ಚಳ್ಳಕೆರೆ ನ್ಯೂಸ್ : ಬೋರ್‌ವೆಲ್ ಕೊರೆಯಲು ದರ ನಿಗಧಿಪಡಿಸುವ ಕುರಿತು ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತದಿಂದಾಗಿ ಬೋರ್‌ವೆಲ್‌ಗಳು ಬರಿದಾಗುತ್ತಿದ್ದು,
ರೈತರ ಅಸಹಾಯಕತೆ ಮತ್ತು ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಬೋರ್‌ವೆಲ್ ಕೊರೆಯಲು ಅತ್ಯಂತ ದುಬಾರಿ ಶುಲ್ಕವನ್ನು ವಸೂಲಿ ಮಾಡಿ, ರೈತರನ್ನು ಶೋಷಣೆ ಮಾಡುತ್ತಿದ್ದು, ಈ ಸಂಬAಧ ರೈತರ ಮತ್ತು ಬೋರ್‌ವೆಲ್ ಮಾಲೀಕರ ಸಭೆಯನ್ನು ಇಂದು ತಾಲೂಕು ಕಛೇರಿಯಲ್ಲಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಹಾಗೂ ತಹಶಿಲ್ದಾರ್ ರೇಹಾನ್ ಪಾಷ ರವರು ರೈತರು ಹಾಗೂ ಮಾಲೀಕರ ಸಭೆ ನಡೆಸಿ ಸಭಾ ನಡವಳಿಕೆ ಜಿಲ್ಲಾಧಿಕಾರಿಗಳಿಗೆ ರವಾನಿಸಿದರು.
ಈಗಾಗಲೇ ಬಯಲುಶೀಮೆ ಪ್ರದೇಶದ ರೈತರು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೊಳವೆಬಾವಿಗಳಲ್ಲಿ ನೀರಿಲ್ಲದೆ ತೋಟಗಳು ಸೊರಗುತ್ತಿವೆ ಇಂತಹ ಸಂಧಿಗ್ಧ ಪರಸ್ಥಿತಿಯಲ್ಲಿ ಕೊಳವೆ ಬೋರವೆಲ್ ಗಳ ಮೊರೆ ಹೋದ ರೈತರಿಗೆ ದುಬಾರಿ ಬೋರ್ವೆಲ್ ಗಳ ಕೊರೆತಕ್ಕೆ ರೈತರು ಕಂಗಾಲಾಗಿದ್ದಾರೆ..
ಆದ್ದರಿAದ ಸರ್ಕಾರದ ನಿಯಮಾವಳಿಗಳ ಪ್ರಕಾರ ಬೋರ್ವೆಲ್ ಗಳ ಮಾಲೀಕರು ರೈತರಿಗೆ ಕೊಳೆಬಾವಿಗಳನ್ನು ಕೊರೆಯಬೇಕು ಅದರಂತೆ ಇಂದು ರೈತರು ಹಾಗೂ ಮಾಲೀಕರ ಸಭೆಯನ್ನು ನಡೆಸಿದ್ದು ರೈತರ ಸಂಕಷ್ಟಗಳನ್ನು ಆಲಿಸಿದ್ದು ಹಾಗೂ ಬೋರ್ವೆಲ್ ಗಳ ದರನಿಗದಿಯನ್ನು ಜಿಲ್ಲಾಧಿಕಾರಿಗಳ ಸಮಕ್ಷಮಕ್ಕೆ ಕಳಿಸಲಾಗುವುದು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೆಹನ್ ಪಾಷ ಮಾತನಾಡಿ, ರೈತರಿಗೆ ಹಾಗೂ ಮಾಲೀಕರಿಗೆ ಅನುಕೂಲವಾಗುವ ರೀತಿಯಲ್ಲಿ ದರನಿಗದಿಯನ್ನು ಮಾಡಲಾಗುವುದು, ಆದ್ದರಿಂದ ಯಾರೊಬ್ಬರಿಗೂ ಒರೆಯಾಗದಂತೆ ಸರಕಾರದ ನಿಯಮಾವಳಿಗಳ ಪ್ರಕಾರ ಬೋರ್ವೆಲ್ ಗಳ ಕೊರೆತದ ದರ ನಿಗದಿಯನ್ನು ಇಂದು ರೂಪಿಸಲಾಗಿದೆ. ತಾಲೂಕಿನಲ್ಲಿ ಗಟ್ಟಿ ಭೂಮಿ, ಮೃದುಭೂಮಿ ಒಂದೊAದು ಹಂತವಾಗಿ ದರನಿಗದಿಯನ್ನು ಮಾಡಲಾಗಿದೆ ಎಂದು ಹೇಳಿದರು..
ಇದೇ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕರಾದ ಪ್ರಭಾಕರ್, ಕೃಷಿ ನಿರ್ದೇಶಕರಾದ ಆರ್ ಅಶೋಕ್, ತೋಟಗಾರಿಕಾ ಅಧಿಕಾರಿ ಆರ್ ವಿರೂಪಾಕ್ಷಪ್ಪ, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ದಯಾನಂದ್, ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಪಿ ಭೂತಯ್ಯ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಉಪಾಧ್ಯಕ್ಷ ರೆಡ್ಡಿ ವೀರಣ್ಣ, ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಹಾಗೂ ಇತರ ರೈತರು ಬೋರ್ವೆಲ್ ಮಾಲೀಕರು ಇತರರು ಪಾಲ್ಗೊಂಡಿದ್ದರು