೋಷಣೆ ಮಾಡಿದ್ದಾರೆ ಎಂದರು

ಮಂದಕೃಷ್ಣ ಮಾದಿಗ ರವರಿಂದ
ಮಾದಿಗ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗೆ ಬಿಜೆಪಿ
ಶ್ರಮಿಸುತ್ತಿದೆ. ಮಾದಿಗ ಸಮಾಜದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ
ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು
ಮನವಿ ಮಾಡಿದರು.
ಬಿಜೆಪಿ ಪಕ್ಷದವತಿಯಿಂದ ದಲಿತ ನಾಯಕ ಗೋವಿಂದಕಾರಜೋಳ
ಇವರಿಗೆ ಸಚಿವ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ. ಬಿಜೆಪಿ ಮುಸ್ಲಿಂ ವಿರೋಧಿ ಎಂದು ಕಾಂಗ್ರೆಸ್ ವಿರೋಧಿಸುತ್ತಿದೆ ಆದರೆ ಮುಸ್ಲಿಂ ಸಮುದಾಯ ಡಾ.ಎ.ಜೆ. ಅಬ್ದುಲ್ ಕಲಾಂ ಇವರನ್ನು ರಾಷ್ಟ್ರ ಪತಿಯನ್ನು‌ ಮಾಡಿದೆ, ದಲಿತ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ ಬಿಜೆಪಿ‌ ಕೇಂದ್ರ ಹಾಗೂ ರಾಜ್ಯ ಸರಕಾರದ ಅವಧಿಯಲ್ಲಿ ಮಾದಿಗ
ಸಮುದಾಯದವರಿಗೆ ಸಚಿವ ಸ್ಥಾನ ನೀಡಿ ಉತ್ತಮ ಸ್ಥಾನ ನೀಡಿದೆ.

ಕಾಂಗ್ರೆಸ್ ಸರಕಾರದಲ್ಲಿ ಡಾ,ಜಿ,ಪರಮೇಶ್ವರ ಇವರಿಗೆ ಮುಖ್ಯ ಮಂತ್ರಿ ಅಥವಾ ಉಪಮುಖ್ಯ ಸ್ಥಾನ ನೀಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಇವರಿಗೆ‌ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದೆ ಮಾದಿಗ ಸಮುದಾಯವನ್ನು ಕಾಂಗ್ರೆಸ್‌ ಕಡೆಗಣಿಸಿದೆ. ಒಳ ಮೀಸಲಾತಿ ಕಲ್ಪಿಸುವ ಮೂಲಕ ಅಭಿವೃದ್ಧಿಯಿಂದ
ವಂಚಿತ ಸಮಾಜದ ಸರ್ವಾಂಗೀಣ ಪ್ರಗತಿಗೆ ಬಿಜೆಪಿ ಮುನ್ನುಡಿ ಬರೆದಿದೆ.
ಆದರೆ, ಶೋಷಿತರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದ
ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು. ಕೇಂದ್ರ ಸಚಿವ ಸಂಪುಟದಲ್ಲೂ
ದಲಿತರಿಗೆ ಸೂಕ್ತ ಸ್ಥಾನ ಬಿಜೆಪಿ ಒದಗಿಸಿದೆ ಚಿತ್ರದುರ್ಗ ಲೋಕಸಭಾ
ಕ್ಷೇತ್ರದಿಂದ ಗೆಲ್ಲಿಸಿದರೆ ಗೋವಿಂದ ಕಾರಜೋಳ ಕೇಂದ್ರ
ಸಚಿವರಾಗುವುದು ಗ್ಯಾರೆಂಟಿ ಈಗಾಗಲೆ ಜಿಪಿಪಿ ನಾಯಕರು ಘೋಷಣೆ‌ ಮಾಡಿದ್ದಾರೆ.

ಮಾದಿಗ ರವರಿಂದ
ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಕಿಡಿಕಾರಿದ ಮಂದ ಕೃಷ್ಣ ಮಾದಿಗ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸು ಮತ್ತು ಅನುಭವವಾಗಿದೆ
ಆದರೆ ಉಪಯೋಗವಿಲ್ಲ ಮಾದಿಗ ಸಮುದಾಯಕ್ಕೆ ಮೀಸಲಾತಿ
ದೊರೆಯುವುದನ್ನು ಸಹಿಸಲಿಲ್ಲ ಪ್ರತಿ ಬಾರಿಯೂ ಅಡ್ಡಿಪಡಿಸುತ್ತಲೆ
ಬಂದಿದ್ದಾರೆ. ವಾಜಪೇಯಿ ನೇತೃತ್ವದ ಸರ್ಕಾರ ಮಾದಿಗ ಸಮುದಾಯಕ್ಕೆ
ಮೀಸಲಾತಿಯನ್ನು ನೀಡಿತ್ತು ಆದರೆ 2004 ರಿಂದ 2014ರ ವರೆಗೆ ಇದ್ದ
ಮನಮೋಹನ್‌ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾದಿಗ
ಸಮುದಾಯಕ್ಕೆ ಮೀಸಲಾತಿಯನ್ನು ನೀಡಲು ಮಲ್ಲಿಕಾರ್ಜುನ ಖರ್ಗೆ
ಅವರೇ ಅಡ್ಡಿಪಡಿಸಿದ್ದರು ಕೇಂದ್ರದಲ್ಲಿ ಮಂತ್ರಿ ಸ್ಥಾನದಲ್ಲಿದ್ದರೂ ಸಹ
ಮಾದಿಗ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ
ಇದರಿಂದಾಗಿ ಮಾದಿಗ ಸಮುದಾಯ ಇಂದಿಗೂ ಸಹ ಮೀಸಲಾತಿಗಾಗಿ
ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ನಡೆದ ಮಾದಿಗ
ಸಮುದಾಯದ ಸಮಾವೇಶಕ್ಕೆ ಬಂದು ಮೀಸಲಾತಿಯ ಭರವಸೆ
ನೀಡಿದರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಮ್ಮ
ಸಮುದಾಯಕ್ಕೆ ಆರು ಸ್ಥಾನ ನೀಡಿದರೆ ಬಿಜೆಪಿ 12 ಸ್ಥಾನಗಳನ್ನು ನೀಡಿತು
ಇದರಿಂದಲೇ ಗೊತ್ತಾಗುತ್ತದೆ ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯವನ್ನು
ಯಾವ ಮಟ್ಟಿಗೆ ನೋಡಿಕೊಳ್ಳುತ್ತಿದೆ ಎಂಬುದನ್ನು ತಿಳಿಯಬೇಕಾಗಿದೆ
ಕಳೆದ ಬಾರಿಯ ಬಿಜೆಪಿ ಸರ್ಕಾರದ ಬಸವರಾಜ್ ಬೊಮ್ಮಾಯಿ
ನೇತೃತ್ವದಲ್ಲಿ 17% ಮೀಸಲಾತಿಯನ್ನು ಮಾದಿಗ ಸಮುದಾಯಕ್ಕೆ ನೀಡಿದೆ
ಸದಾಶಿವ ಆಯೋಗವನ್ನು ರಚಿಸಿದ ಕಾಂಗ್ರೆಸ್ ಸರ್ಕಾರ ಅದರ
ವರದಿಯನ್ನೇ ಒಪ್ಪಲು ಸಿದ್ಧವಿಲ್ಲ ಇಂತಹ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ
ಸಮುದಾಯವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ
ನೀಡುವ ಬದಲು ಬಿಜೆಪಿಗೆ ಮತ ನೀಡಿದರೆ ಪ್ರಧಾನ ನರೇಂದ್ರ
ಮೋದಿಯವರ ಸರ್ಕಾರ ಆಡಳಿತಕ್ಕೆ ಬಂದು ಮೀಸಲಾತಿ ಕಲ್ಪಿಸುತ್ತದೆ
ಎಂದರು.

ಗ್ಯಾರಂಟಿ ಗೆ‌ ಮೋಸ ಹೋಗಬೇಡಿ ,ಅವುಗಳು ಬಹಳ‌ ದಿನಗಳ‌ ಕಾಲ ‌ಉಳಿಯುದಿಲ್ಲ, ಆದ್ದರಿಂದ ಬಿಜೆಪಿ ಮತ ನೀಡಿ ಮೋದಿ ಕೈ ಬಲಪಡಿಸಿ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಹೇಳಿದರು.

ಇನ್ನೂ ಜೆಡಿಎಸ್ ಮುಖಂಡ ಎಂ.ರವೀಶ್ ಮಾತನಾಡಿ,
ಮತದಾರರೇ‌ ನಿಮ್ಮ ಮತಕ್ಕೆ ಮೌಲ್ಯ ಬರಬೇಕಾದರೆ ಬಿಜೆಪಿ ಗೆ ಮತ ನೀಡಿ ಸುಮಾರು75 ವರ್ಷಗಳಿಂದ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷ ದಲಿತರ ಪರವಾಗಿ ಇಲ್ಲ, ಆದ್ದರಿಂದ ನಿಮಗೆ ಬಿಜೆಪಿ ಪಕ್ಷ ಆಶ್ರಯ ನೀಡುತ್ರಾ ಮಾನ್ಯತೆ‌‌ ನೀಡುತ್ತದೆ ಎಂದರು.

ಕೆ.ಟಿ.ಕುಮಾರಸ್ವಾಮಿ ಮಾತನಾಡಿ,
ರೈತರ ಪರವಾಗಿ ಬಜೆಟ್ ಮಂಡನೆ ಮಾಡಿದ ಏಕೈಕ ವ್ಯಕ್ತಿ ಎಂದರೆ ಅದು
ಕೆರೆಗೆ ಹೂಳೆತ್ತುವ ಕಾರ್ಯ ವಾಗಬೇಕು, ಅಪ್ಪರ ಭದ್ರ ಯೋಜನೆಗೆ ಹಣವನ್ನು ತರುತ್ತವೆ ಎಂದು ಯಡಿಯೂರಪ್ಪ ಹಾಗೂ ಕಾರಜೋಳ ಹೇಳಿದ್ದಾರೆ. ಆದ್ದರಿಂದ ಬಯಲು ಸೀಮೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದರೆ ಕೈ ಬಲಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌, ಜೆಡಿಎಸ್
ಮುಖಂಡರಾದ ಎಂ.ರವೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ
ಪಿ.ತಿಪ್ಪೇಸ್ವಾಮಿ, ಆನಂದಪ್ಪ,ಕರಿಕೆರೆತಿಪ್ಪೇಸ್ವಾಮಿ, ಬಿಜೆಪಿ ಮುಂಡರಾದ
ಅನಿಲ್ ಕುಮಾರ್,ಕೆ.ಟಿ,ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಬಿಜೆಪಿ
ಹಾಗೂ ಜೆಡಿಎಸ್ ಪಕ್ಷದ ನಾಯಕ ಲೋಕಸಭಾ ಅಭ್ಯರ್ಥಿ ಗೋವಿಂದ
ಕಾರಜೋಳ ಪರ ಮತಯಾಚನೆ ಮಾಡಿದರಲ್ಲದೆ ಕಾಂಗ್ರೆಸ್ ಸರ್ಕಾರದ
ಗ್ಯಾರಂಟಿ ಯೋಜನೆಗಳ ವಿರುದ್ಧ ಅಕ್ರೋಶಹೊರಹಾಕಿದ್ದಾರೆ.

ರಾಮದಾಸ್, ಜಯಪಾಲಯ್ಯ ಮಂಜುನಾಥ್ ಇಂದ್ರೇಶ್,.ವಿ ವೈ
ಪ್ರಮೋದ್,, ನರಸಿಂಹಪ್ಪ ರವಿಕುಮಾರ್‌ ಸೇರಿದಂತೆ ಬಿಜೆಪಿ ಹಾಗೂ
ಜೆಡಿಎಸ್ ಪಕ್ಷದ ಮಾದಿಗ ಸಮಾಜದ ಮುಖಂಡರು, ಕಾರ್ಯಕರ್ತರು
ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!