ಚಳ್ಳಕೆರೆ ನ್ಯೂಸ್ :

2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪಾವಗಡ ರಸ್ತೆಯ ಜೈರಾಂ ಚಿತ್ರಮಂದಿರದ ಮುಂಭಾಗದ ಬಸ್‌ ನಿಲ್ದಾಣದಲ್ಲಿ ಸಮಯ ಮಧ್ಯಾಹ್ನ-1.30 ಗಂಟೆ ಸಮಯದಲ್ಲಿ ಹೋಂಡಾ ಶೈನ್‌ ದ್ವಿ ಚಕ್ರ ವಾಹನದಲ್ಲಿ ಸುಮಾರು 8.640 ಲೀಟರ್ ಅಕ್ರಮ ಮದ್ಯ ಮದ್ಯವನ್ನು ಹಾಗೂ ಸದರಿ ದ್ವಿಚಕ್ರ ವಾಹನವನ್ನು ಜಪ್ತುಪಡಿಸಿಕೊಳ್ಳಲಾಯಿತು ಎಂದು ಅಬಕಾರಿ ನಿರೀಕ್ಷಕರಾದ ನಾಗರಾಜ್ ಹೇಳಿದರು.

ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಮತ್ತು ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರು-2 ಚಳ್ಳಕೆರೆ ವಲಯ ಇವರು ಮತ್ತು ಚಳ್ಳಕೆರೆ ವಲಯ ಸಿಬ್ಬಂದಿಯೊಂದಿಗೆ ಗಸ್ತು ಇರುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನೂ‌
ಅಕ್ರಮ‌ ಮಧ್ಯೆ‌ ಸಾಗಟದಲ್ಲಿ ಬಾಗಿಯಾದ ಮಂಜುನಾಥ.ಎಂ ಸಾಣಿಕೆರೆ ಗ್ರಾಮ,ಇವರನ್ನು ದಸ್ತಗಿರಿ‌ ಮಾಡಿ‌ ಬೈಕ್ ಹಾಗು ಮಧ್ಯೆವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Namma Challakere Local News
error: Content is protected !!