ಚಳ್ಳಕೆರೆ : ಐದನೇ ಶತಮಾನದ ಬುದ್ಧ 12ನೇ ಶತಮಾನದ ಬಸವಣ್ಣ ಮತ್ತು 19ನೇ ಶತಮಾನ ಅಂಬೇಡ್ಕರ್ ಅವರ ತತ್ವಗಳು ಸಿದ್ಧಾಂತಗಳು ಆದರ್ಶಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತವಾಗಿವೆ ಇವರ ಆದರ್ಶ ಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಛೇರಿಯ ಸಭಾಂಗಣದಲ್ಲಿ
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಆಡಳಿತ, ತಾಲ್ಲೂಕ ಕಚೇರಿ ಹಾಗೂ ವಿರಶೈವ ಸಮುದಾಯದ ವತಿಯಿಂದ ಹಮ್ಮಿಕೊಂಡಿದ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಶಾಸಕ ಟಿ ರಘುಮೂರ್ತಿ ಪುಷ್ಪನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂತಹ ದಾರ್ಶನಿಕರ ಆದರ್ಶಗಳು ಮತ್ತು ವಚನಗಳನ್ನು ಪರಿ ಪಾಲಿಸುವುದರ ಮುಖಾಂತರ ಸಮಾಜದಲ್ಲಿ ಸಮಾನತೆ ಮತ್ತು ಶಾಂತಿಯನ್ನು ಸ್ಥಾಪಿಸಲು ಸಮಾಜದವರು ನಾಂದಿ ಹಾಡಬೇಕಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ, ಬಸವೇಶ್ವರರು 12ನೇ ಶತಮಾನದಲ್ಲಿ ಸಮಾನತೆ ಸ್ತ್ರೀಯರಿಯರಿಗೆ ಸ್ವಾತಂತ್ರ ಮತ್ತು ಕಂದಾಚಾರದ ವಿರುದ್ಧ ಹೋರಾಡಿ ಸಮಾಜದ ಎಲ್ಲ ವರ್ಗದವರ ಶ್ರೇಯಸ್ಸಿಗೆ ಅನುಭವ ಮಂಟಪವನ್ನು ಸ್ಥಾಪಿಸಿದರು.
ಈ ಮುಖಾಂತರ ಪ್ರತಿಯೊಂದು ವರ್ಗಕ್ಕೂ ನ್ಯಾಯ ನೀಡಿ ಎಲ್ಲ ವರ್ಗದವರನ್ನು ಶರಣರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸುಮಕ್ಕ ಅಂಜನಪ್ಪ ಉಪಾಧ್ಯಕ್ಷರಾದ ಮಂಜುಳಾ ಆರ್ ಪ್ರಸನ್ನ ಕುಮಾರ್ , ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಕೆಸಿ ನಾಗರಾಜ್ , ನಗರಸಭೆ ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಸಂಗೀತ್ ಶಿಕ್ಷಕರಾದ ಕೆ ಓ ಶಿವಣ್ಣ ತುಮಕೂರ್ಲಹಳ್ಳಿ ಇವರಿಂದ ಬಸವಣ್ಣನವರನ್ನು ಕುರಿತು ಹಲವು ವಚನಗೀತೆಗಳನ ಗಾಯನ ಮಾಡಿದರು