ಚಳ್ಳಕೆರೆ ನ್ಯೂಸ್ : ಬಹುಜನ ಸಮಾಜ ಪಾರ್ಟಿ-ಕರ್ನಾಟಕ ರಾಜ್ಯ ಘಟಕದ ವತಿಯಿಂದ ರಾಜ್ಯದ 4 ವಿಭಾಗ ಮಟ್ಟದ
ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ, ಅದರಂತೆ ಮಾರ್ಚ 9 ರಂದು ಬೆಂಗಳೂರಿನ ದೇವನಹಳ್ಳಿ ಯಲ್ಲಿ ನಡೆಯಲಿದ್ದು ಚಿತ್ರದುರ್ಗ ಜಿಲ್ಲೆಯ ಸುಮಾರು ಒಂದು ಸಾವಿರ ಜನರು ಭಾಗವಹಿಸುವರು ಎಂದು ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ಬಹುಜನರ ನಡಿಗೆ-ಪಾರ್ಲಿಮೆಂಟಿನ ಕಡೆಗೆ ಎಂಬ ಘೋಷಣೆಯೊಂದಿಗೆ ನಡೆಯಲಿರುವ ಈ ಸಮಾವೇಶಗಳಲ್ಲಿ ಇದೂವರೆಗೂ ದೇಶವಾಳಿದ ಕಾಂಗ್ರೇಸ್ ಮತ್ತು ಬಿಜೆಪಿ ಇತರ ಪಕ್ಷಗಳು ಸಂವಿಧಾನವನ್ನು ಹೇಗೆ ದುರ್ಬಲಗೊಳಿಸಿದ್ದಾರೆಂಬುದನ್ನು ಮನವರಿಕೆ ಮಾಡಿಕೊಡಲು ಈ ಕುರಿತು ಪಕ್ಷದ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು
ಸಜ್ಜುಗೊಳ್ಳಿಸಲು ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೆ ಸಂವಿಧಾನ ಸಂರಕ್ಷಣೆಯ ಬಿಎಸ್ ಪಿಯಿಂದ ಮಾತ್ರ ಸಾಧ್ಯ. ಹಾಗಾಗಿ ಬಿಎಸ್ಸಿ ಅಭ್ಯರ್ಥಿಗಳು ಗೆದ್ದು ಪಾರ್ಲಿಮೆಂಟ್‌ಗೆ ಹೋಗಬೇಕಾಗಿರುವ ಅನಿವಾರ್ಯತೆ ಇದೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷೆ ಲಕ್ಷ್ಮಕ್ಕ, ಶ್ರೀನಿವಾಸ್, ಬಾಲರಾಜ್ ಇತರರು ಇದ್ದರು.

About The Author

Namma Challakere Local News
error: Content is protected !!