:

ಚಳ್ಳಕೆರೆ : 2024ರ ಲೋಕಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಅಕ್ರಮಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ ಆದರೆ ಸಹ ದಾಖಲೆಯಿಲ್ಲದೆ ಚುನಾವಣಾ ಆಯೋಗ ನಿಯಮಗಳನ್ನು ಉಲ್ಲಂಘನೆ ಮಾಡಿ ಹಣ ಸಾಗಾಟ ಮಾಡುವಾಗ ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಹಿರಿಯೂರಿನ ಜವನಗೊಂಡನಹಳ್ಳಿ ಚೆಕ್ ಪೋಸ್ಟ್ ಬಳಿ ಎಟಿಎಂಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗುವ ವಾಹನದಲ್ಲಿದ್ದ ಸುಮಾರು.1.44 ಕೋಟಿ ಹಣವನ್ನು ಹಿರಿಯೂರು ತಹಶೀಲ್ದಾರ್ ಹಾಗೂ ಸರ್ಕಲ್ ಇನ್ಸೆಕ್ಟರ್ ಮತ್ತು ಎಸ್ ಎಸ್ ಟಿ ತಂಡದವರು ಸೀಜ್ ಮಾಡಿದ್ದಾರೆ.
ಕೋಟಿ ಹಣಕ್ಕೆ ಸೂಕ್ತವಾದ ದಾಖಲಾತಿ ನೀಡದೆ ಇರುವ ಕಾರಣ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ,
ಇನ್ನೂ ತುಮಕೂರು ಜಿಲ್ಲೆಯ ತುಮಕೂರು ಮತ್ತು ಶಿರಾ ಕಡೆಯ ವಾಹನವಾಗಿದ್ದು, ಇದರಲ್ಲಿ 1.44 ಲಕ್ಷ ಹೇಗೆ ಬಂತು ಹಾಗೂ ಈ ವಾಹನ ಚಿತ್ರದುರ್ಗದ ಕಡೆಗೆ ಏಕೆ ಬಂತು ಎನ್ನುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದ್ದು ಹಣವನ್ನು ವಶಕ್ಕೆ ಪಡೆದುಕೊಂಡಿರುವ ಸ್ಥಳಕ್ಕೆ ಅಧಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಗಳಾರಹಟ್ಟಿ ಚೆಕ್ ಪೋಸ್ಟ್ ಬಳಿ ಸು.1.5ಲಕ್ಷ ರೂ ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ತಹಶೀಲ್ದಾರ್ ರೇಹಾನ್ ಪಾಷ ಸಮ್ಮುಖದಲ್ಲಿ ತನಿಖೆಕೈಗೊಂಡಿದ್ದಾರೆ.

About The Author

Namma Challakere Local News
error: Content is protected !!