ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಘೋಷಣೆಯಾಗಿ ನೀರಿಸಂಹಿತೆ ಜಾರಿಯಾಗಿ ಚುನಾವಣೆಯಲ್ಲಿ ಎಲ್ಲಿಯೂ ಸಹ ಅಕ್ರಮ ನಡೆಯಬಾರದು ಎಂಬ ಉದ್ದೇಶ ದಿಂದ ಪೋಲಿಸ್ ಇಲಾಖೆ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸುತ್ತಿದೆ.
ಅದರಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಳ್ಳಾರಿ ರಸ್ತೆಯಲ್ಲಿ ನಿರ್ಮಿಸಿದ ಚೆಕ್ ಪೋಸ್ಟ್ ನಲ್ಲಿ ಯಾವುದೇ ದಾಖಲೆ ಇಲ್ಲದೆ ಸುಮಾರು 38 ಲಕ್ಷ ನಗದು ಸಾಗಣೆಮಾಡುತ್ತಿರುವ ಕಾರಿನ್ನು ತಪಾಣೆ ನಡೆಸಿದಾಗ ಕಂಡುಬಂದಿದೆ.
ಇನ್ನೂ ಆ ಹಣ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಕ್ಕೆ ಸೇರಿದ 38 ಲಕ್ಷ ನಗದು ಹಣವನ್ನು ಚಿತ್ರದುರ್ಗ ಜಿಲ್ಲಾ ಚುನಾವಣೆ ಅಧಿಕಾರಿಗಳ ಅನುಮತಿ ಇಲ್ಲದೆ ಬರೋಡ ಬ್ಯಾಂಕಿಗೆ ಕಟ್ಟಲು ಸಾಗಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನೂ ಕಾರನ್ನು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಯಕನಹಟ್ಟಿ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ…ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯವರು. ತಪಾಸಣೆ ನಡೆಸಿದಾಗ ಕಂಡುಬಂದಿದೆ.
ಅಷ್ಟು ಹಣವನ್ನು ವಶಕ್ಕೆ ಪಡೆದುಕೊಂಡ ಸಿಬ್ಬಂದಿ, 10 ಲಕ್ಷದ ಮೇಲೆ ಹಣ ಇದ್ದಿದ್ದರಿಂದ ಆದಾಯ ತೆರಿಗೆ ಅಧಿಕಾರಿಗಳಿಗೆ ಬರಲು ತಿಳಿಸಿ. ಮುಂದಿನ ಕ್ರಮಕ್ಕೆ ಅವರ ವಶಕ್ಕೆ ನೀಡಲಾಗಿರುತ್ತದೆ.. ಎನ್ನಲಾಗಿದೆ.