ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ದೊಡ್ಡ ರಥೋತ್ಸವದ ಗಾಲಿ ಪೂಜೆ. ಗುಗ್ಗರಿ ಹಬ್ಬ ಆಚರಣೆ ಮೂಲಕ ಕ್ಷಣಗಣನೆ .
ಶ್ರೀ ಗುರು ತಿರುದ್ರಸ್ವಾಮಿ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ.

ನಾಯಕನಹಟ್ಟಿ:: ಮಧ್ಯ ಕರ್ನಾಟಕದ ನಾಯಕನಹಟ್ಟಿ ಪಟ್ಟಣದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ರಥದ ಗಾಲಿ ಪೂಜೆ ಹಾಗೂ ಗುಗ್ಗರಿ ಹಬ್ಬಕ್ಕೆ ಸೋಮವಾರ ಸಂಭ್ರಮದಿಂದ ಪಟ್ಟಣದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರ ಮಠದಲ್ಲಿ ಗುಗ್ಗರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎಂದು ದೇವಸ್ಥಾನದ ಕಾರ್ಯನಿರ್ವಾಣಾಧಿಕಾರಿ ಎಚ್ ಗಂಗಾಧರಪ್ಪ ಹೇಳಿದ್ದಾರೆ.

ಅವರು ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಗಾಲಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಮಾರ್ಚ್ 26ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ದೊಡ್ಡ ರಥೋತ್ಸವ ಅಂಗವಾಗಿ ಜಾತ್ರೆಯ ಶ್ರೀ ಹಟ್ಟಿ ತಿಪ್ಪೇಶನ ಮೊದಲನೇ ಪೂಜೆ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಸುಮಾರು 5 ಲಕ್ಷ ಭಕ್ತರು ಜಾತ್ರೆಗೆ ಬರುವ ನಿರೀಕ್ಷೆ ಇದೆ ಈಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಹಾಗೂ ಹೊರಮಠದ ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಪಶುಪಾಲಕ ಬೇಸಾಯಗಾರರ ನೆಲ ಮೂಲ ಸಂಸ್ಕೃತಿಯಲ್ಲಿ ಕಂಡುಬರುತ್ತದೆ.
ವಾರ್ಷಿಕ ಜಾತ್ರೆಯ ಆಚರಣೆ ಸಾಕ್ಷಿಯಾಗಿ ಕಂಕಣ ಪೂಜೆ ಮೊದಲ ಸೋಮವಾರ ಗುಗರಿ ಹಬ್ಬವನ್ನು ಆಚರಿಸುವ ಪದ್ಧತಿ ಇದೇ
ಸುಟ್ಟ ಕುರುಳಿನ ಬೂದಿಯನ್ನು ಹೊರಮಠದಲ್ಲಿ ವರ್ಷಪೂರ್ತಿ ಬಳಸಲಾಗುತ್ತದೆ.
ಇನ್ನೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವವನ್ನು ಪಿಡಬ್ಲ್ಯೂಡಿ ಅಧಿಕಾರಿಗಳು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು. ಎಂದರು.

ಈ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವ್ಯವಸ್ಥಾಪನ ಸಮಿತಿ ಸದಸ್ಯ ತಿಪ್ಪೇರುದ್ರಣ್ಣ, ಕಾಂತಣ್ಣ, ಲೋಕಉಪಯೋಗ ಇಲಾಖೆ ವಿಜಯ ಭಾಸ್ಕರ್, ಅಕ್ಕಿಂ, ಗ್ರಾಮದ ಮುಖಂಡರಾದ ದೊರೆ ತಿಪ್ಪೇಸ್ವಾಮಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್. ಪೂಜಾರಿ ರುದ್ರೇಶ್, ಮಹಾಂತಣ್ಣ, ಗುರುಸ್ವಾಮಿ, ನಾಗಣ್ಣ, ವಕೀಲ ನಾಗೇಂದ್ರಪ್ಪ. ಇದ್ದರು

Namma Challakere Local News
error: Content is protected !!