ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ,ಚಿತ್ರದುರ್ಗ ರವರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ಹಾಗೂ ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಈ ದಿನ ದಿನಾಂಕ-11/04/2024 ರಂದು ಸಂಜೆ- 5.30 ಗಂಟೆ ಸಮಯದಲ್ಲಿ ಅಬಕಾರಿ ಉಪ ನಿರೀಕ್ಷಕರು-2 ಆದ ನಾನು ಚಳ್ಳಕೆರೆ ವಲಯ ಸಿಬ್ಬಂದಿಯೊಂದಿಗೆ ಲೋಕಸಭಾ ಚುನಾವಣೆ-2024 ರ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಬಕಾರಿ ಅಕ್ರಮಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಚಳ್ಳಕೆರೆ ನಗರದಲ್ಲಿ ಗಸ್ತು ನಿರ್ವಹಿಸುತ್ತಿರುವ ಸಮಯದಲ್ಲಿ ಪಾವಗಡ ರಸ್ತೆ ಎಸ್ಸಾರ್ ಪೆಟ್ರೋಲ್ ಬಂಕ್ ಹತ್ತಿರ ರಾಜೇಂದ್ರ ಬಿನ್ ರಾಚಯ್ಯ 48 ವರ್ಷ ಜಾತಿ-ಜಂಗಮ ಜನಾಂಗ ವಾಸ-ಕಾಲವೇಹಳ್ಳಿ ಗ್ರಾಮ ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ ಹಾಗೂ ಹೋಂಡಾ ಆಕ್ಟಿವಾ ದ್ವಿಚಕ್ರದ ವಾಹನ ನೊಂದಣಿ ಸಂಖ್ಯೆ-ಕೆ.ಎ-04 ಹೆಚ್.ವಿ-1476 ವಾಹನವನ್ನು ಮತ್ತು 1)ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ 90 ಮಿಲಿ ಸಾಮರ್ಥ್ಯದ 40 ಟೆಟ್ರಾ ಪ್ಯಾಕೇಟ್ಗಳು ಒಟ್ಟು- 3.600 ಲೀಟರ್ ಮದ್ಯ 2) ಓಲ್ಡ್ ಟಾವರಿನ್ ವಿಸ್ಕಿ 1 ಬಾಟಲ್ 750 ಮಿಲಿ ಒಟ್ಟು-4.350 ಲೀಟರ್ ಮದ್ಯವನ್ನು ಹಾಗೂ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಜಪ್ತುಪಡಿಸಿಕೊಳ್ಳಲಾಯಿತು. ಸದರಿ ಕೃತ್ಯವು ಅಬಕಾರಿ ಕಾಯ್ದೆ-1965 ರ ಕಲಂ-10, 12, ಮತ್ತು 14(2),15, ರ ಉಲ್ಲಂಘನೆ ಕಂಡು ಬಂದಿದ್ದರಿಂದ ಇದೇ ಸಮ ಕಾಯ್ದೆಯ ಕಲಂ-32(1), 34, 38(ಎ), 43(ಎ) ರ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಮೇಲಿನ ಆರೋಪಿ ವಿರುದ್ದ ಘೋರ ಪ್ರಕರಣ ದಾಖಲಿಸಲಾಗಿದೆ. ಸದರಿ ಆರೋಪಿಯನ್ನು ಸಿ.ಆರ್ ಪಿ.ಸಿ ಕಲಂ 41 ಎ(1) ರಡಿಯಲ್ಲಿ ನೋಟಿಸ್ ನೀಡಿ ಕಛೇರಿಗೆ ಹಾಜರಾಗುವ ಸೂಚನೆಯೊಂದಿಗೆ ಬಿಡುಗಡೆಗೊಳಿಸಿದೆ. ಜಪ್ತುಪಡಿಸಿದ ಮದ್ಯ ಹಾಗೂ ದ್ವಿಚಕ್ರ ವಾಹನದ ಒಟ್ಟು ಮೌಲ್ಯ-67109 ರೂಪಾಯಿಗಳು ಆಗಿರುತ್ತದೆ.

ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ನಾಗರಾಜ್, ಪಿಎಸ್ಐ ದೊಡ್ಡ ತಿಪ್ಪಯ್ಯ,, ರೇಖಾ, ಇತರರು ಇದ್ದರು

Namma Challakere Local News
error: Content is protected !!