ಚಳ್ಳಕೆರೆ ನ್ಯೂಸ್ : ದೈಹಿಕ ಕ್ಷಮತೆಗೆ ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಪರಿಕರ
ವಿತರಣೆ
ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಊಟ ಮಾಡದೆ
ಇರುವುದರಿಂದ ಬಹಳಷ್ಟು ಜನ ಪೊಲೀಸರಲ್ಲಿ ಬೊಜ್ಜಿನ ಸಮಸ್ಯೆ
ಕಂಡುಬರುತ್ತಿದೆ.
ಪೊಲೀಸರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ
ನಿವಾರಣೆಗೆ ಇಸ್ರೇಲ್ ಮೂಲದ ಹೈಗೇರ್ ಕಂಪನಿ ಸಹಯೋಗದಲ್ಲಿ
ಪೊಲೀಸರ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು, ಸ್ಮಾರ್ಟ್ ತಂತ್ರಜ್ಞಾನ
ಆಧಾರಿತ ವ್ಯಾಯಮ ಪರಿಕರಗಳನ್ನು ನೀಡಲಾಗಿದೆ.
ನಗರದ
ಡಿಎಆರ್ ಉಪಾಧೀಕ್ಷಕರ ಕಚೇರಿಯಲ್ಲಿ, ಎಸ್ಪಿ ಧರ್ಮೇಂದ್ರ
ಕುಮಾರ್ ಮೀನಾ 60 ಜನ ಪೊಲೀಸ್ ಸಿಬ್ಬಂದಿಗೆ ಉಚಿತವಾಗಿ
ಪರಿಕರ ವಿತರಿಸಿದರು.