ಚಳ್ಳಕೆರೆ : ಮತಗಟ್ಟೆಗೆ ಬಂದ ಮತದಾರರ ವಿಳಾಸ ಪರೀಕ್ಷಿಸಿ ತದನಂತರ ಅವರಿಗೆ ಮತದಾನ ಮಾಡಲು ಅವಕಾಶ ಕೊಡಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿಯಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಹೇಳಿದರು.
ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024 ರ ಲೋಕಸಭಾ ಚುನಾವಣೆ ಅಂಗವಾಗಿ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು, ಚುನಾವಣೆ ಇಲಾಖೆ ನೀಡಿದ ಮತ ಪಟ್ಟಿಯಲ್ಲಿ ಆ ವ್ಯಕ್ತಿಯ ಹೆಸರು ಹಾಗೂ ವಿಳಾಸ ಇದೆಯೆ ಎಂಬುದು ಪರೀಕ್ಷಿಸಿ ನಂತರ ಅವರಿಗೆ ಅವಕಾಶ ಕೊಡಬೇಕು, ಒಂದು ವೇಳೆ ಮಷೀನ್ ಕೈ ಕೊಟ್ಟರೆ ಅಲ್ಲಿನ ಬೂತ್ ಏಜೆಂಟರ್ ಸಮ್ಮುಖದಲ್ಲಿ ಮಷೀನ್ ಬದಲಾವಣೆ ಮಾಡಿ ಮತದಾನ ಮಾಡಿಸಬೇಕು, ಚಾಲೆಂಜ್ ಮತದಾನ, ಮಾಬ್ ಪೋಲ್, ಈ ಎಲ್ಲಾದರ ಬಗ್ಗೆ ಮಾಹಿತಿ ಇರಬೇಕು, ಸಂಜೆ ಸಮಯದಲ್ಲಿ ಬರುವ ಮತದಾರರಿಗೆ ಸರಥಿ ಸಾಲಿನಲ್ಲಿ ನಿಲ್ಲಿಸಿ ಚೀಟಿ ಕೊಟ್ಟು, ಮತಗಟ್ಟೆ ವ್ಯಾಪ್ತಿಯಲ್ಲಿ ನಿಲ್ಲಿಸಿ ಮತದಾನ ಮಾಡಿಸಬೇಕು, ಇನ್ನೂ ಪಿಆರ್‌ಓ, ಗಳು ಪ್ರತಿ ಕ್ಷಣದ ಮಾಹಿತಿ ರೆಕಾರ್ಡ್ ಮಾಡಿ ಮಾಹಿತಿ ನೀಡಬೇಕು, ಬೂತ್ ಏಜೆಂಟ್ ಬಂದ ತಕ್ಷಣ ಸಹಿ ಪಡೆದು ಬಂದ ಸಮಯ, ಹಾಗೂ ಅವರ ಮಾಹಿತಿ ಪಡೆಯಬೇಕು, ಎಂದರು.
ಇದೇ ಸಂಧರ್ಭದಲ್ಲಿ ಸುಮಾರು 601 ಸಿಬ್ಬಂದಿ ಮತಗಟ್ಟೆ ತರಬೇತಿ ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್, ಜಿಲ್ಲಾ ಚುನಾವಣೆ ಕೋಶದ ನೋಡೆಲ್ ಅಧಿಕಾರಿ ಜಗದೀಶ್ ಹೆಬ್ಬಳಿ, ಸಹಾಯಕ ತರಬೇತಿ ನೋಡೆಲ್ ಅಧಿಕಾರಿ ನಾಗೇಂದ್ರ ಚೌದ್ರಿ, ಡಿವೈಎಸ್ ಪಿ ಬಿಟಿ.ರಾಜಣ್ಣ, ತಹಶಿಲ್ದಾರ್ ರೇಹಾನ್ ಪಾಷ, ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್, ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ, ತಾಪಂ.ಸಹಾಯಕ ನಿದೇರ್ಶಕ ಸಂತೋಷ್, ಇನ್ನೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಜರಿದ್ದರು,

Namma Challakere Local News
error: Content is protected !!