ಚಳ್ಳಕೆರೆ ಸುದ್ದಿ :

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ನಾಲ್ಕನೆಯ ವರ್ಷದ ಯಶಸ್ವಿಯಾಗಿ ಚಿಣ್ಣರಿಗೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ದಿನನಿತ್ಯ ಮೊಬೈಲ್ ಎಂಬ ಭೂತಕ್ಕೆ ಸಿಲುಕಿ ವಾಟ್ಸಾಪ್ ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿ ಲೈಕ್ಸ್ ಕಾಮೆಂಟ್ಸ್ ನೋಡುವುದೇ ಒಂದು ಟ್ರೆಂಡ್ ಆಗಿಬಿಟ್ಟಿದೆ.ಅಲ್ಲದೆ ಮಕ್ಕಳು ತಮ್ಮ ಅಮೂಲ್ಯವಾದ ಅತೀ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿಯೇ ಸಮಯ ವ್ಯರ್ಥ ಮಾಡುತ್ತ ತಮ್ಮ ಮುಂದಿನ ಭವಿಷ್ಯದ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳು ಸಹ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಸಹ ಇರಲು ಆಗುತ್ತಿಲ್ಲ ಇಂತಹ ಪರಿಸ್ಥಿತಿ ಎದುರಾಗಿದೆ, ಹಾಗಾಗಿ ಈ ರೀತಿಯ ಗ್ರಾಮೀಣ ಕ್ರೀಡೆಗಳು ಮತ್ತು ಸ್ಪರ್ಧೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಜ್ಞಾಪಕ ಶಕ್ತಿ ಸ್ಪರ್ಧಾ ಮನೋಭಾವನೆ,
ಸೃಜನಶೀಲತೆ, ಏಕಾಗ್ರತೆ ಬೆಳೆಯುತ್ತದೆ ಹಾಗೂ ಮನೆಯಲ್ಲಿ ಕುಳಿತು ಓದಲು ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪೋಷಕರು ಸಹ ಮಕ್ಕಳಿಗೆ ಅತಿ ಹೆಚ್ಚಿನ ಒತ್ತಡವನ್ನು ಹಾಕುತ್ತಿದ್ದಾರೆ, ಅಲ್ಲದೆ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆಯೆ ಅವರನ್ನು ಸೀಮಿತಗೊಳಿಸಿದ್ದಾರೆ. ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಪುಸ್ತಕ ಚಟುವಟಿಕೆಗಳು ಏಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಅಷ್ಟೇ ಬಹು ಮುಖ್ಯವಾಗಿರುತ್ತವೆ.

ಈ ರೀತಿಯ ನೈಸರ್ಗಿಕ ಚಟುವಟಿಕೆಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಅಲ್ಲದೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಇಂತಹ ಸ್ಪರ್ಧೆಗಳು ಪ್ರಮುಖ ಪಾತ್ರವಹಿಸುತ್ತವೆ.
ಇಂತಹ ಸ್ಪರ್ಧೆಗಳನ್ನು ನಮ್ಮ ಹಳ್ಳಿಗಳಲ್ಲಿ ಏರ್ಪಡಿಸುವುದರಿಂದ ಸಾರ್ವಜನಿಕರಲ್ಲಿ ಮಕ್ಕಳಲ್ಲಿ ಹಿರಿಯರಲ್ಲಿ ಕಿರಿಯರಲ್ಲಿ ಯುವಕರಲ್ಲಿ ಒಳ್ಳೆಯ ಪರಸ್ಪರ ಬಾಂಧವ್ಯ ಪ್ರೀತಿ, ವಿಶ್ವಾಸ, ಒಗ್ಗಟ್ಟು,ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ.

ಈ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪೂಜಾರಿ ನಾಗಪ್ಪನವರ ಪುತ್ರಿಯಾದ ಯಶೋಧಾ, ದ್ವಿತೀಯ ಸ್ಥಾನವನ್ನು ತಿಪ್ಪೇಸ್ವಾಮಿ ಯವರ ಪುತ್ರಿಯಾದ ಶ್ರೀಮತಿ ಪಂಕಜಾ ದಿನೇಶ್ ಪಡೆದಿದ್ದಾರೆ, ತೃತೀಯ ಸ್ಥಾನವನ್ನು ಜಯಣ್ಣ ನವರ ಪುತ್ರಿಯಾದ ಜ್ಯೋತಿ ಪಡೆದುಕೊಂಡರೆ ನಾಲ್ಕನೆಯ ಸ್ಥಾನವನ್ನು ಶ್ರೀಮತಿ ನಿಂಗಮ್ಮ ಕುಬೇರ ಪಡೆದುಕೊಂಡರು, ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಬಹುಮಾನಗಳ ಪ್ರಾಯೋಜಕರು ಶ್ರೀಯುತ ನಾಗರಾಜ್ ಫಾರಂ ರವರಿಗೆ ಸಲ್ಲುತ್ತದೆ,

ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಮುಖಂಡರಾದ ಸಣ್ಣ ನಾಗಯ್ಯ ಎಂ.ಏಚ್ ತಿಪ್ಪೇಸ್ವಾಮಿ,
ಮಂಜುನಾಥ್, ಹನುಮಂತಪ್ಪ, ನಿಂಗಣ್ಣ,ಮೀಸೆ ಬಸಯ್ಯ, ದೊಡ್ಡ ದುರುಗಣ್ಣ, ತಿಪ್ಪೇಸ್ವಾಮಿ, ಗಂಗಣ್ಣ, ಪುಟ್ಟಣ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀಯುತ ಮಲ್ಲಯ್ಯ ಮತ್ತು ತಿಪ್ಪೇಸ್ವಾಮಿ.ಪಿ ,ಲಿಂಗರಾಜ್.ಡಿ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನಯ್ಯ.ಟಿ ಧನಂಜಯ್,ಕುಮಾರ ಸ್ವಾಮಿ,ರುದ್ರಮುನಿ,ಎಂ ಟಿ ಮಂಜುನಾಥ್, ಮಾರಣ್ಣ, ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಆದ ಶ್ರೀಯುತ ಶ್ರೀಧರ್.ಏಚ್, ರಾಜು.ಡಿ ಮನೋಜ್ ಕುಮಾರ್,
ದಯಾನಂದ್ ತಿಪ್ಪೇಸ್ವಾಮಿ.ಯು, ವಿಜಯ್ ಕುಮಾರ್.ಡಿ,ಅರುಣ್ ಕುಮಾರ್,ಮಲ್ಲಿಕಾರ್ಜುನ್,ಗೋಪಿ, ಕೊಲ್ಲಾರಿ,ಕೋಟಿ
ಸ್ವಾಮಿ,ರವಿಕುಮಾರ್.ಜಿ,ನಿಂಗರಾಜು,ಪರಶುರಾಮ್ ಓ,ಮಂಜು, ಮೋಹನ್,
ಶಿವಪ್ಪ,ನಂದೀಶ್,ಗುರುಮೂರ್ತಿ, ತಿಪ್ಪೇಶ್, ಚಿದು,ನಾಗೇಶ್,
ಶಿವಮೂರ್ತಿ.ಟಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮಹಾನಾಯಕ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು,ಯುವಕರು, ಯಜಮಾನರು,ಸಮಸ್ತ ನಾಗರೀಕ ಬಂಧುಗಳು ಭಾಗವಹಿಸಿದ್ದರು.
ಒಟ್ಟಾರೆಯಾಗಿ ಎಲ್ಲರ ಸಹಕಾರದೊಂದಿಗೆ ಈ ದಿನದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

Namma Challakere Local News
error: Content is protected !!