ನಾಯಕನಹಟ್ಟಿ::ಮಾ.28. ಪ್ರತಿಯೊಬ್ಬರು 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಎ.ನಸರುಲ್ಲಾ ಹೇಳಿದ್ದಾರೆ.

ಶುಕ್ರವಾರ ಪಟ್ಟಣದಲ್ಲಿ 2024ರ ಲೋಕಸಭಾ ಚುನಾವಣೆ ಅಂಗವಾಗಿ ತಾಲ್ಲೂಕು ಅಡಳಿತ ಮತ್ತು ಪಟ್ಟಣ ಪಂಚಾಯತಿ ವತಿಯಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯ ಪ್ರಯುಕ್ತ ಪಟ್ಟಣದ ವಿವಿಧ ಬೀದಿಗಳಲ್ಲಿ ಮತದಾನದ ಬಗ್ಗೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನದೆಂದು 18 ವರ್ಷ ಮೇಲ್ಪಟ್ಟ ಎಲ್ಲಾ ಯುವಕರು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮತದಾನವನ್ನು ಚಲಾಯಿಸಬೇಕು ಹಾಗೂ ಯಾವುದೇ ಆಸೆ ಆಮಿಷಕ್ಕೆ ಒಳಪಡದೆ ನ್ಯಾಯ ಸಮ್ಮತವಾಗಿ ಮತದಾನವನ್ನು ಚಲಾಯಿಸಬೇಕು ಎಂದರು.

ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಸಹಾಯಕರಾದ ಎಂ.ಎಸ್. ಸುರೇಶ್. ಟಿ ತಿಪ್ಪೇಸ್ವಾಮಿ. ಆರ್ ಸಂದೀಪ್. ಆರ್ ಅಭಿಷೇಕ್, ಮತ್ತು ಪೌರಕಾರ್ಮಿಕರು ಇದ್ದರು.

About The Author

Namma Challakere Local News
error: Content is protected !!