ಚಳ್ಳಕೆರೆ : ಕಳೆದ ಎರಡು ವರ್ಷಗಳಿಂದ ಕಲಿಕಾ ಚಟುವಟಿಕೆಗಳು ಕೊವಿಡ್ ಕಾರಣದಿಂದ ಪ್ರಗತಿ ಕಾಣದೆ ಇರುವುದರಿಂದ ಇಂದು ವರ್ಷದ ಮೊದಲ ಹಂತದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಕಲಿಕಾ ಚೇತನ ಕಾರ್ಯದ ಮೂಲಕ ತರಬೇತಿ ಆಯೋಜಿಸಲಾಗಿದೆ ಎಂದು ಡಯಟ್ ಪ್ರಾಶುಂಪಾಲರಾದ ಎಸ್‌ಕೆಬಿ.ಪ್ರಸಾದ್ ಹೇಳಿದ್ದಾರೆ.

ಚಳ್ಳಕೆರೆ ನಗರದ ಆದರ್ಶ ಶಾಲೆಯಲ್ಲಿ ವರ್ಷದ ಮೊದಲ ಕಲಿಕಾ ಚೇತನ ಕಾರ್ಯಕ್ರಮದ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ 384 ಸರಕಾರಿ ಶಾಲೆಗಳ 1171 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿ ಇಂದು ತರಬೇತಿ ಪಡೆಯುತಿದ್ದಾರೆ, ಅದರಂತೆ ಕೊವಿಡ್ ಸಂಧರ್ಭದಲ್ಲಿ ಹಿಂದೂಳಿದ ಕಲಿಕಾ ಹಂತಗಳನ್ನು ಮಕ್ಕಳ ಈತಶಕ್ತಿಗೆ ಅನುಗುಣವಾಗಿ ಇಂದು ಕಲಿಕಾ ಚೇತನ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಇಂದು ಆಯೋಜಿಸಿದ್ದ ಕಲಿಕಾ ಚೇತನ ತರಬೇತಿಯಲ್ಲಿ ತಾಲೂಕಿನ ಎಲ್ಲಾ ಸರಕಾರಿ ಶಾಲಾ ಶಿಕ್ಷಕರು ಪಾಲ್ಗೊಂಡು ಎರಡು ದಿನಗಳ ಕಾಲ ತರಬೇತಿ ಪಡೆಯುತ್ತಾರೆ ಎಂದರು.

ಈದೇ ಸಂಧರ್ಭದಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಮಾರುತೇಶ್, ಹೆಚ್.ಹನುಮಂತಪ್ಪ, ಬಿಆರ್‌ಸಿ ಮಂಜುನಾಥ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೆಸ್ವಾಮಿ, ಕೊಟ್ರಶ್, ಹನುಮಂತಪ್ಪ, ವೀರಭದ್ರಪ್ಪ, ಪಾವರ್ತಮ್ಮ, ಹೇಮಾಲತಾ, ಇತರರು ಇದ್ದರು.

Namma Challakere Local News
error: Content is protected !!