ವಿವಿಧ ಗ್ರಾಮಗಳಿಗೆ ಅಬಕಾರಿ ತಂಡಗಳ ಭೇಟಿ
ಅಂಗಡಿಗಳ ಪರಿಶೀಲನೆ
ಚಳ್ಳಕೆರೆ ತಾಲೂಕಿನ ಸೋಮಗುದ್ದು ಹಾಗೂ ಕಾಲುವೆಹಳ್ಳಿ ಗ್ರಾಮದ
ಗೂಡಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ
ಸಾರ್ವಜನಿಕರ ಮಾಹಿತಿ ಮೇರೆಗೆ ಚಳ್ಳಕೆರೆ ಅಬಕಾರಿ ಇನ್ಸೆಕ್ಟರ್
ಸಿ. ನಾಗರಾಜು ನೇತೃತ್ವದಲ್ಲಿ ಅಬಕಾರಿ ತಂಡ ಇಂದು ಗ್ರಾಮಗಳಿಗೆ
ಭೇಟಿ ನೀಡಿ ಗೂಡ ಅಂಗಡಿಗಳನ್ನು ಪರಿಶೀಲನೆ ನಡೆಸಿತು.
ಕಾನೂನು ಬಹಿರವಾಗಿ ಮದ್ಯ ಮಾರಾಟ ಮಾಡುವುದು ಕಂಡು
ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ
ಇನ್ಸೆಕ್ಟರ್ ಸಿ. ನಾಗರಾಜು ಅಂಗಡಿ ಮಾಲೀಕರಿಗೆ ಎಚ್ಚರಿಕೆ
ನೀಡಿದರು.