ನಾಯಕನಹಟ್ಟಿ:: ಶಾಲೆಯ ಆವರಣ ಮತ್ತು ಗ್ರಾಮದ ವಿವಿಧಡೆ ಸಸ್ಯಗಳನ್ನು ಬೆಳೆಸಿ ಸಾಲ ಬರದ ತಿಮ್ಮಕ್ಕ ನವರ ಹೆಸರು ಉಳಿಸಿ ಎಂದು ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಕೆ ಎಸ್ ಮಂಜಣ್ಣ ಹೇಳಿದ್ದಾರೆ .
ಅವರು ಸೋಮವಾರ ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿಯಲ್ಲಿ ಸಾಲು ಮರದ ತಿಮ್ಮಕ್ಕ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ. ಗ್ರಾಮದ ಪ್ರತಿಯೊಬ್ಬ ಯುವಕರು ತಮ್ಮ ಮನೆಯ ಮುಂದೆ ಒಂದೊಂದು ಸಸಿಯನ್ನು ನೆಟ್ಟು ಶಾಲೆಯ ಆವರಣ ಮತ್ತು ಗ್ರಾಮದ ವಿವಿಧ ಬೀದಿಗಳಲ್ಲಿ ಸಸಿಯನ್ನ ನೆಟ್ಟು ಸಾಲುಮರದ ತಿಮ್ಮಕ್ಕನವರ ಹೆಸರಿಗೆ ಕೀರ್ತಿ ತರುವಾಗಿ ಯುವಕರು ಮುಂಚೂಣಿಯಲ್ಲಿರಬೇಕು ಎಂದರು.
ಇದೆ ವೇಳೆ ತಿಮ್ಮಪ್ಪಯ್ಯನಹಳ್ಳಿ ಪ್ರೌಢಶಾಲೆಯ ಶಿಕ್ಷಕ ಶಿವಕುಮಾರ್ ಮಾತನಾಡಿ. ಬರೆದ ನಾಡು ಇಡೀ ರಾಜ್ಯದಲ್ಲಿ ಅತಿ ಮಳೆ ಕಡಿಮೆ ಬೀಳುವ ಪ್ರದೇಶ ನಮ್ಮ ಚಳ್ಳಕೆರೆ ತಾಲ್ಲೂಕು ಮತ್ತು ನಾಯಕನಹಟ್ಟಿ ಹೋಬಳಿ ಇಂತಹ ಪ್ರದೇಶದಲ್ಲಿ ನೀರಿಗಾಗಿ ತೊಂದರೆ ಕೊಡುವಂತ ಪರಿಸ್ಥಿತಿಯಲ್ಲಿ ನಮ್ಮ ತಿಮ್ಮಪ್ಪನಳ್ಳಿ ಪ್ರೌಢಶಾಲೆಯ ಆವರಣದಲ್ಲಿ ಇಂತಹ ಅಧಿಕಾರಿಗಳು ಬಂದರೂ ಹಸಿರು ಸಸ್ಯಗಳಿಂದ ಕೂಡಿರುವ ಶಾಲೆ ಎಂದು ಕಾಣುತ್ತದೆ ನಿಟ್ಟಿನಲ್ಲಿ ಗ್ರಾಮದ ಯುವಕರು ಈ ದಿನ ಸಾಲುಮರದ ತಿಮ್ಮಕ್ಕ ಚಾರಿಟೇಬಲ್ ಟ್ರಸ್ಟ್ ಮಾಡಿರೋದು ತುಂಬಾ ಸಂತೋಷದ ವಿಷಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಾಲಮ್ಮ ಜಿ ಬೋರಯ್ಯ, ಗ್ರಾಮದ ಮುಖಂಡ ಮರಿಯಪ್ಪ ದೊಡ್ಡ ಪಾಲಯ್ಯ,
ಸಂಘದ ಕಾರ್ಯದರ್ಶಿ ಯಂಗ್ ಸ್ಟಾರ್ ಗ್ರೂಪ್ನ ಸಂಘದ ಅಧ್ಯಕ್ಷ ವೀರೇಶ್ ಮತ್ತು ಉಪಾಧ್ಯಕ್ಷ ದರ್ಶನ್, ಹಾಗೂ ಸರ್ವ ಸದಸ್ಯ ಸಂದೀಪ್, ಜಿ ಬಿ ತಿಪ್ಪೇಶ್, ಜಿ ಎನ್ ತಿಪ್ಪೇಶ್, ಜಿ ಬಿ ನವೀನ್, ದಿನೇಶ್, ಹೇಮಂತ್ ,ಶಂಕರ್, ಪವನ್ ಕುಮಾರ್, ಉಮೇಶ್, ರಾಮು, ಕೆ ಎನ್ ನವೀನ್, ನಾಗ ಜಿ ಟಿ ಶಿವು ,ಇದ್ದರು.