ಚಳ್ಳಕೆರೆ : 2024ರ ಲೋಕಸಭಾ ಚುಣಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸ್ವೀಪ್ ಸಮಿತಿ ಮತದಾನ ಜಾಗೃತಿಗಾಗಿ ಒಂದಿಲ್ಲೊAದು ಕಾರ್ಯಕ್ರಮ ಏರ್ಪಡಿಸುತ್ತಿದೆ ಅದರಂತೆ ಇಂದು ವಿಕಲ ಚೇತನರ ಬೈಕ್ ಜಾಗೃತಿ ಜಾಥಕ್ಕೆ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್ ಚಾಲನೆ ನೀಡಿ ಮಾತನಾಡಿದರು,
ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರು ಪಾಲ್ಗೊಳಬೇಕು ಮತದಾನ ಎಂಬುದು ದಾನವಾಗದೆ ನಮ್ಮ ಪ್ರಜಾಪ್ರಭುತ್ವದ ಹಕ್ಕಾಗಿ ಉಳಿಬೇಕು ಆದ್ದರಿಂದ ಪ್ರತಿಯೊಬ್ಬರು ಜಾಗೃತರಾಗಬೇಕು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಇನ್ನೂ ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷö್ಮಣ್ ಮಾತನಾಡಿ, ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ ಇದೇ ತಿಂಗಳ ಏಪ್ರಿಲ್ 26 ರಂದು ಮತದಾನ ಮಾಡಬೇಕಿದೆ, ಇನ್ನೂ ವಿಶೇಷ ಚೇತನರು ಮತದಾನದಿಂದ ಹೊರಗೆ ಉಳಿಯಬಾರದು ಎಂಬುದರಿAದ ಮತದಾನ ಮಾಡಲು ಮನೆಯಿಂದ ಮತದಾನ ಮಾಡಲು ಅವಕಾಶ ನೀಡಿದೆ, ಇನ್ನೂ ಪ್ರತಿ ಗ್ರಾಮ ಪಂಚಾಯಿತಿಯ ವಿಷೇಶ ಚೇತನರು ಕೂಡ ಮತದಾನದ ಹಬ್ಬದಲ್ಲಿ ಭಾಗವಹಿಸಬೇಕು ಎಂದರು.
ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಶೇಖಡ ನೂರಕ್ಕೆ ನೂರರಷ್ಟು ಮಾತದಾನ ಮಾಡಬೇಕು, ಅದಕ್ಕೆ ಸಂಬAದಿಸಿದ ಜಾಗೃತಿ ಈಗಾಗಲೇ ನಡೆಯುತ್ತಿದೆ, ಅಂಗನವಾಡಿ ಕಾರ್ಯಕರ್ತೆತೆಯರು, ಆಶಾ ಕಾರ್ಯಕರ್ತೆಯರ ಮೂಲಕ, ವಿಕಲ ಚೇತನರ ಮೂಲಕ ಜಾಗೃತಿ ಜಾಥ ಮಾಡಲಾಗುತ್ತಿದೆ ಈ ಪ್ರಜಾಪ್ರಭುತ್ವದ ಹಬ್ಬದಲಿ ಎಲ್ಲಾರು ಪಾಳ್ಗೊಳ್ಳಬೇಕು ಎಂದರು.
ಸಿಡಿಪಿಓ ಹರಿಪ್ರಸಾದ್ ಮಾತನಾಡಿ, ಮತದಾನ ಪವಿತ್ರವಾದದ್ದು ಆದ್ದರಿಂದ ಯಾರೂ ಕೂಡ ಮತದಾನದಿಂದ ಹಿಂದೆ ಸರಿಯದೆ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್, ತಹಶೀಲ್ದಾರ್ ರೇಹಾನ್ ಪಾಷ, ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಲಕ್ಷö್ಮಣ್, ನಗರಸಭೆ ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ, ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ ಹರಿಪ್ರಸಾದ್, ತಾಪಂ.ಸಹಾಕ ನಿದೇರ್ಶಕ ಸಂಪತ್ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ದೇವ್ಲಾನಾಯ್ಕ್, ವಿಆರ್‌ಡ್ಯೂ ನರಸಿಂಹಮೂರ್ತಿ, ಇತರರು ಪಾಲ್ಗೊಂಡಿದ್ದರು.