ಚಳ್ಳಕೆರೆ ನ್ಯೂಸ್ : ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಪ್ರಯುಕ್ತ ರಾಜ್ಯದ ಜನತೆ ಸಾಗುವ ಮಾರ್ಗದ ಚಳ್ಳಕೆರೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಶ್ರೀ ಸ್ವಾಮಿಯ ಪಾದಯಾತ್ರೆಗಳಿಗೆ ಹಾಗೂ ದಾರಿಹೋಕರಿಗೆ ಕುಡಿಯುವ ನೀರು ಮಜ್ಜಿಗೆ ಹಾಗೂ ಅನ್ನ ಪ್ರಸಾದವನ್ನು ನೀಡಲಾಗುತ್ತದೆ.
ಇನ್ನೂ ಗ್ರಾಮದ ರವಿ, ಉಮೇಶ್, ರಾಮಕೃಷ್ಣ ,ಸತೀಶ್, ಅಶೋಕ, ಶ್ರೀಧರ್, ತಿಪ್ಪೇಸ್ವಾಮಿ, ರುದ್ರಮುನಿ, ನೇತೃತ್ವದ ತಂಡದಲ್ಲಿ ಗ್ರಾಮದ ಹಲವು ಮುಖಂಡರು, ಗ್ರಾಮಸ್ಥರು ಬಾಗಿಯಾಗಿ ಈ ಉತ್ತಮ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.