ಚಳ್ಳಕೆರೆ : ತಾಲೂಕಿನ ಪರಶುರಾಂಪುರ ಗ್ರಾಮ ವ್ಯಾಪ್ತಿಯ ಮೇಗಳ ಹಟ್ಟಿಯಲ್ಲಿ ನಡೆದಿರುವ ಘಟನೆಯಾಗಿದೆ
ಗ್ರಾಮದ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬದಿಂದ ವಿದ್ಯುತ್ ಪೂರೈಕೆಯಾಗುವ ಪವರ್ ಇರುವ ತಂತಿ ಕೆಳಗಿ ಬಿದ್ದಿರುವ ಕಾರಣ ವ್ಯಕ್ತ ಕಣ್ಣಿಗೆ ಕಾಣದೆ ಇರುವ ಕಾರಣ ಸ್ಥಳದಲ್ಲಿ ಮಹಂತೇಶ್ ಎಂಬ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಇನ್ನೂ ನಿನ್ನೆ ರಾತ್ರಿ ಭಾರಿ ಗಾಳಿ ಮಳೆಯಾದ ಕಾರಣ ಗಾಳಿಗೆ ವಿದ್ಯುತ್ ಪೂರೈಕೆಯಾಗುವ ತಂತಿ ಹರಿದು ಬಿದ್ದಿದೆ, ಬೆಸ್ಕಾಂ ಇಲಾಖೆಗೆ ಈ ಕುರಿತ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೆವೆ ಆದರೆ ಬೆಸ್ಕಾಂ ಇಲಾಖೆಯ ಬೆಜಾವಾಬ್ದಾರಿಯಿಂದ ಇಂದು ಗ್ರಾಮದ ಓರ್ವ ಸಾವನಪ್ಪುವಂತಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.