2024ರ ಕುರುಕ್ಷೇತ್ರ
ಲೋಕಾ ಅಖಾಡಕ್ಕೆ ಕಲ್ಲಿನ ಕೋಟೆ ಸಜ್ಜು

ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಚಿತ್ರದುರ್ಗ ಲೋಕಾಸಭಾ ಕ್ಷೇತ್ರದ 8 ಕ್ಷೇತ್ರದÀಲ್ಲಿ 7 ಕಾಂಗ್ರೇಸ್ 1 ಬಿಜೆಪಿ ಮಾತ್ರ, ಹೌದು ಕಳೆದ 17ಲೋಕಾಸಭಾ ಚುನಾವಣೆಯಲ್ಲಿ ಕಲ್ಲಿನಕೋಟೆ ಬಹುತೇಕ ಕಾಂಗ್ರೇಸ್‌ನ ಭದ್ರಾ ಕೋಟೆಯಾಗಿ ಹೊರಹೊಮ್ಮಿತ್ತು, ಆದರೆ ಬದಲಾದ ರಾಜಾಕೀಯ ವಿದ್ಯಾಮಾನಗಳಲ್ಲಿ 2009ರಲ್ಲಿ ಕಾಂಗ್ರೇಸ್ ಭದ್ರಾ ಕೋಟೆಗೆ ಲಗ್ಗೆ ಇಟ್ಟ ಅಂದಿನ ಜನಾರ್ಧನಸ್ವಾಮಿ ಬಿಜೆಪಿಯಿಂದ ಟಿಕೆಟ್ ಪಡೆದು ಕಮಲವನ್ನು ಅರಳಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಕಲ್ಲಿನ ಕೋಟೆಯಲ್ಲಿ ಖಾತೆ ತೆರೆಯಿತು.
ಇನ್ನೂ 2014ಲ್ಲಿ ಮೊತ್ತೆ ಹಾಲಿ ಸಂಸದರಾಗಿದ್ದ ಜನಾರ್ಧನಸ್ವಾಮಿ ಹಿನ್ನೆಡೆ ಕಂಡು ಕಾಂಗ್ರೇಸ್‌ನ ಬಿಎನ್.ಚಂದ್ರಪ್ಪಗೆ ಕೈ ವಶವಾತು ಕ್ಷೇತ್ರ.
ತದನಂತರ 2018ರಲ್ಲಿ ಎ.ನಾರಾಯಣಸ್ವಾಮಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದು ಬಿಜೆಪಿ ತೆಕ್ಕೆಗೆ ಪಡೆದು ಕೇಂದ್ರದ ಮಂತ್ರಿಯಾಗಿದ್ದರು.
ಇನ್ನೂ ಪ್ರಸ್ತುತ 2024ರ ಲೋಕಾಸಭಾ ಚುನಾವಣೆಗೆ ರಣಕಣ ರಂಗೇರಿದ್ದು, ಕಾಂಗ್ರೇಸ್‌ನಿAದ ಮಾಜಿ ಸಂಸದ ಬಿಎನ್.ಚಂದ್ರಪ್ಪ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಗೋವಿಂದ ಎಂ ಕಾರಜೋಳ ರವರು ತಮ್ಮ ಅಗ್ನಿ ಪರೀಕ್ಷೆಗೆ ನಿಂತಿದ್ದಾರೆ.
ಇನ್ನೂ ಮತದಾರರ ಒಲವು ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಎಂಬುದು ಮಾತ್ರ ನಿಗೂಡವಾಗಿದೆ.
ಈಡೀ ದೇಶದಲ್ಲಿ ಏಳು ಸುತ್ತಿನ ಕಲ್ಲಿನ ಕೋಟೆ ಚಿತ್ರದುರ್ಗ ಲೋಕ ಸಮರದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುತ್ತಾ, ಇಲ್ಲ ಕಳೆದ ಬಾರಿ ಸೋತ ಕಾಂಗ್ರೇಸ್ ಈ ಬಾರಿ ಅಧಿಕಾರಕ್ಕೆ ಬರುತ್ತಾ.
ಇನ್ನೂ ಲೋಕ ಸಮರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಲವರಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪರ ಪುತ್ರ ಎಂ.ಸಿ.ರಘುಚAದನ್ ಒಬ್ಬರು, ಇವರು ಟಿಕೆಟ್‌ಗೆ ಹಿನ್ನಿಲ್ಲದ ಕಸರತ್ತು ನಡೆಸಿದ್ದರು ಆದರೆ ಕೊನೆ ಕ್ಷಣದಲ್ಲಿ ಮಾತ್ರ ಕೈತಪ್ಪಿ ಬಾಗಲಕೋಟೆಯ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಗೋವಿಂದ ಎಂ ಕಾರಜೋಳ ರವರಿಗೆ ಟಿಕೆಟ್ ಸಿಕ್ಕಿತ್ತು, ಇನ್ನೂ ಟಿಕೆಟ್ ಪೈಪೋಟಿ ನಡೆಸಿದ ರಘುಚಂದನ್ ಹಲವು ದಿನಗಳ ಕಾಲ ಕಾರಜೋಳ ವಿರುದ್ದ ಬಂಡಾಯವೆದ್ದು ಪ್ರತಿಭಟಿಸಿ ನಂತರ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ನವರ ಸಮ್ಮುಖದಲ್ಲಿ ಟಿಕೆಟ್ ಪೈಟ್ ಶಮನವಾಗಿ ಈಗ ಕ್ಷೇತ್ರದಲ್ಲಿ ಕೊಂಚ ಬಿಜೆಪಿ ಮುನ್ನಲೆಗೆ ಬರುತ್ತಿದೆ. ಇನ್ನೂ ಕೇವಲ ಟಿಕೆಟ್ ಲಾಭಿ ಬಿಜೆಪಿಗೆ ಸೀಮಿತವಾಗದೆ ಕಾಂಗ್ರೇಸ್‌ನಲ್ಲಿ ಬುಗೆಲ್ಲೆದ್ದು ಇನ್ನೂ ಶಮನವಾಗದೆ ಮುಸುಕಿನ ಗುದ್ದಾಟ ನಡೆÀಯುತ್ತಿದೆ, ಅದರಂತೆ ಪಾವಗಡದ ಮಾಜಿ ಸಚಿವರಾದ ವೆಂಕಟರಮಣಪ್ಪ ರವರು ಕೂಡ ಭೋವಿ ಸಮದಾಯಕ್ಕೆ ಕಾಂಗ್ರೇಸ್ ಟಿಕೆಟ್ ನಿಂದ ಅನ್ಯಾಯವಾಗಿದೆ ಇದರಿಂದ ರಾಜ್ಯ ಮಟ್ಟದ ಸಭೆ ನಡೆಸಲಾಗುವುದು ನಮ್ಮ ನಿಲುವು ತಿಳಿಸಲಾಗುವುದು ಎಂದು ಹೇಳಿದ್ದಾರೆ. ಒಟ್ಟಾರೆ ಬಯಲು ಸೀಮೆಯಲ್ಲಿ ಬಿಸಿಲಿನ ಕಾವು ರಂಗೇರಿದAತೆ ದಿನದಿಂದ ದಿನಕ್ಕೆ ಚುನಾವಣ ಕಣ ರಂಗೇರುತ್ತಿದೆ ಎನ್ನಲಾಗಿದೆ.

ಜಾತಿ ಲೆಕ್ಕಾಚಾರ ಮುಖ್ಯವಾಗುತ್ತಾ..? ಎಸ್‌ಸಿ ಮೀಸಲು ಕ್ಷೇತ್ರ.
ಪರಿಶಿಷ್ಟ ಜಾತಿ 5,09,784
ನಾಯಕ-2,65,740
ಲಿಂಗಾಯಿತ -2,37,249
ಕುರುಬ-93,407
ಒಕ್ಕಲಿಗ-1,50,953
ಮುಸ್ಲಿಂ-140274
ಯಾದವ-3,03,571
ಬ್ರಾಹ್ಮಣ, ಶೆಟ್ಟುç-22,000
ಜೈನ,ಮಾರ್ವಾಡಿ-12,000
ಇತರೆ -2,05,937
ಒಟ್ಟು ಮತದಾರರು-18,20,915

Namma Challakere Local News
error: Content is protected !!