ಚಳ್ಳಕೆರೆ : ಸ್ನೇಹ ಸೌಹಾರ್ದ ಸಂಕೇತವಾದ ರಂಜಾನ್ ಹಬ್ಬವನ್ನು ಕಳೆದ ಒಂದು ತಿಂಗಳ ಕಾಲ ಮುಸ್ಲಿಂ ಬಾಂಧವರು
ರೋಜಾ ಇರುವ ಮೂಲಕ ಅಲ್ಲನ ಕೃಪೆಗೆ ಪಾತ್ರರಾಗಿದ್ದಾರೆ.
ಅದರಂತೆ ಇಂದು ನಗರದ ಜಾಮಿಯಾ ಮಸೀದಿ, ಅನ್ಸರ್ ಮಸೀದಿ,, ಮದೀನ ಮಸೀದಿ ಹೀಗೆ ಹತ್ತಕ್ಕೂ ಹೆಚ್ಚಿನ ಮಸೀದಿಗಳಿಂದ ಮುಸಲ್ಮಾನ ಸಮುದಾಯದವರು ಬೆಂಗಳೂರು ರಸ್ತೆಯಲ್ಲಿವ ಈದ್ಗಾ ಮೈದಾನಕ್ಕೆ ಸಾಮೂಹಿಕ ಮೆರವಣಿಗೆಯೊಂದಿಗೆ ದಾವಿಸ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು
ಇದರೊಟ್ಟಿಗೆ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಭಾಗವಹಿಸಿ ಹಿಂದೂ-ಮುಸ್ಲಿಂ ನಡುವೆ ಸ್ನೇಹ ಸೌಹಾರ್ದತೆಯನ್ನು ಬೆಳೆಸುವ ಈ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರು ಒಂದು ತಿಂಗಳ ಕಾಲ ರೋಜಾ ಮಾಡುವ ಮೂಲಕ ಪರರಿಗೂ ಒಳಿತುಮಾಡು ಎಂದು ಅಲ್ಲಾ ಕೃಪೆಗೆ ಪಾತ್ರರಾಗುತ್ತಾರೆ ಇಂತಹ ಸಂಧರ್ಭದಲ್ಲಿ ಮುಸ್ಲಿಂರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು.
ಇನ್ನೂ ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಹಿಂದೂ ಮುಸ್ಲಿಂ ಬೇರೆ ಬೇರೆ ಅಲ್ಲ ಇಬ್ಬರು ಒಂದೆ ರಾಮ ರಹಿಂ ಒಬ್ಬರೆ ಒರತು ಬೇರೆ ಅಲ್ಲ ಹಿಂದೂ ಮುಸ್ಲಿಂ ಕೂಡ ಸ್ನೇಹ ಸೌಹಾರ್ದ ತೆಯಿಂದ ಕೂಡಿರಬೇಕು ಎಂದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಮುಖಂಡ ಹಾಗೂ ಮುಂಬರುವ ವಿಧಾನ ಸಭಾ ಚುನಾವಣೆಯ ಆಕಾಂಕ್ಷಿ ಎಂ ರವೀಶ್ ಹಾಗೂ ಕೆಟಿ ಕುಮಾರಸ್ವಾಮಿ, ಈಗೇ ಸಮುದಾಯದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಬಿಟಿ ರಮೇಶಗೌಡ, ಹೊಯ್ಸಳ ಗೋವಿಂದ, ಪ್ರಶಾಂತ್, ಮಲ್ಲಿಕಾರ್ಜುನ , ಇತರ ಪ್ರಮುಖ ಹಿಂದೂ ಮುಖಂಡರುಗಳು ಭಾಗವಹಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ನೇಹ ಸೌಹಾರ್ದ ಬೆಳೆಸುವಂತೆ ಮಾತನಾಡಿದರು
ಮುಸ್ಲಿಂ ಸಮುದಾಯದ ಅತಿಕ್ ರಹಮಾನ್, ದಾದಾಪೀರ್, ಸೈಯದ್ ,,ಅನ್ವರ್ ಬಾಷಾ , ಸೈಯದ್, ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ತಾಲೂಕು ಅಧ್ಯಕ್ಷ ಹಾಗೂ ಜಾಮಿಯಾ ಮಸೀದಿ ಪಕ್ಷೇತರ ಅಭ್ಯರ್ಥಿ ಎಸ್ ಎಂ ಸೈಯದ್ ನಬಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅಲ್ಲಾ ಕೃಪೆಗೆ ಪಾತ್ರರಾದರು.