ಚಳ್ಳಕೆರೆ ನ್ಯೂಸ್ :
2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ನೀರಿಕ್ಷಕರು, ಸಿಬ್ಬಂದಿ
ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ,ಚಳ್ಳಕೆರೆಮ್ಮ ದೇವಸ್ಥಾನದ ಹತ್ತಿರ ಸಮಯ ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಓರ್ವ ವ್ಯಕ್ತಿಯ ವಾಹನ ತಪಾಸಣೆ ನಡೆಸುತ್ತಿದ್ದಾಗ ದ್ವಿ ಚಕ್ರ ವಾಹನದಲ್ಲಿ ಸುಮಾರು 90ಎಂಎಲ್ ನ ಹೈ ವಾರ್ಡ್ ಪ್ಯಾಕೇಟ್ 144 ಟೆಟ್ರಾ ಪ್ಯಾಕ್ ಒಟ್ಟು 12.960ಲೀಟರ್ ಅಕ್ರಮ ಮದ್ಯವನ್ನು ಸಾಗಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಇನ್ನು ಅಬಕಾರಿ ನೀರೀಕ್ಷಕರನ್ನು ನೋಡಿದ ತಕ್ಷಣ ವ್ಯಕ್ತಿ ಓಡಿಹೋಗಿದ್ದು ವಾಹನದ ಮೇಲೆ ಪ್ರಕರಣ ದಾಖಲು ಮಾಡಿದ್ದು ಆರೋಪಿಗಾಗಿ ಬಲೆ ಬಿಸಿದ್ದಾರೆ.

ಇದನ್ನು ದ್ವಿಚಕ್ರ ವಾಹನವನ್ನು ಜಪ್ತು ಪಡಿಸಿಕೊಳ್ಳಲಾಯಿತು. ಇನ್ನೂ ಅವಕಾರಿ ಕಾಯ್ದೆಯಲ್ಲಿ
ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಘೋರ ಪ್ರಕರಣ ದಾಖಲಿಸಲಾಗಿದೆ.

ಒಟ್ಟು ಮದ್ಯದ ಮೌಲ್ಯ 5760 ರೂ
ದ್ವಿಚಕ್ರ ವಾಹನದ ಮೌಲ್ಯ 60,000ರೂ
ಒಟ್ಟಾರೆ 65,760 ರೂ ಆಗಿರುತ್ತದೆ.

ಇದೇ ಸಂಧರ್ಭದಲ್ಲಿ ದಾಳಿಯಲ್ಲಿದ್ದ ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜ್, ಅಬಕಾರಿ ಉಪ ನೀರೀಕ್ಷಕರಾದ ಡಿಟಿ.ತಿಪ್ಪಯ್ಯ, ರೇಖಾ, ಮುಖ್ಯ ಪೇದೆ ನಾಗರಾಜ್, ಸೋಮಶೇಖರ್, ಮಂಜುಳಾ ಇತರರು ಇದ್ದರು

Namma Challakere Local News
error: Content is protected !!