ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಗೆ,
ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲ ಹಂತದ ವಿದ್ಯುನ್ಮಾನ ಮತ ಯಂತ್ರ, ನಿಯಂತ್ರಣ ಘಟಕ ಹಾಗೂ ಮತ ಖಾತ್ರಿ ಯಂತ್ರಗಳ ತಂತ್ರಾಂಶ ಆಧಾರಿತ ಯಾದೃಚ್ಛಿಕರಣ ಮಾಡಾಗಿದೆ. ವಿಧಾನಸಭಾ ಕ್ಷೇತ್ರವಾರು ಈ ಯಂತ್ರಗಳನ್ನು ಭೌತಿಕವಾಗಿ ಹಂಚಿಕೆ ಮಾಡಲಾಗಿದೆ ಅದರಂತೆ ಚಳ್ಳಕೆರೆ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್ ರೂಮ್ ನಲ್ಲಿ ಮತ ಪೆಟ್ಟಿಗಳು ಭದ್ರವಾಗಿವೆ ಎಂದು ಚಳ್ಳಕೆರೆ ತಾಲೂಕಿನ ಚುನಾವಣಾ ಅಧಿಕಾರಿ ಬಿ.ಆನಂದ ಹೇಳಿದರು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮಕ್ಷಮದಲ್ಲಿ ತಂತ್ರಾಂಶ ಆಧಾರಿಸಿದ ಯಾದೃಚ್ಛಿಕರಣ(Randomization) ಕಾರ್ಯ ನಡೆಸಿ ಅವರು ಮಾತನಾಡಿದರು.  

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 260 ಮತಗಟ್ಟೆಗಳಿವೆ. 325 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 338 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ ಎಂದರು.
.ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಸಿಬ್ಬಂದಿ ಹಾಜರಿದ್ದರು.

About The Author

Namma Challakere Local News
error: Content is protected !!