ಚಳ್ಳಕೆರೆ ನ್ಯೂಸ್ : ವಿಶ್ವನಾಯಕ ದೇಶದ ಪ್ರಧಾನಿ ಮಂತ್ರಿ ಮೋದಿಗೆ ಕೀಳು ಮಟ್ಟದ ಅವಹೇಳನಕಾರಿ ಪದ ಬಳಸಿ ಅವಮಾನಿಸಿದ್ದರೆ, ಮಾತನಾಡಲು ಬೇರೆ ಬೇರೆ ವಿಷಯಗಳಿವೆ ಆದರೆ ಅವಹೇಳಕಾರಿ ಪದಬಳಕೆ ಮಾಡಿದ ಕಾರ್ಮಿಕ ಮಂಡಳಿ ಉಪಾಧ್ಯಕ್ಷ ಜಿಎಸ್.ಮಂಜುನಾಥ್ ಕ್ಷೇಮೆಯಾಚಿಸಬೇಕು, ಇಲ್ಲವಾದರೆ ದೇಶÀ ಹಾಗೂ ರಾಜ್ಯಾವ್ಯಾಪ್ತಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಚಳ್ಳಕೆರೆ ಬಿಜೆಪಿ ಮಂಡಲದ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಬಿಜೆಪಿ ಕಛೇರಿಯಲ್ಲಿ ಮುಖಂಡ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್ ರವರು ಮಾತಿನ ಭರಾಟೆಯಲ್ಲಿ ದೇಶದ ಪ್ರಧಾನ ಮಂತ್ರಿಗಳಿಗೆ ಅವಹೇಳನಕಾರಿ ಪದ ಬಳಸಿರುವುದು ಕಾಂಗ್ರೇಸ್ ಪಕ್ಷದ ಸಂಸ್ಕೃತಿ ಎಂತಹದು ಎಂಬುದು ತೋರಿಸುತ್ತದೆ, ಜಿಎಸ್.ಮಂಜುನಾಥ್ ಕ್ಷಮೆಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಅವರು ಕಾರ್ಯಕ್ರಗಳಿಗೆ ತೆರಳದಂತೆ ಮುತ್ತಿಗೆ ಹಾಕಲಾಗುವುದು ಎಂದರು.
ಇನ್ನೂ ನಿಕಟಪೂರ್ವ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಮಂಜುನಾಥ್(ಎವಿಬಿಪಿಮAಜು) ಮಾತನಾಡಿ, ಬಿಜೆಪಿ ಯೋಜನೆಗಳನ್ನು ನೋಡಿ ಸಹಿಸಿಕೊಳ್ಳದೆ ಕಾಂಗ್ರೇಸ್ ನವರು ಇಂತಹ ಹೇಳಿಕೆಗಳನ್ನು ನೀಡಿ ಅವರ ಸಂಸ್ಕೃತಿ ಎಂತಹದು ಎಂಬುದು ತೋರಿಸಿಕೊಳ್ಳುತ್ತಾರೆ, ಮೊದಲು ಮನೆಯ ಯಜಮಾನವರು ಸರಿ ಇರಬೇಕು, ಅದರಂತೆ ರಾಷ್ಟçಪತಿ ದ್ರೌಪದಿ ಮುರ್ಮರವರನ್ನು ಏಕವಚನದಲ್ಲಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿಗಳ ಹಾದಿಯಲ್ಲಿ ಅವರ ಕಾರ್ಯಕರ್ತರು ಇತರನಾದ ಹೇಳಿಕೆಗಳು ನೀಡುತ್ತಾರೆ, ಮುಂದಿನಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಕಿಡಿಕಾರಿದರು.

ಇದೇ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್, ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಜೈಪಾಲಯ್ಯ, ನಿಕಟಪೂರ್ವ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಂಜುನಾಥ್ (ಎವಿಬಿಪಿ ಮಂಜು), ಈಶ್ವರ ನಾಯಕ, ಜಗದಾಂಭ, ಹೊಸಮನೆ ಮನೋಜ್, ತಿಪ್ಪೆಸ್ವಾಮಿ, ಹೊಟ್ಟೆಪನಹಳ್ಳಿ ಕಾಂತರಾಜ್, ಇತರರು ಇದ್ದರು.

About The Author

Namma Challakere Local News
error: Content is protected !!