ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಚಳ್ಳಕೆರೆಮ್ಮ ಜಾತ್ರೆ
ಮಾ11.ರ ಇಂದಿನಿAದ ಪ್ರಾರಂಭ
ರಾಮಾAಜನೇಯ.ಕೆ ಚನ್ನಗಾನಹಳ್ಳಿ
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಚಳ್ಳಕೆರಮ್ಮ ಜಾತ್ರೆ ಈ ಭಾಗದ ಬುಡಕಟ್ಟು ಸಂಸ್ಕೃತಿಯ ಪ್ರತೀಕ ವಾಗಿದ್ದಾಳೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾಗಿ ಹೊರಹೊಮ್ಮಿದ ಈ ದೇವಿ ಜಾತ್ರೆಗೆ ವಿಶೇಷವಾಗಿ ಭಕ್ತಿ ಭಾವದಿಂದ ಈ ಭಾಗದಲ್ಲಿ ಜನರು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇವಿ ಜಾತ್ರೆ ನಡೆಯುತ್ತದೆ.
ಇನ್ನೂ ಈ ಚಳ್ಳಕೆರಮ್ಮ ದೇವಿ ಕರ್ನಾಟಕ ರಾಜ್ಯವಲ್ಲದೆ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ಈ ದೇವಿಯ ಆರಾಧಕರಾಗಿದ್ದಾರೆ.
ಚಳ್ಳಕೆರೆ ಮೊದಲಿಗೆ ಕುಗ್ರಾಮವಾಗಿದ್ದು ಈ ಗ್ರಾಮಕ್ಕೆ ದೊಡ್ಡೆರಿ ತಾಲ್ಲೂಕು ಕೇಂದ್ರವಾಗಿತ್ತು. 1881-82ರಲ್ಲಿ ಮೈಸೂರು ಮಹಾರಾಜರು ಚಳ್ಳಕೆರೆಯನ್ನು ತಾಲ್ಲೂಕು ಕೇಂದ್ರವನ್ನಾಗಿ ಬದಲಾಯಿಸಿದರು ಎಂಬುದಾಗಿದೆ.
ಮೈಸೂರು ಅರಸರ ಕಾಲದಲ್ಲಿ ದೊಡ್ಡೆರಿ ಮತ್ತು ಚಳ್ಳಕೆರೆಯಲ್ಲಿ ಕಾಗದ ಮತ್ತು ಬಳೆ ತಯಾರಕ ಘಟಕವನ್ನಾಗಿಸಿದ್ದರು. ಈ ಕಾಗದದ ಅಳತೆಗಳು ‘ಗಜ’ ಎಂದು ಹೆಸರಿತ್ತು ಎಂದು ಪುರಾಣ ಪುಸ್ತಕಗಳಲ್ಲಿ ಉಲ್ಲೇಖವಿದೆ. ಚಳ್ಳಕೆರೆಗೆ ಪುರಾತನ ಹೆಸರು ಓರಗಲ್ಲು (‘ಪಟ್ನ’) ಎಂದು ಹೆಸರು ಇತ್ತು ಎಂಬ ಐತಿಹ್ಯ ಇದೆ, ಓರಗಲ್ಲು ರಾಜಾಪರಶುರಾಮನಾಯಕರು ದೊಡ್ಡೇರಿಯಲ್ಲಿ ಆಡಳಿತವನ್ನು ನಡೆಸುತಿದ್ದರು. ಆ ಸಂದರ್ಭದಲ್ಲಿ ದೇವಿ ಬಂದು ನೆಲೆನಿಂತಿದ್ದಳು ಎಂಬುದಾಗಿ ಸ್ಥಳಿಯರ ಅಭಿಪ್ರಾಯದಂತೆ, ಅ ಸಂದರ್ಭದಲ್ಲಿ ಓರಗಲ್ಲು ಪಟ್ನ ಈಗೀನ (ಚಳ್ಳಕೆರೆ)ಗೆ ಬಂದು ಇಲ್ಲಿಯೇ ನೆಲೆಸಿದಳು ಎಂಬುದು ಪ್ರತಿತ್ಯ.
ನಗರದಲ್ಲಿ “ಓರಗಲ್ಲು” ಎಂಬ ಹೆಸರಿನೊಂದಿಗೆ ವಾಡಿಕೆ ಇದೇ ಈ ದೇವರ ಹೆಸರನ್ನೇ ಸಂಕ್ಷಿಪ್ತವಾಗಿ ಕಲ್ಲುಕೆರಿ. ಚಲ್ಲಕೆರೆ, ಚಲಕಾರಿ, ಚಳಕೆರಿ, ಚಳ್ಳಕೆರೆ ಎಂದು ಹೆಸರು ಬಂದಿದೆ. ಈ ಹೆಸರು 16ನೇ ಶತಮಾನದ ಇತಿಹಾಸದಲ್ಲಿ ಕಂಡುಬರುತ್ತದೆ.
ಇತಿಹಾಸದಲ್ಲಿ ಈ ಸ್ಥಳವನ್ನು ಮಗಧ ಸಾಮ್ರಾಜ್ಯದ ನಂದರು ಆಳಿರುವುದು ಎಂದು ವಿದ್ವಾಂಸರು ಹೇಳುತ್ತಾರೆ. ನಂತರ ಮೌರ್ಯರು ಆಡಳಿತಕ್ಕೆ ಒಪಟಿತ್ತು, ಇದು ಸಾಮ್ರಾಟ್ ಅಶೋಕನ ಆಡಳಿತಕ್ಕೆ ಒಳಪಟ್ಟಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಇಂದಿಗೂ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕಂಡು ಬರುವ ಕುರುಹುಗಳು ಸಾಕ್ಷಿಯಾಗಿವೆ. ಇದಕ್ಕೆ ಗುರುತಾಗಿ ಸಿದ್ದಾಪುರದಲ್ಲಿರುವ ಅಶೋಕನ ಶಾಸಕ, ಕುಂತಳ ಸ್ವಾಮಿಗಳ ಕೆರೆಗೆ ಕನ್ನಡಿಗಾರಾದ ಶಾತವಾಹನನರು ಆಳುತ್ತಿದ್ದರು ಇದು ಕುಂತಳ ಸೀಮೆಗೆ ಸೇರಿತ್ತು. ಕದಂಬರ ಮಯೂರ ಶರ್ಮನ ರಾಜಾಧಾನಿಗಳಲ್ಲಿ ಒಂದು ಚಂದ್ರವಳ್ಳಿ ಇದು ಚಿತ್ರದುರ್ಗದಲ್ಲಿದೆ.
ಚಳ್ಳಕೆರೆಯೂ ಸಹ ಮಯೂರ ಶರ್ಮನ ಆಡಳಿತಕ್ಕೆ ಸೆರಿತ್ತು. ಎನ್ನುವುದಕ್ಕೆ ಚಿತ್ರದುರ್ಗದ ಮಯೂರಶರ್ಮನ ಶಿಲಾಶಾನವೇ ಸಾಕ್ಷಿ. ಕಂದಬರ ನಂತರ ಚಾಲುಕ್ಯರು ರಾಷ್ಟçಕೂಟರು, ಪಲ್ಲವರು, ಚೊಳರು ಇವರು ಗುರುತು ಪಿ.ಮಹದೆವಪುರ, ಕಸವಿಗೊಂಡAನಹಳ್ಳಿ, ಓಳಾಪುರ, ದೊಡ್ಡ ಉಳ್ಳಾರ್ತಿ, ಚೌಳೂರುಗಳಲ್ಲಿರುವ ಶಿಲಾಶಾಸನಗಳು. 13ನೇ ಶತಮಾನದಲ್ಲಿ ಹೊಯ್ಸಳರ ಆಡಳಿತಕ್ಕೆ ಸೇರಿತ್ತು, ಆಗ ಅವನ ಸಾಮಂತ ಗದ್ದಿನೊಳಂಬ ಚಳ್ಳಕೆರೆ ಸುತ್ತಲು ಪ್ರದೇಶವನ್ನು ನೊಳಂಬವಾಡಿ ಮೂವ್ತತೆರಡು ಸಾವಿರ ಎಂದು ಕರೆಯುತ್ತಿದರು.
14ನೇ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಸೇರಿತ್ತು. 15 ನೇ ಶತಮಾನ ನಂತರ ಚಿತ್ರದುರ್ಗ ಪಾಳೇಗರರ ಆಡಳಿತಕ್ಕೆ ಸೇರಿತ್ತು. ದೊಡ್ಡೆರಿ ಅಂದು ಗಡಿ ಠಾಣೆ, ಠಾಣಾಧಿಕಾರಿ ಕಾಮಗೇತುಲು ವಂಶಸ್ಥ ಕಾಟಪ್ಪನಾಯಕ. ಕಾಟಪ್ಪನಾಯಕರ ಮಗನೇ ಹಿರೇಮದಕರಿನಾಯಕ ಕಾಟಪ್ಪನಾಯಕರು ವಾಸಿದ ಸ್ಥಳ ಹಾಗೂ ಅವರ ಹೆಸರಿನಲ್ಲಿಯೆ ಇರುವ ಇಂದಿನ ಕಾಟಪ್ಪನಹಟ್ಟಿ ಇಲ್ಲಿಯೆ ಚಿಕ್ಕದಾದ ಕೋಟೆಯ ಕೊತ್ತಲವು ಸಹ ಚಳ್ಳಕೆರೆ ನಗರದ ಈಶಾನ್ಯದಲ್ಲಿದೆ. ಕಾಟಪ್ಪನಾಯಕರ ಮನೆತನದವರೇ ಹಿರೇ ಮದಕರಿನಾಯಕನ ವಂಶಸ್ಥರು. ಇಂದಿಗೂ ಕಾಟಪ್ಪನಹಟ್ಟಿಯಲ್ಲಿ ಇರುವವರು 1 ಗೋಪಾಲಸ್ವಾಮಿ ನಾಯಕ 2. ಪರಶುರಾಮನಾಯಕ 3. ರಾಮಸ್ವಾಮಿನಾಯಕ 4.ರಾಜಣ್ಣನಾಯಕ 5.ವೀರಭದ್ರನಾಯಕ 6.ಗೋಪಾಲಸ್ವಾಮಿನಾಯಕ ಇವರು ಉಪಳೇಗಾರಾರ ಮನೆತನದವರು.
ಶ್ರೀಚಳ್ಳಕೆರೆಮ್ಮನವರ ದೇವಸ್ಥಾನ ದೊಡ್ಡಮದಕರಿ ನಾಯಕರ ಕಾಲದಲ್ಲಿಯೇ ಕಟ್ಟಲ್ಪಟ್ಟಿದೆ ಎನ್ನಲಾಗಿದೆ. ಚಳ್ಳಕೆರಮ್ಮ ಮೊದಲಿಗೆ ದೊಡ್ಡೆರಿಯಲ್ಲಿ ನೆಲೆ ನಿಂತಿದ್ದಳು ಎಂಬ ಪ್ರತೀಕ ವಿಷಯ. ಶೀ ರಾಮ ಮಂದಿರದ ಆವರಣದಲ್ಲಿ ಹಸಿರು ಗ್ರಾನೈಟ್ ಕಲ್ಲಿನ ಶಿಲಾಶಸನ, ಸೂಯ್ದೇವರ ರಥದ ಗೇಲಿಯಾಕೃತಿಯಲ್ಲಿ ಪಾದಗಳ ಶಿಲೆ, ಸ್ವಸ್ತಿಶೀ ಅಂಕಯ್ಯನ ಅವಲಬ್ಬೆಯ ಮಗಳ ಜಾವಲಬ್ಬೆಯ ಮಾಡಿದ ದಾವಂತಿ ಅದಿತ್ಯ – ನನ್ಹಿಮ ಹೀಗೆ ಹಲವಾರು ಶಾಸನಗಳು ಚಳ್ಳಕೆರೆಯಮ್ಮನ ಬಗ್ಗೆ ಇತಿಹಾಸವನ್ನು ಹೇಳುತ್ತಿವೆ.
14 ನೇ ಶತಮಾನದಲ್ಲಿ ವಿಜಯ ನಗರದ ರಾಜಗುರುಗಳಾದ ವ್ಯಾಸತೀರ್ಥರಿಂದ ಪ್ರತಿಷ್ಠಾಪಿಸಿದ ಸಂಜಿವರಾಯಸ್ವಾಮಿ ಕನ್ನೇಹಳ್ಳಿಯಲಿ ಇದನ್ನು ಮಧ್ವಾರ್ಚಾರು ಪ್ರಾತಿಷ್ಠಾಪಿಸಿದರು ಎಂಬುದು ಇದು 110 ರಿಂದ 115 ವರ್ಷಗಳ ಹಿಂದಿನ ಮಾತು.
ಇದೇ ಸಿಧ್ದಾರಾಮೇಶ್ವರ ಗುಡಿ ಬೀದಿಯಲ್ಲಿರುವ ಆಂಜನೇಯಸ್ವಾಮಿ ದೇವಸ್ವಾನ. ಚಳ್ಳಕೆರೆಗೆ ಮಹಾನ್ ಪವಾಡ ಪುರುಷ ನಾಯಕನಹಟ್ಟಿ ಶೀ ಗುರು ತಿಪ್ಪೇರುದ್ರಸ್ವಾಮಿ ಯವರು ಅನೇಕ ಸಲ ಬಂದು ಹೋದುದಾಗಿ ಐತಿಹ್ಯಯವಿದೆ ಈತನ ಸಮಕಾಲೀನ ಪವಾಡಪುರುಷ ಶೀ ಜಗಲೂರಜ್ಜ ಈತನ ಗದ್ದುಗೆ ಚಳ್ಳಕೆರೆ ರಸ್ತೆಯಲ್ಲಿರುವ ಈಶ್ವರನ ದೇವಾಸ್ವಾನವನ್ನು ತಮ್ಮೆನಹಳ್ಳಿ ಈಶ್ವರ ಎಂದು ಕರೆಯುತ್ತಾರೆ.
17ನೇ ಶತಮಾನದ ಅಂತ್ಯ ಭಾಗದಿಂದಲೂ ಚಳ್ಳಕೆರೆಯಲ್ಲಿ ಮುಸ್ಲಿಂ ಜನಾಂಗದವರು ಇದ್ದುದಾಗಿ ತಿಳಿದು ಬಂದಿದೆ. ಈ ಸಮಕಾಲೀನ ಸಂತ ಗರೀಬ್ ಸಾಹೇಬ್ರವರ ದರ್ಗಾವು ಚಳ್ಳಕೆರೆ ಗೆ ಮೂರು ಮೈಲಿ ದೂರವಿದ್ದು ಅದನ್ನು ಈಗ ಹಂತ ಹಂತವಾಗಿ ಆ ಸ್ಥಳದಲ್ಲಿ ದರ್ಗಾದ ಸುತ್ತಾಲೂ ಕಟ್ಟಡವನ್ನು ಕಟ್ಟಿರುತ್ತಾರೆ ಅನೇಕ ಕಡೆಗಳಿಂದ ಭಕ್ತಾದಿಗಳು ಬಂದು ಶೀ ಹಜರತ್ ದರ್ಗಾದ ದರ್ಶನವನ್ನು ಪಡೆಯುತ್ತಾರೆ. ವರ್ಷಕ್ಕೋಮ್ಮೆ ಸಿ.ಹಜರತ್ ದರ್ಗಾದವತರ ‘’ಉರುಸ್’’ ಕಾರ್ಯಕ್ರಮವನ್ನು ಮತಭೇದವಿಲ್ಲದೆ ಆಚರಿಸುತ್ತಾರೆ.
18ನೇ.ಶತಮಾನದಲ್ಲಿ ಬಿಜಾಪುರದ ಕಡೆಯವೆರದ ಚಳ್ಳಕೆರೆಗೆ ಜೈನರು ವ್ಯಾಪಾರ ವಹಿವಾಟುಕ್ಕಾಗಿ ಬಂದು ನೆಲೆಸಿದವರು ಅವರೇ ಅಂಬಣ್ಣನವರು ಅವರು ಇದೇ ಶತಮಾನದ ಆದಿಯಲ್ಲಿ ಪದ್ಮಾವತಿ ದೇವಾಸ್ವಾನವನ್ನು ಸಹ ಕಟ್ಟಿಸಿದರು. 1968 ರಲ್ಲಿ ಜೈನ ಸಮಾಜದವರು ಪಾಶ್ವಾನಾಥ ದೇವಸ್ವಾನವನ್ನು ಕಟ್ಟಿಸಿರಬಹುದು ಎಂದು ಹೇಳಲಾಗಿದೆ.
ಹೇಳಿಕೆ :
1.ಆರು ದಿನಗಳ ಕಾಲ ನಡೆಯುವ ಚಳ್ಳಕೆರಮ್ಮ ದೇವಿ ಜಾತ್ರೆಗೆ ರಾಜ್ಯವಲ್ಲದೆ ಹೊರ ರಾಜ್ಯದ ಭಕ್ತರು ಆಗಮಿಸಿ ದೇವಿಕೃಪೆಗೆ ಪಾತ್ರರಾಗುತ್ತಾರೆ, ಸಿಡಿ ಉತ್ಸವ ಈ ಜಾತ್ರೆಗೆ ವಿಶೇಷತೆ, ಸುಮಾರು ಲಕ್ಷಾಂತರ ಭಕ್ತರು ಈ ಸಂಧರ್ಭದಲ್ಲಿ ಆಗಮಿಸಿ ಉತ್ಸವಕ್ಕೆ ಭಾಗಿಯಾಗುತ್ತಾರೆ.
–ಪಿ.ತಿಪ್ಪೆಸ್ವಾಮಿ, ಸಾಹಿತಿಗಳು ಚಿಂತಕರು
2.ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಚಳ್ಳಕೆರಮ್ಮ ದೇವಿಗೆ ಲಕ್ಷಾಂತರ ಭಕ್ತರು ತಮ್ಮ ಭಕ್ತಿ ಭಾವದಿಂದ ಆರಾಧಿಸುತ್ತಾರೆ, ಅದರಂತೆ ಇದೇ ಮಾ.11ರಿಂದ ಪ್ರಾರಂಭವಾಗುವ ಜಾತ್ರೆಗೆ ಆರು ದಿಗನಗಳ ಕಾಲ ಮಾ.16ರವರೆಗೆ ನಡೆಯುತ್ತದೆ, ಆದ್ದರಿಂದ ಈ ದೇವಿಗೆ ಲಜಾತ್ರೆಗೆ ಭಕ್ತರು ಹೆಚ್ಚಿನದಾಗಿ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಾರ್ಥಿಸುತ್ತೆನೆ.
–ಶಾಸಕ ಟಿ.ರಘುಮೂರ್ತಿ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರು.