ಚಳ್ಳಕೆರೆ : ಮಾರ್ಚ್ 8, 2024 “ಮಹಿಳೆಯರಲ್ಲಿ ಹೂಡಿಕೆ ಮಾಡಿ ಪ್ರಗತಿಯನ್ನು ವೇಗಗೊಳಿಸಿ” ಎಂಬ ಶೀರ್ಷಿಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಸದೃಢ ಸಮಾಜಕ್ಕೆ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಸದೃಢಳನ್ನಾಗಿ ಮಾಡುವುದು ಅತೀ ಅವಶ್ಯಕ.
“ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು”, “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಹೀಗೆ ಸಮಾಜದಲ್ಲಿ ಮಹಿಳೆಯ ಪಾತ್ರ ಅತಿ ಪ್ರಭಾವಶಾಲಿಯಾಗಿದೆ. ಮಗುವಿಗೆ ಕುಟುಂಬ ಸದಸ್ಯರು, ಪರಿಸರವನ್ನು ಪರಿಚಯಿಸುವುದಲ್ಲದೆ, ಮಗುವಿನಲ್ಲಿ ಮೌಲ್ಯಗಳನ್ನು ಬೆಳೆಸುತ್ತಾ ತಾಯಂದಿರು ತಮ್ಮ ಮಕ್ಕಳಿಗೆ ಸರಿಯಾದ ಮೌಲ್ಯಗಳೊಂದಿಗೆ ಶಿಕ್ಷಣ ನೀಡಬೇಕು. ಬಾಲ್ಯದಿಂದಲೇ ಮಕ್ಕಳಿಗೆ ವೃತ್ತಿ ಪ್ರಜ್ಞೆ ಮೂಡಿಸುವ ಬದಲು ಉತ್ತಮ ಮನುಷ್ಯರಾಗಲು ಪ್ರೇರೇಪಿಸಬೇಕು. ಹಣವು ಏಕೈಕ ಆದ್ಯತೆಯಾಗಲು ಬಿಡಬಾರದು. ಮಹಿಳೆ ಮನಸ್ಸು ಮಾಡಿದರೆ ಮಾತ್ರ ಆದರ್ಶ ಕುಟುಂಬ ನಿರ್ಮಾಣವಾಗುತ್ತದೆ. ಸಮಾಜದ ಸ್ವರೂಪವು ಸ್ವಯಂ ಚಾಲಿತವಾಗಿ ಬದಲಾಗುತ್ತದೆ, ಮೌಲ್ಯಾದರಿತ ಸಮಾಜವಾಗಬಹುದು.
ವಾರ್ಷಿಕವಾಗಿ ಮಾರ್ಚ್ 8ರಂದು ಮಹಿಳಾ ಹಕ್ಕುಗಳ ಚಳುವಳಿಯ ಕೇಂದ್ರಬಿAದುವಾಗಿ ಆಚರಿಸಲಾಗುವ ಪ್ರಜಾದಿನವಾಗಿದೆ. ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಮಹಿಳೆಯರ ವಿರುದ್ಧ ಹಿಂಸೆ ಮತ್ತು ನಿಂದನೆ ಅಂತಹ ಸಮಸ್ಯೆಗಳಿಗೆ ಗಮನವನ್ನು ನೀಡುತ್ತದೆ. ಸಾರ್ವತ್ರಿಕ ಮಹಿಳಾ ಮತದಾನದ ಆಂದೋಲನದಿAದ ಉತ್ತೇಜಿತವಾದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ, 20ನೇ ಶತಮಾನದ ಆರಂಭದಲ್ಲಿ ಉತ್ತರ ಅಮೆರಿಕ ಮತ್ತು ಯುರೋಪ್ನಲ್ಲಿ ಕಾರ್ಮಿಕ ಚಳುವಳಿಗಳಿಂದ , 1857 ರಂದು ನ್ಯೂಯಾರ್ಕ್ ನಲ್ಲಿ ಮಹಿಳಾ ಗಾರ್ಮೆಂಟ್ ಕಾರ್ಮಿಕರು ಪ್ರತಿಭಟನೆಯನ್ನು ಸ್ಮರಿಸುವ ದಿನವಾಗಿ ಎಂದು ಹೇಳಲಾಗುತ್ತದೆ. ಜರ್ಮನಿಯ ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ಸಮರ್ಪಿತವಾದ ದಿನವಾಗಿದೆ.
ಯುನೈಟೆಡ್ ಸ್ಟೇಟ್ ನಲ್ಲಿ ಅಧ್ಯಕ್ಷ ಬರಾಕ್ ಒಬಾಮಾ, ಮಾರ್ಚ್ 2011ನ್ನು ಮಹಿಳಾ ಇತಿಹಾಸದ ತಿಂಗಳು ಎಂದು ಘೋಷಿಸಿದರು. ಆಸ್ಟ್ರೇಲಿಯಾ 100ನೇ ಮಹಿಳಾ ದಿನಾಚರಣೆಯ ವಾರ್ಷಿಕೋತ್ಸವ ಸ್ಮರಣಾರ್ಥವಾಗಿ , 20 ಸೆಂಟ್ ನಾಣ್ಯವನ್ನು ಬಿಡುಗಡೆ ಮಾಡಿತು. ಅಮೆರಿಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಶಸ್ತಿಯೊಂದಿಗೆ, ಹಸಿವು ಮತ್ತು ಬಡತನದ ವಿರುದ್ಧ ಹೋರಾಟ ಮಾಡಿ ಬದಲಾವಣೆ ಮಾಡಿದ ಮಹಿಳೆಯನ್ನು ಗೌರವಿಸುವ ಮೂಲಕ ಮಹಿಳೆಯರ ಜೀವನದಲ್ಲಿ ಸ್ಪೂರ್ತಿ ಮೂಡಿಸಿದ್ದಾರೆ. ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಜೈಲಿನಲ್ಲಿರುವ ಮಹಿಳೆಯ ದುಷ್ಥಿತಿಯ ಬಗ್ಗೆ ಗಮನ ಸೆಳೆದರೆ, ಏರ್ ಇಂಡಿಯಾ ಸಂಸ್ಥೆ 2016ರಲ್ಲಿ ಸಂಪೂರ್ಣ ವಿಮಾನ ಕಾರ್ಯಾಚರಣೆಯನ್ನು ಮಹಿಳೆಯರೇ ನಿರ್ವಹಿಸಲು ಅವಕಾಶ ನೀಡುವ ಮೂಲಕ ಮಹಿಳೆಯರಲ್ಲಿ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತಾ ಬಂದಿದ್ದಾರೆ.
” ಒಂದು ಭರವಸೆ, ಮಹಿಳೆಯ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸುವ ಕ್ರಮಕ್ಕಾಗಿ ಸಮಯ”, “ಸಮಾನವಾಗಿ ಯೋಚಿಸಿ, ಬದಲಾವಣೆಗಾಗಿ ಆವಿಷ್ಕಾರ ಮಾಡಿ”, ” ಆigiಣ ಂಟಟ, ಲಿಂಗ ಸಮಾನತೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ”, ” ಸುಸ್ಥಿರ ನಾಳೆ ಗಾಗಿ ಇಂದು ಲಿಂಗ ಸಮಾನತೆ”, “ನಾಯಕತ್ವದಲ್ಲಿ ಮಹಿಳೆಯರು ಕೋವಿಡ್ 19 ಜಗತ್ತಿನಲ್ಲಿ ಸಮಾನ ಭವಿಷ್ಯವನ್ನು ಸಾಧಿಸುವುದು” , ಎಂಬ ಶೀರ್ಷಿಕೆಗಳೊಂದಿಗೆ ಮಹಿಳೆಯನ್ನು ಸಬಲೀಕರಣ ಗೊಳಿಸುವಲ್ಲಿ ಸರ್ಕಾರಗಳು ವಿಶ್ವದಾದ್ಯಂತ ಪ್ರಯತ್ನಿಸುತ್ತಿವೆ.
ಭಾರತದ ಪ್ರಾಚೀನ ಸಂಸ್ಕೃತಿಯ ಹಿರಿಮೆಯನ್ನು ಸಮರ್ಥಿಸುವ ಹಲವಾರು ಅಂಶಗಳಲ್ಲಿ ಮಹಿಳೆಯರಿಗೆ ಗೌರವಾನ್ವಿತ ಸ್ಥಾನ ನೀಡಲಾಗಿದೆ . “ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ದೇವರುಗಳು ನೆಲೆಸುತ್ತಾರೆ “ಎಂದು ಮಹಾನ್ ಕಾನೂನು ನೀಡುವ ಮನು ಬಹಳ ಹಿಂದೆಯೇ ಹೇಳಿದ್ದಾರೆ. ಯಾವುದೇ ಧಾರ್ಮಿಕ ವಿಧಿಗಳಿಗೆ ಪತ್ನಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಹೆಂಡತಿಯನ್ನು ಸೂಕ್ತವಾಗಿ “ಅರ್ಧಾಂಗಿ” ಎಂದು ಕರೆಯುವುದರ ಮೂಲಕ ಪುರುಷರಿಗೆ ಸಮಾನ ಸ್ಥಾನಮಾನವನ್ನು ಮಹಿಳೆಗೆ ನೀಡಲಾಗಿತ್ತು.
ಇತಿಹಾಸದಲ್ಲಿ ಮುಸ್ಲಿಮರ ಅವಧಿಯಲ್ಲಿ ಮಹಿಳೆಯರು ಪುರುಷರ ಸಮಾನತೆಯ ವಂಚಿತರಾಗಿದ್ದರು, ರಜಿಯಾ ಸುಲ್ತಾನ ಭಾರತದ ಇತಿಹಾಸದಲ್ಲಿ ಮೊದಲ ದೆಹಲಿ ಸುಲ್ತಾನರ ಏಕೈಕ ಮುಸ್ಲಿಂ ಆಡಳಿತ ಆಡಳಿತಗಾರ್ತಿಯಾಗಿ ಹೊರಹೊಮ್ಮಿದ್ದು ಅವರ ತಂದೆ ಇಲ್ತಮಿಷ್ ಅವರ ಮಾರ್ಗದರ್ಶನದಲ್ಲಿ. ರಾಜಾರಾಮ್ ಮೋಹನ್ ರಾಯ್ ಮಹಿಳೆಯನ್ನು ಪುರುಷರಿಗೆ ಅಧೀನಗೊಳಿಸುವುದರ ವಿರುದ್ಧ, ಸತಿ ಪದ್ಧತಿಯ ವಿರುದ್ಧ ಹೋರಾಡಿದರು . ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಮೇಲೆ ಬ್ರಿಟಿಷರ ಪ್ರಭಾವ ಹಾಗೂ ಮಹಾತ್ಮ ಗಾಂಧೀಜಿಯವರ ಪ್ರಬುದ್ಧ ನಾಯಕತ್ವದಲ್ಲಿ ಮಹಿಳೆಯರು ಮುಸುಕು ತ್ಯಜಿಸಿ ತಮ್ಮ ಮನೆಗಳಿಂದ ಹೊರಬಂದು ಸ್ವಾತಂತ್ರ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಸಾವಿತ್ರಬಾಯಿ ಪುಲೆ ಮಹಿಳೆಯರಲ್ಲಿ ಶೈಕ್ಷಣಿಕ ಅರಿವನ್ನು ಮೂಡಿಸುವುದರ ಮೂಲಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಬ್ರಿಟಿಷ್ ಸರ್ಕಾರ ಗೌರವಿಸಿತು

ದೇಶಕ್ಕಾಗಿ ಹೋರಾಡಿದ ವೀರ ವನ್ನತಿಯರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪ್ರತಿನ ಸಾಧಕಿಯರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ದೇಶ. ಇತಿಹಾಸದ ಪುಸ್ತಕಗಳಲ್ಲಿ ಓದಿರುವ ಹಾಗೆ ಸ್ವತಂತ್ರ ಹೋರಾಟದಲ್ಲಿ ಅಮೋಘ ಸಾಧನವಹಿಸಿದ್ದು ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ ಅವರಿಂದ ಹಿಡಿದು ಮದರ್ ತೆರೇಸಾ ,ಅನುಸೂಯಾ ಸಾರಾಭಾಯಿ, ಕಮಲಾದೇವಿ ಚಟ್ಟೋಪಾಧ್ಯಾಯರು ಸಮಾಜ ಸೇವಕಿಯರಾಗಿರಬಹುದು ಅಥವಾ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಚಾಪೂ ಮೂಡಿಸಿರುವ ಬಾಕ್ಸರ್ ಮೇರಿ ಕೂಮ್ , ಟೆನಿಸ್ ನ ಸಾನಿಯಾ ಮಿರ್ಜಾ, ಕ್ರಿಕೆಟ್‌ನ ಮಿತಾಲಿ ರಾಜ್, ಬ್ಯಾಟ್ಮಿಟನ್ ಸೈನಾನಿಹಾಲ್, ಪಿವಿ ಸಿಂಧು ಹಾಗೂ ಇತರ ಅನೇಕ ಕ್ರೀಡಾಪಟುಗಳನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ ವಿಜ್ಞಾನ ಕ್ಷೇತ್ರದಲ್ಲಿ ಮಂಗಳನಾರ್ಲಿಕರ್, ಪರಮ್ಯಿತ ಖುರಾನ, ನಂದಿನಿ ಹರಿನಾಥ , ಕಲ್ಪನಾ ಚಾವ್ಲಾ ರಂತಹ ಅಪ್ರತಿಮ ಮಹಿಳೆಯರ ಬಗ್ಗೆ ನಾವು ತಿಳಿದಿದ್ದೇವೆ. ಅಷ್ಟೇ ಅಲ್ಲದೆ ಸಾಹಿತ್ಯ ,ರಾಜಕೀಯ, ಸಿನಿಮಾ ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಅಗಣ್ಯ. ಸರೋಜಿನಿ ನಾಯ್ಡು ಅವರು ಭಾರತದ ಗಾನಕೋಗಿಲೆಯಾಗಿ ಪ್ರಸಿದ್ಧಿಯಾಗಿದ್ದರು . ಇಂದಿರಾಗಾAಧಿ ಮೊದಲ ಮಹಿಳಾ ಪ್ರಧಾನಿಯಾಗಿ , ಸುಚೇತನ ಕೃಪಲಾನಿ ಮೊದಲ ಮಹಿಳಾ ಮುಖ್ಯಮಂತ್ರಿ ಆಗಿ ಗಮನಸೆಳೆದಿದ್ದರು . ಇವರೆಲ್ಲರೂ ಭವಿಷ್ಯದ ಸಾಧನೆಯ ಹಾದಿಯಲ್ಲಿರುವ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ.

ವರದಿ: ಶಾಂತ ಕುಮಾರಿ ಬಿ.ಉಪನ್ಯಾಸಕರು

About The Author

Namma Challakere Local News
error: Content is protected !!