ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ
ಹಾಗಲು ಗೊಂದಲ ಸೃಷ್ಠಿಯಾಗಿದ್ದು, ಇದರಿಂದ ಎರಡು ಬಾರಿ
ಟಿಕೇಟ್ ಕೇಳಿ ವಯಸ್ಸಿನ ಕಾರಣಕ್ಕೆ ಸುಮ್ಮನಾಗಿದ್ದ ರಘುಚಂದನ್
ಶತಾಯಗತಾಯ ಟಿಕೆಟ್ ಪಡೆಯಲು ಶಕ್ತಿ ಪ್ರದರ್ಶನಕ್ಕೆ
ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರಘಚಂದನ್ ಅಭಿಮಾನಿ
ಬಳಗದವರು ಇಂದು ಬಿಜೆಪಿ ಕಚೇರಿ ವೆರೆಗೆ ಪ್ರತಿಭಟನೆ ನೆಡೆಸಿ
ಮುಖಂಡರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸಿದರು.
ಇನ್ನೂ ಇದೇ ಸಂಧರ್ಭದಲ್ಲಿ
ರೊಚ್ಚಿಗೆದ್ದ ಅಭಿಮಾನಿ ಬಳಗದಿಂದ ಬಿಜೆಪಿ ಕಚೇರಿ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ.
ಬಿಜೆಪಿ ಕಚೇರಿ ಕಿಟಕಿ ಗಾಜು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ
ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ
ಅಭಿಮಾನಿಗಳು ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ
ಪ್ರತಿಭಟನೆ ನಡೆಸಿ ಬಿಜೆಪಿ ಕಚೇರಿಗೆ ತೆರಳಿ ಅಲ್ಲಿ ಕಚೇರಿಯ ಕಿಟಕಿ
ಗಾಜನ್ನು ಒಡೆದು ಹಾಕಿ ಪುಡಿ ಪುಡಿ ಮಾಡುವ ಮೂಲಕ ಆಕ್ರೋಶ
ವ್ಯಕ್ತಪಡಿಸಿದ್ದಾರೆ.