ಚಳ್ಳಕೆರೆ ನ್ಯೂಸ್ : ಕಳೆದ 2009 ರಲ್ಲಿ ಕಲ್ಲಿನ‌ ಕೋಟೆಯಲ್ಲಿ‌ ಮೊಟ್ಟ ಮೊದಲ ಬಾರಿಗೆ‌ ಕಮಲ‌ ಅರಳಿಸಿದ ಕಿರ್ತಿ‌ ನನಗೆ ಹಾಗೂ ನನ್ನ‌ ಮತದಾರರಿಗೆ ಸಲ್ಲುತ್ತದೆ ಎಂದು ಮಾಜಿ‌ ಲೋಕಸಭಾ ಸದಸ್ಯ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಾರ್ಧನ ಸ್ವಾಮಿ ಹೇಳಿದರು.

ಅವರು ನಗರದ ಖಾಸಗಿ‌ ಹೋಟೆಲ್ ನಲ್ಲಿ‌ ಸುದ್ದಿ‌ಗೋಷ್ಠಿ‌‌ ನಡೆಸಿದ ಅವರು ಅಂದು ನಾ ಕಂಡ ಕನಸು ದೇಶದ ಭದ್ರ ಬುನಾದಿಗೆ‌ ನಾಂದಿಯಾಗಿದೆ, ಇನ್ಮೂ ದೂರದೃಷ್ಟಿಯ ಫಲವಾಗಿ ಅಂದು‌ ನಾಕಂಡ ಹಲವು ಕನಸುಗಳು ‌ಇಂದು‌ ನನಸಾಗಿವೆ.

ಮೊಟ್ಟಮೊದಲ ಬಾರಿಗೆ ಕಲ್ಲಿನ ಕೋಟೆಯಲ್ಲಿ ಕಮಲ ಅರಳಿಸಿ ಬಯಲು ಸೀಮೆ, ಬರಗಾಲ ಎಂಬ ಹಣೆಪಟ್ಟಿಯನ್ನು ಕಿತ್ತು ಹಾಕಬೇಕು ಎಂದು ಮಧ್ಯಕರ್ನಾಟಕ ಭಾಗದಲ್ಲಿ ಹತ್ತು ಹಲವು ಯೋಜನೆಗಳನ್ನು ಅಂದಿನ ದಿನ ಜಾರಿಗೆ ತಂದಿದ್ದೆ,

ಚಿತ್ರದುರ್ಗ ಕ್ಷೇತ್ರದ ನಾನು ಎಂಪಿಯಾಗಿ ಕಾರ್ಯನಿರ್ವಹಿಸಿದಾಗ 1500
ಎಕರೆ ಪ್ರದೇಶದಲ್ಲಿ ಡಿಆರ್ ಡಿ ಓ,ಆಟೋಮಿಕ್ ರಿಸರ್ಚ್ ಸೆಂಟರ್,
ಬೇರೆ ಕಡೆಗೆ ಹೋಗುವುದನ್ನು ತಪ್ಪಿಸಿ ನನ್ನ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ
ತಾಲೂಕಿನಲ್ಲಿ ಸ್ಥಾಪಿಸಿಲು ಕಾರಣನಾಗಿದ್ದರಿಂದ ಇಂದು ಚಳ್ಳಕೆರೆ ವಿಶ್ವದ
ಭೂಪಟದಲ್ಲಿ ನೋಡುವಂತಾಗಿದೆ. ಎಂದು ಪತ್ರಕರ್ತರ ಪ್ರಶ್ನೇಗೆ ಉತ್ತರಿಸಿದರು.

ಅಪ್ಪ‌ರ ಭದ್ರ ಯೋಜನೆ, ನೇರ ರೈಲು ಮಾರ್ಗ, ಕೆರೆಗಳಿಗೆ ನೀರು ತುಂಬಿಸುವ
ಯೋಜನೆಗಳನ್ನು ನನ್ನ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತು. ಈಗ ಕಾರ್ಯೋನ್ಮಕವಾಗುತ್ತಿವೆ , ಇನ್ನೂ ಈ
ಬಾರಿ ಟಿಕೇಟ್ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಮತ್ತೊಮ್ಮೆ
ನನಗೆ ಗೆಲುವು ನೀಡಿದರೆ ಕೇವ 5 ವರ್ಷದಲ್ಲೇ ಬರದ ನಾಡು ಚಿತ್ರದುರ್ಗ
ಎಂಬ ಹಣೆ ಪಟ್ಟಿಯಿಂದ ದೂರ ಮಾಡಲು ಹವಲು ವರ್ಷಗಳ
ಬೇಡಿಕೆಗಳಾದ ನೇರ ರೈಲು ಮಾರ್ಗ, ಅಪ್ಪ‌ ಭದ್ರಯೋಜನೆ, ವಿವಿಧ
ಕೈಗಾರಿಗಳು ತಲೆ ಎತ್ತಲಿವೆ ಕ್ಷೇತ್ರ ಅಭಿವೃದ್ಧಿಯಾದರೆ ಕುಡಿಯುವ ನೀರು,
ಸ್ವಚ್ಚತೆ, ರಸ್ತೆ ತಾನಾಗಿ ಅಭಿವೃದ್ಧಿಯಾಗುತ್ತವೆ ಎಂದು ಸಂಸದರಾಗಿದ್ದಾಗ
ಅವರು ಜಾರಿಗೊಳಿಸಿದ ಹಲವು ಯೋಜನೆಗಳ ಬಗ್ಗೆ ಮಾಹಿತಿ
ನೀಡಿದರು.

ಬಿಜೆಪಿ ಮುಂಡ ಜೆ.ಎಸ್,ತಿಪ್ಪೇಸ್ವಾಮಿ ಮಾತನಾಡಿ ಹಣ ಭಲ, ತೋಳ
ಬಳ ಇದೆ ಎಂದು ಹೊರಗಿನವರಿಗೆ ಟಿಕೇಟ್ ನೀಡಿದರೆ ಸೋಲು ಖಚಿತ
ಮಾಜಿ ಸಂಸದ ಜನಾರ್ಧನಸ್ವಾಮಿ ಸ್ಥಳಯವರಾಗಿದ್ದು ಇವರ
ಅಧಿಕಾರವದಿಯಲ್ಲಿ ಉತ್ತಮ ಸೇವೆ ಮಾಡಿದ್ದಾರೆ ಇವರಿಗೆ ಟಿಕೇಟ್
ನೀಡಿದರೆ ಗೆಲುವು ಖಚಿತ ಎಂದು ತಿಳಿಸಿದರು.
ಸೋಮಶೇಖರ್ ಮಂಡಿ ಮಠ ಮಾತನಾಡಿದರು. ಈ ಸಂದರ್ಭದಲ್ಲಿ
ಜಯಪಾಲಯ್ಯ, ಭದ್ರಣ್ಣ ಮಂಜುನಾಥ್, ಸಿ.ಎಸ್.ಪ್ರಸಾದ್,ಭೂಲಿಂಗಪ್ಪ,
ನಿವೃತ್ತ ಶಿಕ್ಷಕ ಶ್ರೀನಿವಾಸ್, ಶಿವಪುತ್ರಪ್ಪ ರಾಮದಾಸ್, ತಿಪ್ಪೆಸ್ವಾಮಿ, ಹಾಗೂ ಪಾವಗಡ
ತಾಲೂಕಿನ ಹಾಗೂ ಚಳ್ಳಕೆರೆ ತಾಲೂಕಿನ ವಿವಿಧ ಬಿಜೆಪಿ ಕಾರ್ಯಕರ್ತರು
ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!