ಚಳ್ಳಕೆರೆ ನ್ಯೂಸ್ :
ಅಕ್ರಮ ಮರಳು ಗಳ್ಳರನ್ನು ಎಡೆಮುರಿ ಕಟ್ಟಲು ಸಜ್ಜಾದ ಪೊಲೀಸ್ ಇಲಾಖೆ ಕಳೆದ ಹಲವು ದಿನಗಳಿಂದ ಹಲವು ಪ್ರಕರಣಗಳನ್ನು ದಾಖಲಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.
ಹೌದು ಬಯಲು ಸೀಮೆಯ ಭೂ ಒಡಲು ಬಗೆಯುವ ದಂಧೆಕೋರರನ್ನು ಮಟ್ಟ ಹಾಕಲು ಪಣ ತೊಟ್ಟ ಚಳ್ಳಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಕುಮಾರ್ ರ ನೇತೃತ್ವದ ತಂಡ ತಾಲೂಕಿನಲ್ಲಿ ಅಕ್ರಮ ಮಧ್ಯೆ ಮಾರಾಟ, ಅಕ್ರಮ ಮರಳುಗಾರಿಕೆ ಈಗೇ ಒಂದೊಂದಾಗಿ ಎಡೆಮುರೆ ಕಟ್ಟುವ ಅಧಿಕಾರಿಗಳು ಇಂದು ತಾಲೂಕಿನ ಬಾಲೆನಹಳ್ಳಿ ಸಮೀಪದಲ್ಲಿ ಬೆಳಗಿನ ಜಾವ ಮರಳು ತುಂಬಿದ ಟ್ರಾಕ್ಟರ್ ಯಾವುದೇ ಪರವಾನಿಗೆ ಪಡೆಯದೆ ಹೋಗುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಟ್ರಾಕ್ಟರ್ ನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಚರಣ್ ರಾಜ್ ಎಂಬುವವರು ಮರಳನ್ನು ಟ್ರ್ಯಾಕ್ಟರ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ತುಂಬಿಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುವ ಸಮಯದಲ್ಲಿ ದಾಳಿನಡೆಸಿದ ಪಿಎಸ್ ಐ ಶಿವರಾಜ ದಾಳಿ ಮಾಡಿ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಅನ್ನು ವಶಕ್ಕೆ ಪಡೆದು , ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.