ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:22.03.2024ರAದು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಚಾರ್ಯರಾದ ಡಾ.ಭರತ್ ಪಿ ಬಿ ಮಾತನಾಡಿ, ಹೆಣ್ಣುಮಕ್ಕಳು ಗಂಗೆಯAತೆ, ಜಲವಿಲ್ಲದೇ ಏನು ಇಲ್ಲ. ಹಾಗೆಯೇ ಹೆಣ್ಣುಮಕ್ಕಳಿಲ್ಲದೇ ಪ್ರಪಂಚವಿಲ್ಲ. ಸ್ತಿçà ಮನೆ ಹೊರೆಗೆ ಹಾಗೂ ಮನೆಯ ಒಳಗಡೆ ಸಕಲವನ್ನು ನಿಭಾಯಿಸುತ್ತಾಳೆ. ಸ್ತಿçà ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾಳೆ. ಎಲ್ಲಾ ಕ್ಷೇತ್ರದಲ್ಲೂ ಸ್ತಿçÃಯರು ಉನ್ನತ ಸಾಧನೆ ಮಾಡುತ್ತಿದ್ದಾರೆ. ನಾವು ಲಿಂಗದ ಆಧಾರದ ಮೇಲೆ ಯಾವುದನ್ನೂ ನಿರ್ಧಾರ ಮಾಡಬಾರದು. ಸ್ತಿçÃಯರಿಗೆ ಗೌರವ ನೀಡಿದಲ್ಲಿ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಅಂಜನಾ ನೃತ್ಯ ಕಲಾಕೇಂದ್ರದ ಖ್ಯಾತ ಭರತನಾಟ್ಯ ವಿದುಷಿ ಡಾ.ನಂದಿನಿ ಶಿವಪ್ರಕಾಶ್ ಮಾತನಾಡಿ, ಯುನೆಸ್ಕೋ ಲಿಂಗ ತಾರತಮ್ಯ ನಿವಾರಣೆಗೆ ಮಾರ್ಚ 8ರಂದು ಮಹಿಳಾ ದಿನಾಚರಣೆ ಆಚರಿಸುತ್ತಾರೆ. ಆದರೆ ನಮ್ಮ ಭಾರತದಲ್ಲಿ ಹೆಣ್ಣಿಗೆ ತುಂಬಾ ಗೌರವದ ಸ್ಥಾನವಿದೆ. ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತಾರೆ. ಹೆಣ್ಣು ಸೌಂದರ್ಯದ ಪ್ರತೀಕವಷ್ಟೇ ಅಲ್ಲ. ಸ್ತಿçà ಆದಿಶಕ್ತಿ, ಗಾಯಿತ್ರಿ ಸ್ವರೂಪ. ಪ್ರತಿಯೊಬ್ಬರ ಗೆಲುವಿನ ಹಿಂದೆ ಒಬ್ಬ ಸ್ತಿçà ಇರುತ್ತಾಳೆ. ಪ್ರತಿಯೊಂದು ಹುಟ್ಟಿಗೆ ಕಾರಣ ಹೆಣ್ಣು. ತಾಯಿ ಪ್ರತಿ ಹಂತದಲ್ಲೂ ತನ್ನ ಮಗುವನ್ನು ಜೋಪಾನ ಮಾಡಿ ಬೆಳಸುತ್ತಾಳೆ. ಚಿಕ್ಕ ವಯಸ್ಸಿನಲ್ಲಿ ಪತಿ ಗತಿಸಿದರೆ ಹೆಣ್ಣು ತಂದೆ-ತಾಯಿ ಎರಡೂ ಜವಾಬ್ದಾರಿಯನ್ನು ನಿಭಾಯಿಸಿ ತನ್ನ ಮಕ್ಕಳನ್ನು ಬೆಳಸಿ ದೊಡ್ಡವರನ್ನಾಗಿ ಮಾಡಿ ಅವರ ಜೀವನ ರೂಪಿಸುತ್ತಾಳೆ. ಹೆಣ್ಣು ಪ್ರತಿ ವಿಚಾರದಲ್ಲೂ ಸಂಭ್ರಮ ಪಡುತ್ತಾಳೆ. ನಮ್ಮ ಹೆಣ್ಣು ಮಕ್ಕಳು ಒನಕೆ ಓಬವ್ವ, ಕಲ್ಪನಾ ಚಾವ್ಲಾ, ಅಕ್ಕ ವiಹಾದೇವಿ, ಉಭಯಭಾರತಿಯರಂತಹರನ್ನು ಆದರ್ಶವನ್ನಾಗಿಟ್ಟುಕೊಂಡು ತಮ್ಮ ಬದುಕು ರೂಪಿಸಿಕೊಳ್ಳಬೇಕು. ಧೀಮಂತ ಮಹಿಳೆಯರಾಗಿ ಬಾಳಬೇಕು ಎಂದು ತಿಳಿಸಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಪ್ರೊ.ಬಸಂತಕುಮಾರಿ ಮಾತನಾಡಿ, ಮನೆಗಳಲ್ಲಿ ಹೆಣ್ಣು ಮಕ್ಕಳು ಸಂಸಾರದ ಜವಾಬ್ದಾರಿಯನ್ನು ಹೊರುತ್ತಾಳೆ. ಪುರುಷರು ಸ್ತಿçÃಯರಿಗೆ ಹೊರೆಯಾಗದಂತೆ ತಾವು ಸಹ ಮನೆಯ ಜವಾಬ್ದಾರಿಯಲ್ಲಿ ಪಾತ್ರ ವಹಿಸಬೇಕು. ಗಂಡ ಹೆಂಡತಿ ಪರಸ್ಪರ ಸಹಕಾರ ನೀಡಿ ಸಂಸಾರ ನಿಭಾಯಿಸಿದರೆ ಜೀವನ ಉತ್ತಮವಾಗಿರುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸ್ತಿçà ಘಟಕದ ಸಂಚಾಲಕಿ ಪ್ರೊ. ಸುಷ್ಮಿತಾದೇಬ್, ಪ್ರೊ.ಪವಿತ್ರ ಎನ್, ವಿವಿಧ ಇಲಾಖಾ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೇಘನಾ ಪಿ ಸ್ವಾಗತಿಸಿ, ಭೂಮಿಕಾ ಸಿ ನಿರೂಪಿಸಿ, ಮೋನಿಕಾ ವಿ ಕೆ ವಂದಿಸಿದರು.
ಸಮಾರAಭದಲ್ಲಿ ರುಕ್ಮಿಣಿ ಡಿ ಸಿ ಗಾಯನ, ಜೀವಿತಾ ಜಿ, ಪ್ರಜ್ಞಾ ಆರ್ ನೃತ್ಯ ಪ್ರದರ್ಶನ ನೀಡಿದರೆ, ಅನನ್ಯ ಮತ್ತು ತಂಡದವರು ರೂಪಕ ಪ್ರದರ್ಶನ ನೀಡಿದರು.

Namma Challakere Local News
error: Content is protected !!