ನಾಯಕನಹಟ್ಟಿ:: ಪ್ರಧಾನಿ ನರೇಂದ್ರ ಮೋದಿಜಿ ಅವರು ಗೆದ್ದು ಈ ದೇಶದ ಪ್ರಧಾನಿಯಾದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.

ಬುಧವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಾಯಕನಹಟ್ಟಿ ಎಸ್‌ಸಿ ಮೋರ್ಚ ಮಂಡಲ ಕಾರ್ಯಕರ್ತರ ಸಭೆಯನ್ನು ಕುರಿತು ಮಾತನಾಡಿದ ಅವರು ಇಡೀ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ ಅಂತವರನ್ನು ಕಾಂಗ್ರೆಸ್ ನವರು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದರು. ರಾಜಘಾಟ್ ನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಣ ಊರಲು ಆರಡಿ ಮೂರಡಿ ಜಾಗ ನೀಡಿದ ಕಾಂಗ್ರೆಸ್ ನವರು ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಸಂದರ್ಭದಲ್ಲಿ ಉಚಿತವಾಗಿ ಲಸಿಕೆಯನ್ನು ಕೊಟ್ಟು ಪ್ರತಿಯೊಬ್ಬರಿಗೂ ಜನಧನ್ ಖಾತೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ .
ಆದರಿಂದ ಕಾಂಗ್ರೆಸ್ ನವರಿಗೆ ಬುದ್ಧಿ ಕಲಿಸಲು ಕಾಲ ಈಗ ಕೂಡಿಬಂದಿದೆ 2024ರ ಲೋಕಸಭಾ ಚುನಾವಣೆಯಲ್ಲಿ ಕೂಡಿಬಂದಿದೆ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ, ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ್ ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ ಮಾತನಾಡಿ ನಮ್ಮ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ್ ಅವರು ಸರಳ ಸಜ್ಜನ ರಾಜಕಾರಣಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತಹ ಉತ್ತಮ ರಾಜಕಾರಣಿ ಅವರ ಗೆಲುವಿಗೆ ಪ್ರತಿಯೊಬ್ಬರು ಸಹಕರಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎಂವೈಟಿ ಸ್ವಾಮಿ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ ,ಚನ್ನಗಾನಹಳ್ಳಿ ಮಲ್ಲೇಶ್, ಎಸ್ ಸಿ ಮೋರ್ಚಾ ಮಂಡಲ ಅಧ್ಯಕ್ಷ ಟಿ. ಶಿವದತ್ತ, ಮುಖಂಡ ಕನ್ನಯ್ಯ, ಗಿಡ್ಡಾಪುರ ಮರಿಪಾಲಯ್ಯ, ತಾರಕೇಶ್, ಮಲೇಬೋರನಹಟ್ಟಿ ಬಿ ಶಂಕರ ಸ್ವಾಮಿ, ಶಿವಣ್ಣ , ಮಲ್ಲೂರಹಳ್ಳಿ ಗುಂಡಪ್ಪ, ಗಜ್ಜುಗಾನಹಳ್ಳಿ ಜಿ.ಬಿ. ತಿಪ್ಪೇಸ್ವಾಮಿ, ಎತ್ತಿನಹಟ್ಟಿ ಬೋರೇಶ, ಇದ್ದರು.

About The Author

Namma Challakere Local News
error: Content is protected !!