ಚಳ್ಳಕೆರೆ
ಮುಸ್ಲಿಂ ಬಾಂಧವರು ಗುರುವಾರ ಬೆಳಿಗ್ಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ. ನಂತರ ಒಬ್ಬರಿಗೊಬ್ಬರು ರಂಜಾನ್ ಹಬ್ಬದ ಶುಭಾಶಯನ್ನು ವಿನಿಮಯ ಮಾಡಿಕೊಂಡರು.

ಇದೆ ವೇಳೆ ಜಾಮಿಯಾ ಮಸೀದಿ ಗುರುಗಳಾದ ನೂರುದ್ದೀನ್ ಮೌಲಾನ ಹಾಗೂ ಮೊಹಮ್ಮದ್ ತಾಹಿರ್ ಮೌಲಾನ ಸೇರಿ , ವಿಶೇಷವಾಗಿ ಬೋಧನೆ ನೀಡಿದರು.

ಇನ್ನೂ ಜಾಮಿಯಾ ಸಲಹಾ ಸಮಿತಿಯ ಅಧ್ಯಕ್ಷ ಎಚ್ಎಸ್ ಸೈಯದ್ ಮಾತನಾಡಿ ರಂಜಾನ್ ಹಬ್ಬ ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ.

ದೇಹವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು. ಇದರಿಂದ ಹಸಿವಿಗೆ ಒಳಗಾಗುವ ಬಡವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದು

ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು

ಕೆಟ್ಟ ವಿಚಾರಗಳನ್ನ ಕೆಟ್ಟ ಕೆಲಸಗಳನ್ನ ಮಾಡದಿರುವುದು ನಮ್ಮ ಸುತ್ತಮುತ್ತಲು ವಾಸಿಸುತ್ತಿರುವ ಎಲ್ಲರನ್ನೂ ಸಹೋದರತ್ವದ ಭಾವನೆಯಿಂದ ಕಾಣುವುದು

ಮಾನವೀಯ ಮೌಲ್ಯಗಳನ್ನು ಬದುಕಿದ್ದಕ್ಕೂ ಅಳವಡಿಸಿಕೊಂಡು ಸಾಗುವುದು ಇದರ ಪ್ರಧಾನ ತಿರುಳಾಗಿದೆ

ರೋಜಾ ಅನ್ನುವುದು ಒಂದು ಉಪವಾಸವಾಗಿದ್ದು ಈ ಉಪವಾಸದಿಂದ ಆರೋಗ್ಯ ಹಾಗೂ ಸಹಿಷ್ಣುತೆ ಮನೋಭಾವವನ್ನು ಮೈಗೂಡಿಸಿಕೊಳ್ಳುವುದೇ ರೋಜಾ ಎನ್ನಲಾಗಿದೆ ಎಂದರು

ಇನ್ನು ಈ ವೇಳೆ ಶಾಸಕ ಟಿ ರಘುಮೂರ್ತಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಸದಸ್ಯರು ಅಲ್ಲಾ ಬಕ್ಷಿ, ಚಮನ್ ಸಾಬ್, ಸಾಮಾಜಿಕ ಹೋರಾಟಗಾರ ಎಚ್ ಎಸ್ ಸೈಯದ್, ಸುರಕ್ಷ ಪಾಲಿ ಕ್ಲಿನಿಕ್ ಮಾಲೀಕ ಬಿ.ಪರೀದ್ ಖಾನ್,
ರಸೀದ್, ಮಾಜಿ ಮುತ್ತುವಲ್ಲಿ ಕಲೀಮುಲ್ಲಾ ,ಅತೀಖ್ ರೆಹಾನ್ ಪಾಷಾ , ಮೂಜಿಬುಲ್ಲ , ಅತಿಕ್ ರೆಹಮಾನ್ ಪಾಷಾ ,ಎಸ್ಪಿ ಜುಬೇರ್, ದಾದಾಪೀರ್, ಇಂಜಿನಿಯರ್ ರಾಜು, ಸೇರಿದಂತೆ ಅನೇಕ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು,

Namma Challakere Local News
error: Content is protected !!